'ಇದೇನು ಗೋವಾ ಅಲ್ಲ' ಎಂದು 162 ಶಾಸಕರ ಅಗಾಡಿ ಪರೇಡ್‌ ಮಾಡಿಸಿದ ಶರದ್‌ ಪವಾರ್‌!

ಮಂಬಯಿ: ಮಹಾರಾಷ್ಟ್ರ ಸರಕಾರ ರಚನೆ ಕುರಿತಾದ ತೀರ್ಪು ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ 10.30ಕ್ಕೆ ಹೊರ ಬೀಳಲಿದ್ದು, ಹಿಂದಿನ ದಿನ ಮುಂಬಯಿ ಹೋಟೆಲ್‌ ಒಂದರಲ್ಲಿ ಬಿಜೆಪಿ ಸರಕಾರದ ವಿರುದ್ಧದ ಶಾಸಕರು ಸೇರುವ ಮೂಲಕ 'ನಾವು 162' ಎಂಬ ಸಂದೇಶವನ್ನು ಸಾರಿದರು. ಎನ್‌ಸಿಪಿ ಮುಖ್ಯಸ್ಥ , ಶಿವಸೇನೆ ಮುಖಂಡ ಉದ್ಧವ್‌ ಠಾಕ್ರೆ ಮತ್ತು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮೂರು ಪಕ್ಷದ ಎಂಎಲ್‌ಎಗಳು ಮುಂಬಯಿ ನಗರದ ಹೋಟೆಲ್‌ನಲ್ಲಿ ಸೇರಿದ್ದರು. 'ನಾವು 162' ಎಂಬ ನಾಮಫಲಕ ಪ್ರದರ್ಶನದ ಮೂಲಕ ಬಹುಮತವಿದೆ ಎಂಬುದನ್ನು ಬಿಂಬಿಸಿದರು. 'ಮಹಾ ವಿಕಾಸ ಅಗಾಡಿ' ವಿಶ್ವಾಸಮತ ಗೆಲ್ಲಲಿದೆ ಮತ್ತು ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಮೂರು ಪಕ್ಷದ ನಾಯಕರು ವ್ಯಕ್ತ ಪಡಿಸಿದರು. ಗೋವಾ, ಮಣಿಪುರದಲ್ಲಿ ಬಹುಮತವಿಲ್ಲದ ಬಿಜೆಪಿ ಸರಕಾರ ರಚನೆ ಮಾಡಿದೆ. ಆದರೆ ಇದೇನು ಗೋವಾ ಅಲ್ಲ. ಇದು ಮಹಾರಾಷ್ಟ್ರ. ಇಲ್ಲಿ ತಪ್ಪು ನಡೆದರೆ ಜನರು ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಶರದ್‌ ಪವಾರ್‌ ಗುಡುಗಿದರು. ತೆಗೆದುಕೊಂಡಿರುವ ನಿರ್ಧಾರ ಪಕ್ಷದ ತೀರ್ಮಾನವಲ್ಲ. ನಾವು ಕಾನೂನು ತಜ್ಞರನ್ನು ಭೇಟಿಯಾಗಿದ್ದೇವೆ. ನಮ್ಮ ಶಾಸಕರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಶರದ್‌ ಪವಾರ್‌ ಪಕ್ಷದ ಸದಸ್ಯರಿಗೆ ವಿಶ್ವಾಸ ತುಂಬಿದರು. ಸಭೆಗೆ ಸ್ವಲ್ಪ ತಡವಾಗಿ ಆಗಮಿಸಿದ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ 'ಈ ಮೈತ್ರಿ 25-30 ವರ್ಷ ಇರುತ್ತದೆ' ಎಂದರು. ಚುನಾವಣೆ ಪ್ರಚಾರದ ಸಂದರ್ಭ 'ನಾನು ವಾಪಾಸಾಗುತ್ತೇನೆ' ಎನ್ನುತ್ತಿದ್ದ ದೇವೇಂದ್ರ ಫಡ್ನವಿಸ್‌ ಪ್ರಚಾರ ವೈಖರಿಯನ್ನು ಅಣಕಿಸಿದ ಉದ್ಧವ್‌ ಠಾಕ್ರೆ 'ನಮ್ಮ ಮೈತ್ರಿ ಆಗಮಿಸಿದೆ. ನಾವು ನಾನು ವಾಪಾಸಾಗುತ್ತೇನೆ ಎಂದು ಹೇಳುವುದಿಲ್ಲ ಎಂದರು. ನಾವು 162ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಇದ್ದೇವೆ. ನಮ್ಮ ಸಂಖ್ಯಾಬಲ ಹೆಚ್ಚಾಗುತ್ತಿದೆ ಎಂದು ಕಾಂಗ್ರೆ ಸ್‌ ನಾಯಕ ಅಶೋಕ್‌ ಚೌಹಾಣ್‌ ತಿಳಿಸಿದರು.


from India & World News in Kannada | VK Polls https://ift.tt/2rsddZK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...