ಕೊರೊನಾ ಅಪ್ಡೇಟ್ಸ್‌: ಒಂದೇ ದಿನ 10 ಲಕ್ಷ ಮಂದಿಗೆ ಪರೀಕ್ಷೆ, ಮತ್ತೆ 69 ಸಾವಿರ ಹೊಸ ಕೇಸ್‌ ದಾಖಲು!

ಹೊಸ ದಿಲ್ಲಿ: ದೇಶದಲ್ಲಿ ದಿನ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಶುಕ್ರವಾರ ಒಂದೇ ದಿನ ದೇಶದಲ್ಲಿ 69,878 ಹೊಸ ಕೋವಿಡ್‌ ಕೇಸ್‌ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 29,75,702ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಯಲ್ಲಿ ಒಟ್ಟು 945 ಮಂದಿ ಕೊರೊನಾಗೆ ಬಲಿಯಾಗುವ ಮೂಲಕ ಭಾರತದಲ್ಲಿ ಕೋವಿಡ್‌ನಿಂದ ಒಟ್ಟು 55,794 ಸಾವು ಸಂಭವಿಸಿದೆ. ಇನ್ನು ಖುಷಿಯ ವಿಚಾರ ಏನು ಅಂದರೆ ದೇಶದಲ್ಲಿ ಈ ಬಾರಿ ಬರೋಬ್ಬರಿ 22,22,578 ಮಂದಿ ರೋಗಿಗಳು ಕೊರೊನಾ ಜಯಿಸಿ ಮನೆಗೆ ತೆರಳಿದ್ದಾರೆ. ಅಲ್ಲದೇ ಇವರೆಲ್ಲಾ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಅಲ್ಲದೆ ಸದ್ಯ ದೇಶದಲ್ಲಿ 6,97,330 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಒಂದೇ ದಿನ 10 ಲಕ್ಷ ಮಂದಿಗೆ ಪರೀಕ್ಷೆ! ಇನ್ನು ಅಮೆರಿಕದ ಬಳಿಕ ಕೊರೊನಾ ಪರೀಕ್ಷೆಯಲ್ಲಿ ಮುಂಚೂಣಿಯಲ್ಲಿರುವ ಭಾರತ ಬರೋಬ್ಬರಿ ಹತ್ತು ಲಕ್ಷ ಮಂದಿಗೆ ಶುಕ್ರವಾರ ಪರೀಕ್ಷೆ ನಡೆಸಿದೆ ಎಂದು ಐಸಿಎಂಆರ್‌ ತಿಳಿಸಿದೆ. 10,23,836 ಮಂದಿಯ ಸ್ಯಾಂಪಲ್‌ಗಳನ್ನ ಪಡೆದುಕೊಂಡು ಟೆಸ್ಟ್ ನಡೆಸಿದ್ದು ಇವರೆಗೆ ದೇಶದಲ್ಲಿ ಒಟ್ಟು 3,44,91,073 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದಂತೆ ಆಗಿದೆ. ಇನ್ನೊಂದೆಡೆ ಮುಂದಿನ ಎರಡು ವರ್ಷಗಳಲ್ಲಿ ಕೊರೊನಾ ಅಂತ್ಯವಾಗಲಿದೆ ಎಂದು ವಿಶ್ವಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ. ನೂರು ವರ್ಷಕ್ಕೊಮ್ಮೆ ಇಂತಹ ಸಾಂಕ್ರಾಮಿಕಗಳು ಬಂದು ಹೋಗುತ್ತಿವೆ ಎಂದು ನಂಬಲಾಗುತ್ತಿದೆ. ಹೀಗಾಗಿ ಎರಡು ವರ್ಷದೊಳಗೆ ಇದರ ಅಂತ್ಯವಾಗಬಹುದು ಎಂದು ಹೇಳಿದೆ.


from India & World News in Kannada | VK Polls https://ift.tt/3l6LFQZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...