ಮುಂಬಯಿ: ರಾಜಕೀಯ ಹೈಡ್ರಾಮ ಮುಗಿಯವಂತೆ ಕಾಣಿಸುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತು ಬಂಡಾಯ ನಾಯಕ ಅಜಿತ್ ಪವಾರ್ ನೇತೃತ್ವದಲ್ಲಿ ಸರಕಾರ ರಚನೆಯಾಗಿದ್ದರೂ ಸರಕಾರ ರಚನೆ ಕಸರತ್ತನ್ನು ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಬಿಟ್ಟುಕೊಟ್ಟಿಲ್ಲ. ಸೋಮವಾರ ಮುಂಜಾನೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಇದೀಗ ಸಂಜೆ 7 ಗಂಟೆಗೆ ಮಾಧ್ಯಮಗಳ ಮುಂದೆ ತಮ್ಮ ಎಲ್ಲಾ ಶಾಸಕರನ್ನು ಪರೇಡ್ ನಡೆಸಲು ನಿರ್ಧರಿಸಿವೆ. ಮುಂಬಯಿನ ಐಷಾರಾಮಿ ಹೋಟೆಲ್ ಗ್ರಾಂಡ್ ಹಯಾಟ್‌ನಲ್ಲಿ ಶಾಸಕರ ಪರೇಡ್ ನಡೆಯಲಿದೆ.
ಈ ಸಂಬಂಧ ಟ್ಟೀಟ್ ಮಾಡಿರುವ ವಕ್ತಾರ ಸಂಜಯ್ ರಾವತ್ ಮಹಾರಾಷ್ಟ್ರ ರಾಜ್ಯಪಾಲರಿಗೆ ನೇರ ಸವಾಲೆಸೆದಿದ್ದು, ಖುದ್ದಾಗಿ ಬಂದು ತಮ್ಮ ಸಂಖ್ಯಾಬಲ ವೀಕ್ಷಿಸುವಂತೆ ಆಹ್ವಾನ ನೀಡಿದ್ದಾರೆ. "ನಾವೆಲ್ಲ ಒಂದಾಗಿದ್ದೇವೆ ಮತ್ತು ಒಟ್ಟಾಗಿದ್ದೇವೆ. ನಮ್ಮ 162 ಜನರನ್ನು ಒಟ್ಟಾಗಿ ಗ್ರಾಂಡ್ ಹಯಾಟ್‌ನಲ್ಲಿ ಸಂಜೆ 7 ಗಂಟೆಗೆ ನೀವೇ ಖುದ್ದಾಗಿ ಬಂದು ಮೊದಲ ಬಾರಿಗೆ ನೋಡಿ,” ಎಂಬುದಾಗಿ ಮಹಾರಾಷ್ಟ್ರ ರಾಜ್ಯಪಾಲರಿಗೆ ಸಂಜಯ್ ರಾವತ್ ಆಹ್ವಾನ ನೀಡಿದ್ದಾರೆ.
from India & World News in Kannada | VK Polls https://ift.tt/2QPgwFh