ಬಿಜೆಪಿ ಸಖ್ಯದ ಬೆನ್ನಲ್ಲೇ ನೀರಾವರಿ ಹಗರಣಗಳಿಂದ ಅಜಿತ್‌ ಪವಾರ್‌ಗೆ ಕ್ಲೀನ್‌ ಚಿಟ್‌, ಕಾಂಗ್ರೆಸ್‌ ಆರೋಪ

ಮುಂಬಯಿ: ಬಿಜೆಪಿ ಜೊತೆ ಕೈ ಜೋಡಿಸಿ ಮಹಾರಾಷ್ಟ್ರದಲ್ಲಿ ಸರಕಾರ ರಚನೆಗೆ ಸಹಕರಿಸಿದ ಬೆನ್ನಿಗೆ ನಾಯಕ ಅಜಿತ್‌ ಪವಾರ್‌ಗೆ ನೀರಾವರಿ ಹಗರಣಗಳಿಂದ ಕ್ಲೀನ್‌ ಚಿಟ್‌ ನೀಡಲಾಗಿದೆ ಎಂಬುದಾಗಿ ಕಾಂಗ್ರೆಸ್‌ ಆರೋಪಿಸಿದೆ. ಭ್ರಷ್ಟಾಚಾರ ನಿಗ್ರಹ ದಳ ಮಹಾರಾಷ್ಟ್ರದ ಒಂಭತ್ತು ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಸೋಮವಾರ ಮುಕ್ತಾಯಗೊಳಿಸಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌-ಎನ್‌ಸಿಪಿ ಸರಕಾರದ ಅವಧಿಯಲ್ಲಿ ನಡೆದ ಹಗರಣಗಳು ಇವಾಗಿದ್ದವು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ನೀರಾವರಿ ಸಚಿವರಾಗಿದ್ದರು.

ಈ ಅವಧಿಯಲ್ಲಿ ನೀರಾವರಿ ಇಲಾಖೆಯಿಂದ ನೀಡಲಾಗಿದ್ದ ಟೆಂಡರ್‌ಗಳಲ್ಲಿ ಅಜಿತ್‌ ಪವಾರ್‌ ಕೈವಾಡವಿದೆ ಮತ್ತು ಹೆಚ್ಚಿನ ಮೊತ್ತಕ್ಕೆ ಈ ಯೋಜನೆಗಳನ್ನು ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿತ್ತು. ಇದೀಗ ಬಿಜೆಪಿಗೆ ಬೆಂಬಲ ನೀಡಿದ ಬೆನ್ನಿಗೆ ಅಜಿತ್‌ ಪವಾರ್‌ ಅವರಿಗೆ ಕ್ಲೀನ್‌ಚಿಟ್‌ ನೀಡಲಾಗಿದೆ ಎಂಬುದಾಗಿ ಕಾಂಗ್ರೆಸ್‌ ಆರೋಪಿಸಿತ್ತು. ಈ ಸಂಬಂಧ ಸ್ಪಷ್ಟನೆ ನೀಡಿರುವ ಭ್ರಷ್ಟಾಚಾರ ನಿಗ್ರಹ ದಳ, ಈ ಪ್ರಕರಣಗಳಾವುವೂ ಅಜಿತ್‌ ಪವಾರ್‌ಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟನೆ ನೀಡಿದೆ.


from India & World News in Kannada | VK Polls https://ift.tt/2Dbpqou

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...