ಮುಂಬಯಿ: ಮಹಾರಾಷ್ಟ್ರ ಸರಕಾರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಜತೆಗೆ ಗುರುತಿಸಿಕೊಂಡಿದ್ದ ಎನ್‌ಸಿಪಿ ಶಾಸಕ ಇದೀಗ ಉಲ್ಟಾ ಹೊಡೆದಿದ್ದಾರೆ. ರಾಜ ಭವನಕ್ಕೆ ನಮ್ಮನ್ನು ಕರೆದೊಯ್ಯಲಾಯಿತು. ಅಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿ ನಮಗೆ ಯಾರಿಗೂ ಇರಲಿಲ್ಲ ಎಂದು ರಾಜೇಂದ್ರ ಶಿಗ್ನೆ ಆರೋಪಿಸಿದ್ದಾರೆ. ಇದು ತಪ್ಪಾಗಿ ಅರ್ಥೈಸಿದ್ದರಿಂದ ಹೀಗೆಲ್ಲಾ ಆಗಿದೆ. ನಿಜಕ್ಕೂ ರಾಜ ಭವನದಲ್ಲಿ ನಡೆದ ವಿದ್ಯಮಾನದ ಬಗ್ಗೆ ನನಗೆ ಅರಿವಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿಯಾಗಿ ಮತ್ತು ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಶರದ್ ಪವಾರ್ ಅವರನ್ನು ಸಂಪರ್ಕಿಸಿ ವಿದ್ಯಮಾನಗಳನ್ನು ತಿಳಿಸಿದೆ ಎಂದು ಮತ್ತೊಬ್ಬ ಶಾಸಕ ಸಂದೀಪ್ ಶಿವಸಾಗರ್ ತಿಳಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಬಗ್ಗೆ ನಮಗೆ ಏನೂ ತಿಳಿದಿರಲಿಲ್ಲ ಇದರ ಬಗ್ಗೆ ಸುಳಿವು ಕೂಡ ಇರಲಿಲ್ಲ ಎಂದು ಸಂದೀಪ್ ಶಿವಸಾಗರ್ ಹೇಳಿಕೆ ನೀಡಿದ್ದಾರೆ.
from India & World News in Kannada | VK Polls https://ift.tt/2ObqEGo