ಆಪರೇಷನ್‌ ಕಮಲದ ಹಿಂದೆ ನಾಲ್ವರಿದ್ದಾರೆ: ಶಿವಸೇನಾ ನಾಯಕ ಸಂಜಯ್‌ ರಾವತ್

ಮುಂಬಯಿ: ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿದೆ. ಈ ನಡುವೆ, ಆಪರೇಷನ್‌ ಕಮಲದ ಹಿಂದೆ ನಾಲ್ವರಿದ್ದಾರೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಆರೋಪ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಆಪರೇಷನ್‌ ಕಮಲ ನಡೆಸುತ್ತಿದೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ. ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ (ಐಟಿ) ಹಾಗೂ ಮಹಾರಾಷ್ಟ್ರ ಪೊಲೀಸರ ನೆರವಿನಿಂದ ಆಪರೇಷನ್‌ ಕಮಲ ನಡೆಸಲಾಗುತ್ತಿದೆ. ಆದರೆ, ಅದು ಇಲ್ಲಿ ಯಾವುದೇ ಫಲಿತಾಂಶವನ್ನು ನೀಡುವುದಿಲ್ಲ ಎಂದು ಶಿವಸೇನಾ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಹೇಳಿಕೊಂಡಿದ್ದಾರೆ. ಅಲ್ಲದೆ, ಬಿಜೆಪಿಯವರಲ್ಲಿ ಬಹುಮತವಿದ್ದರೆ ಆಪರೇಷನ್‌ ಕಮಲದ ಅಗತ್ಯವೇನು ಎಂದೂ ಸಂಜಯ್‌ ರಾವತ್‌ ಕೇಸರಿ ಪಕ್ಷವನ್ನು ಪ್ರಶ್ನೆ ಮಾಡಿದ್ದಾರೆ. ಈ ನಡುವೆ ಶಿವಸೇನಾ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ನಾಯಕರ ತಂಡ ರಾಜಭವನಕ್ಕೆ ತೆರಳಿದ್ದು, ಸರಕಾರ ರಚನೆಗೆ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದಾರೆ. ಅಶೋಕ್‌ ಚವಾಣ್‌, ಜಯಂತ್‌ ಪಾಟೀಲ್‌, ಏಕನಾಥ್‌ ಶಿಂಧೆ ಹಾಗೂ ಬಾಳಾಸಾಹೇಬ್‌ ಥೋರಟ್‌ ನೇತೃತ್ವದ ನಿಯೋಗ ರಾಜ ಭವನಕ್ಕೆ ತೆರಳಿದ್ದಾರೆ. ಮಹಾರಾಷ್ಟ್ರದಲ್ಲಿ ನವೆಂಬರ್ 23 ರಂದು ಬೆಳ್ಳಂಬೆಳಗ್ಗೆ ಬಿಜೆಪಿ ಸರಕಾರ ರಚನೆಯಾಗಿದ್ದು, ದೇವೇಂದ್ರ ಫಡ್ನವಿಸ್ ಸಿಎಂ ಆಗಿ ಮತ್ತೊಮ್ಮೆ ಪ್ರಮಾಣ ವಚನ ಮಾಡಿದ್ರೆ, ಉಪ ಮುಖ್ಯಮಂತ್ರಿಯಾಗಿ ಅಜಿತ್‌ ಪವಾರ್‌ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲದೆ, ಎನ್‌ಸಿಪಿಯ ಹೆಚ್ಚು ಸದಸ್ಯರ ಬೆಂಬಲವೂ ಇದೆ ಎಂದು ಹೇಳಿಕಂಡು ರಾಜ್ಯಪಾಲರಿಗೆ ಶಾಸಕರ ಸಹಿ ಪತ್ರವನ್ನು ನೀಡಿದ್ದರು.


from India & World News in Kannada | VK Polls https://ift.tt/2rolq10

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...