ಬಿಜೆಪಿಗೆ ಕೈಕೊಟ್ಟ ಅಜಿತ್‌ಗೆ 'ಠಾಕ್ರೆ' ಸಂಪುಟದಲ್ಲಿ ಸ್ಥಾನ: ಪವಾರ್‌ಗೆ ಕ್ಲೀನ್‌ಚಿಟ್‌ ಕೊಟ್ಟಿಲ್ಲ ಅಂದ್ರು ಶಾ!

ಮುಂಬಯಿ: ನಾನು ಈ ಹಿಂದೆಯೂ ಎನ್‌ಸಿಪಿಯಲ್ಲೇ ಇದ್ದೆ, ಈಗಲೂ ಎನ್‌ಸಿಪಿಯಲ್ಲೇ ಇದ್ದೇನೆ ಎಂದು ಹೇಳಿದ್ದಾರೆ. ನಾಲ್ಕು ದಿನದ ಮಟ್ಟಿಗೆ ಬಿಜೆಪಿಗೆ ಕೈಜೋಡಿಸಿ ಡಿಸಿಎಂ ಕೂಡಾ ಆಗಿದ್ದ ಅಜಿತ್ ಪವಾರ್, ರಾಜೀನಾಮೆ ಕೊಟ್ಟ ಮರುದಿನವೇ, ತಾವು ಅಂದೂ ಎನ್‌ಸಿಪಿ ಸದಸ್ಯ, ಇಂದೂ ಎನ್‌ಸಿಪಿ ಸದಸ್ಯ ಎಂದು ಸ್ಪಷ್ಟನೆ ನೀಡಿದ್ದಾರೆ. ತಮ್ಮನ್ನು ಎನ್‌ಸಿಪಿಯಿಂದ ಉಚ್ಛಾಟನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿರುವ ಅಜಿತ್ ಪವಾರ್, ನನ್ನನ್ನು ಉಚ್ಛಾಟನೆ ಮಾಡಿದ್ದಾರೆ ಅಂತಾ ಯಾರು ಹೇಳಿದ್ರು, ಎಲ್ಲಿ ಕೇಳಿದ್ದೀರಿ ಎಂದು ಸವಾಲೆಸೆದಿದ್ದಾರೆ. ಅಜಿತ್ ಪವಾರ್ ಬಿಜೆಪಿಗೆ ಬೆಂಬಲ ನೀಡಿ ಡಿಸಿಎಂ ಆದ ಮರುದಿನವೇ, ಅವರಿಗೆ ಸಂಬಂಧಪಟ್ಟ ಪ್ರಕರಣಗಳನ್ನು ಎಸಿಬಿ ಕೈಬಿಟ್ಟಿತ್ತು. ಆದ್ರೆ, ಈ ಬೆಳವಣಿಗೆ ನಡೆದ ಮರುದಿನವೇ ಅಜಿತ್ ಪವಾರ್ ಡಿಸಿಎಂ ಹುದ್ದೆಗೆ ರಾಜೀನಾಮೆ ಕೊಟ್ಟು ಯೂ ಟರ್ನ್‌ ಹೊಡೆದಿದ್ರು. ಅಜಿತ್ ಪವಾರ್ ಅವರನ್ನ ನಂಬಿ ಬಿಜೆಪಿ ತಪ್ಪು ಮಾಡಿತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇವೇಂದ್ರ ಫಡ್ನವಿಸ್, ಸೂಕ್ತ ಸಮಯಕ್ಕೆ ಸೂಕ್ತ ಉತ್ತರ ನೀಡುತ್ತೇನೆ ಚಿಂತಿಸಬೇಡಿ ಎಂದಷ್ಟೇ ಹೇಳಿದರು. ಈ ನಡುವೆ ತಮ್ಮ ತಪ್ಪನ್ನು ಒಪ್ಪಿಕೊಂಡು ಮರಳಿ ಎನ್‌ಸಿಪಿ ಸೇರಿರುವ ಅಜಿತ್ ಪವಾರ್‌ ಅವರನ್ನು ಶರದ್ ಪವಾರ್ ಮನ್ನಿಸಿದ್ದಾರೆ ಎಂದು ಎನ್‌ಸಿಪಿ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎನ್‌ಸಿಪಿ ನಾಯಕ ನವಾಬ್‌ ಮಲಿಕ್, ಪ್ರಾಮಾಣಿಕವಾಗಿ ತಪ್ಪು ಒಪ್ಪಿಕೊಂಡು ಕ್ಷಮೆಯಾಚಿಸಿದ ಅಜಿತ್ ಪವಾರ್ ಅವರನ್ನು ಶರದ್ ಪವಾರ್ ಕ್ಷಮಿಸಿದ್ದಾರೆ ಎಂದು ಹೇಳಿದ್ದಾರೆ. ನಾನು ಇನ್ಮುಂದೆ ಎನ್‌ಸಿಪಿ ಜೊತೆಯಲ್ಲೇ ಇರುತ್ತೇನೆ ಎಂದು ಅಜಿತ್ ಪವಾರ್ ಸ್ಪಷ್ಟಪಡಿಸಿದ್ಧಾರೆ. ಎನ್‌ಸಿಪಿ ಶಾಸಕಾಂಗ ಸಭೆಗೆ ಆಗಮಿಸಿದ ಅಜಿತ್ ಪವಾರ್ ಅವರನ್ನು ಅಪ್ಪಿ ಸ್ವಾಗತಿಸುವ ಮೂಲಕ, ಕುಟುಂಬದಲ್ಲೇ ಆಗಲಿ, ಪಕ್ಷದಲ್ಲೇ ಆಗಲಿ ಯಾವುದೇ ಒಡಕಿಲ್ಲ ಅನ್ನೋದನ್ನ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಸಾಂಕೇತಿಕವಾಗಿ ಸ್ಪಷ್ಟಪಡಿಸಿದರು. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ, ಗೃಹ ಸಚಿವ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅಜಿತ್ ಪವಾರ್ ವಿರುದ್ಧದ ಯಾವುದೇ ಪ್ರಕರಣವನ್ನು ಸರ್ಕಾರ ವಾಪಸ್ ಪಡೆದಿಲ್ಲ ಎಂದು ಅಮಿತ್ ಶಾ ಸ್ಪಷ್ಟನೆ ನೀಡಿದ್ಧಾರೆ. ಒಟ್ಟಿನಲ್ಲಿ, ಎನ್‌ಸಿಪಿಯಿಂದ ಹೊರಬಂದ ನಾಲ್ಕೇ ದಿನಕ್ಕೆ ಮತ್ತೆ ಮಾತೃಪಕ್ಷದ ತೆಕ್ಕೆಗೆ ಜಾರಿದ ಅಜಿತ್ ಪವಾರ್, ಇದೀಗ ಠಾಕ್ರೆ ಕ್ಯಾಬಿನೆಟ್‌ನಲ್ಲೂ ಮಂತ್ರಿಯಾಗುವ ಕನಸು ಕಾಣ್ತಿದ್ಧಾರೆ. ಅಜಿತ್ ಪವಾರ್‌ಗೆ ಪವರ್‌ ಫುಲ್ ಖಾತೆಯೇ ಸಿಗಬಹುದು ಎಂಬ ವಿಶ್ಲೇಷಣೆಗಳೂ ಕೇಳಿಬರ್ತಿವೆ.


from India & World News in Kannada | VK Polls https://ift.tt/2KWm0u7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...