ಓರ್ವ ಭಗತ್‌ ಸಿಂಗ್‌ ಸ್ವಾತಂತ್ರ್ಯಕ್ಕಾಗಿ ಗಲ್ಲಿಗೇರಿದರೆ ಮತ್ತೋರ್ವ ಪ್ರಜಾಪ್ರಭುತ್ವವನ್ನೇ ಗಲ್ಲಿಗೇರಿಸಿದ್ದಾರೆ: ಶಿವಸೇನೆ

ಮುಂಬಯಿ: ಓರ್ವ ಭಗತ್‌ ಸಿಂಗ್‌ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಗಲ್ಲಿಗೇರಿದರೆ ಮತ್ತೊರ್ವ 'ಭಗತ್‌ ಸಿಂಗ್‌' ರಾತ್ರಿಯ ಕತ್ತಲಲ್ಲಿ ಪ್ರಜಾಪ್ರಭುತ್ವವನ್ನೇ ಗಲ್ಲಿಗೇರಿಸಿದರು ಎಂದು ಮಹಾರಾಷ್ಟ್ರ ರಾಜ್ಯಪಾಲ ವಿರುದ್ಧ ಹರಿಹಾಯ್ದಿದೆ. ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಮತ್ತು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರಿಗೆ ನವೆಂಬರ್‌ 23, ಶನಿವಾರ ಬೆಳಗ್ಗೆ ತರಾತುರಿಯಲ್ಲಿ ಪ್ರಮಾಣ ವಚನ ಬೋದಿಸಿದ ರಾಜ್ಯಪಾಲ ಭಗತ್‌ ಕೋಶಾರಿಯಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. ಮುಂಬಯಿನ ಹೋಟೆಲ್‌ನಲ್ಲಿ 162 ಶಾಸಕರ ಸಂಖ್ಯಾಬಲವನ್ನು ಪ್ರದರ್ಶಿಸಿದ್ದ ಕಾಂಗ್ರೆಸ್‌-ಶಿವಸೇನೆ-ಎನ್‌ಸಿಪಿ ಮೈತ್ರಿ ಮಹಾ ವಿಕಾಸ ಅಗಾಡಿ ಬಹುಮತದ ಪತ್ರವನ್ನು ರಾಜ್ಯಪಾಲರ ಬಳಿಗೆ ಕೊಂಡೊಯ್ದಾಗ ಏನು ಮಾಡುತ್ತಾರೆ ನೋಡಬೇಕು ಎಂದು ಶಿವಸೇನೆ ಸಂಪಾದಕೀಯದಲ್ಲಿ ಬರೆದುಕೊಂಡಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ರಚನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ತೀರ್ಪಿಗಾಗಿ ಕಾಯುತ್ತಿದೆ. ವಿಚಾರಣೆ ಮುಗಿಸಿರುವ ಸುಪ್ರೀಂ ಕೋರ್ಟ್‌ ಮಂಗಳವಾರ 10.30ಕ್ಕೆ ಆದೇಶವನ್ನು ಹೊರಡಿಸುವುದಾಗಿ ತಿಳಿಸಿದೆ. 288 ಶಾಸಕರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರಕಾರ ರಚನೆಗೆ ಬೇಕಿರುವ ಮ್ಯಾಜಿಕ್‌ ನಂಬರ್‌ 145. ಮಹಾ ವಿಕಾಸ ಅಗಾಡಿ ತಮಗೆ 162 ಸಂಖ್ಯಾಬಲವಿರುವುದಾಗಿ ಹೇಳಿಕೊಳ್ಳುತ್ತಿದೆ. ಎನ್‌ಸಿಪಿಯ 54 ಶಾಸಕರು ಬೆಂಬಲದೊಂದಿಗೆ ಸರಕಾರ ರಚಿಸಿರುವುದಾಗಿ ಬಿಜೆಪಿ ವಾದಿಸುತ್ತಿದೆ.


from India & World News in Kannada | VK Polls https://ift.tt/2OO2rFe

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...