26/11 ಮುಂಬಯಿ ಉಗ್ರರ ದಾಳಿಗೆ 11 ವರ್ಷ: ಘಟನೆಯ ಸಂತ್ರಸ್ತರನ್ನು ಸ್ಮರಿಸಿಕೊಂಡ ಭಾರತ

ಮುಂಬಯಿ: ನವೆಂಬರ್ 26, 2008ರ ಮುಂಬಯಿ ಮಹಾನಗರ ಪ್ರಕರಣ ನಡೆದು ಇಂದಿಗೆ 11 ವರ್ಷವಾಗಿದೆ. ಈ ಹಿನ್ನೆಲೆ ಹಲವು ಗಣ್ಯರು ಸೇರಿ ಹಲವರು ಘಟನೆ, ದಾಳಿ ವೇಳೆ ಮೃತಪಟ್ಟ ಜನರನ್ನು ನೆನೆದು ಗೌರವ ನಮನ ಸಲ್ಲಿಸಿದ್ದಾರೆ. ಮುಂಬಯಿ ದಾಳಿಯನ್ನು ನೆನೆದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಗೌರವ ನಮನ ಸಲ್ಲಿಸಿದರು. ಅಲ್ಲದೆ, ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶವನ್ನು ರಕ್ಷಿಸಲು ಉಗ್ರರನ್ನು ಹತ್ತಿಕ್ಕಿದ ಭದ್ರತಾ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್‌ ಹಾಗೂ ರಾಜ್ಯಪಾಲ ಭಗತ್‌ ಸಿಂಗ್ ಕೋಶ್ಯಾರಿ ಮುಂಬಯಿಯ ಮರೈನ್‌ ಡ್ರೈವ್‌ನಲ್ಲಿರುವ ಪೊಲೀಸ್ ಸ್ಮಾರಕ ಕಟ್ಟಡಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು. ಅಲ್ಲದೆ, ಅಮೆರಿಕ ರಾಜ್ಯ ಇಲಾಖೆ ವಕ್ತಾರ ಮಾರ್ಗನ್‌ ಒರ್ಟಗಸ್‌ ಸಹ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ 2008ರ ಮುಂಬಯಿ ದಾಳಿಯನ್ನು ಸ್ಮರಿಸಿದ್ದಾರೆ. ನಾವು ಇವತ್ತು ಮುಂಬಯಿ ದಾಳಿಯಲ್ಲಿ ಮೃತಪಟ್ಟವರನ್ನು ಸ್ಮರಿಸುತ್ತಿದ್ದೇವೆ. ಅಲ್ಲದೆ, ಘಟನೆಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಬೇಕೆಂಬ ಸಂತ್ರಸ್ಥ ಕುಟುಂಬಗಳಿಗೆ ನಾವು ಬೆಂಬಲ ಕೊಡುತ್ತೇವೆ ಎಂದು ಟ್ವೀಟ್‌ ಮಾಡಿದ್ದಾರೆ. 26 / 11 ದಾಳಿಯಲ್ಲಿ 6 ಅಮೆರಿಕ ನಾಗರಿಕರು ಸೇರಿ 166 ಜನರು ಮೃತಪಟ್ಟಿದ್ದರು. ಪಾಕಿಸ್ತಾನದಿಂದ ಮುಂಬಯಿಗೆ ಸಮುದ್ರದ ಮಾರ್ಗದಲ್ಲಿ ಬಂದ 10 ಲಷ್ಕರ್‌ ಉಗ್ರರು ಮುಂಬಯಿ ಮಹಾನಗರದ ಹಲವೆಡೆ ದಾಳಿ ನಡೆಸಿದ್ದರು. ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ, ನಾರಿನಮ್ ಹೌಸ್‌, ತಾಜ್‌ ಹೋಟೆಲ್, ಒಬೆರಾಯ್‌ ಟ್ರಿಡೆಂಟ್‌ ಹೋಟೆಲ್ ಸೇರಿ ಹಲವು ಪ್ರಮುಖ ಪ್ರದೇಶಗಳ ಮೇಲೆ ದಾಳಿ ನಡೆಸಿದ್ದರು. 2008 ರ ಮುಂಬಯಿ ಉಗ್ರರ ದಾಳಿ ಬಳಿಕ ಭಾರತ ಹಾಗೂ ಪಾಕ್‌ ನಡುವಣ ಸಂಬಂಧ ಹದಗೆಟ್ಟಿದೆ. ಇನ್ನು, ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ #MumbaiTerrorAttack ಎಂಬ ಹ್ಯಾಷ್‌ಟ್ಯಾಗ್‌ ಸದ್ಯ ಭಾರತದಲ್ಲಿ ಟಾಪ್‌ ಟ್ರೆಂಟಿಂಗ್‌ ಆಗುತ್ತಿದೆ.


from India & World News in Kannada | VK Polls https://ift.tt/2OkgtiP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...