ರೇಪಿಸ್ಟ್‌ಗಳನ್ನು ನಡುರೋಡಲ್ಲಿ ನಿಲ್ಲಿಸಿ ಸುಟ್ಟುಬಿಡಿ : ಹೈದರಾಬಾದ್‌ ಪಶುವೈದ್ಯೆ ತಾಯಿಯ ಆಕ್ರಂದನ

ಹೈದರಾಬಾದ್ : "ರೇಪಿಸ್ಟ್‌ಗಳನ್ನು ನಡುರೋಡಲ್ಲಿ ನಿಲ್ಲಿಸಿ ಸಾರ್ವಜನಿಕವಾಗಿ ಸುಟ್ಟುಬಿಡಿ. ಮಗಳನ್ನು ಹತ್ಯಗೈದು ಸುಟ್ಟಿರುವ ಈ ಪಾತಕಿಗಳನ್ನು ಹೈದರಾಬಾದ್‌ನ ರಾಜೀವ್‌ ಗಾಂಧಿ ವಿಮಾನ ನಿಲ್ದಾಣಕ್ಕೂ, ಸಂಶಾಬಾದ್‌ ಪೊಲೀಸ್‌ ಸ್ಟೇಷನ್‌ಗೂ ತಿರುಗಾಡಿಸುವ ಬದಲು ಒಮ್ಮಲೇ ಸುಟ್ಟುಬಿಡಿ." ಹೈದರಾಬಾದ್‌ನಲ್ಲಿ ತೆಲಂಗಾಣದ ಹೊರವಲಯದ ಶಂಶಾಬಾದ್‌ನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ 27 ವರ್ಷದ ಪಶುವೈದ್ಯೆಯ ತಾಯಿ ಆಕ್ರೋಶಭರಿತ ಮಾತುಗಳಿವು. ಆಮಾಯಕ ಹೆಣ್ಣುಮಕ್ಕಳನ್ನು ಹತ್ಯಾಚಾರ ಮಾಡಿ ಕೊಲೆಗೈಯುವ ಇಂತಹ ಪಾತಕಿಗಳನ್ನು ಸಾರ್ವಜನಿಕವಾಗಿ ಜೀವಂತ ದಹನ ಮಾಡಬೇಕು. ಆಗಲಾದರೂ ಇಂತಹ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಪೊಲೀಸಲ್ಲಿ ತಮ್ಮ ಆಕ್ರಂದನವನ್ನು ತೋಡಿಕೊಂಡಿದ್ದಾರೆ. ನನ್ನ ಮಗಳು ಏನೂ ತಿಳಿಯದ ಅಮಾಯಕಿ. ಅವಳು ಅಪಾಯದಲ್ಲಿ ಸಿಲಿಕಿದ್ದಾಗ ತನ್ನ ತಂಗಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿರುವುದೇ ನಮಗೆ ತಿಳಿದಿಲ್ಲ. ಇಂತಹ ಕಿಡಿಗೇಡಿಗಳನ್ನು ಜೀವಂತವಾಗಿ ಸಡಬೇಕು ಎಂದು ಒತ್ತಾಯಿಸಿದ್ದಾರೆ. ಹಿನ್ನೆಲೆ: ಸ್ಕೂಟರ್‌ ಪಂಕ್ಚರ್‌ ಹಾಕಿಸಿಕೊಡುವ ನೆಪದಲ್ಲಿ ಮಹಿಳೆಯನ್ನು ಅಪಹರಿಸಿದ ದುರುಳರು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಪೆಟ್ರೋಲ್‌ ಸುರಿದು ಮೃತದೇಹವನ್ನು ಸಂಪೂರ್ಣವಾಗಿ ಸುಟ್ಟುಹಾಕಿದ್ದರು. ಗುರುವಾರ ಬೆಳಗ್ಗೆ ಮೇಲ್ಸೇತುವೆಯೊಂದರ ಕೆಳಗೆ ಯುವತಿಯ ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.


from India & World News in Kannada | VK Polls https://ift.tt/2DrT354

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...