ಮುಂಬಯಿ: ದೇವೇಂದ್ರ ಫಡ್ನವಿಸ್ ರಾಜೀನಾಮೆಯೊಂದಿಗೆ ಒಂದು ಸುತ್ತಿನ ಹೈಡ್ರಾಮ ಅಂತ್ಯಗೊಂಡಿದ್ದು, ಇಂದು ಬೆಳಗ್ಗೆ 8 ಗಂಟೆಗೆ ರಾಜ್ಯಪಾಲ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದಿದ್ದು, ಎಲ್ಲ ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಳಿಕ ಉದ್ಧವ್ ಠಾಕ್ರೆ ಮೈತ್ರಿಕೂಟದ ಬಹುಮತ ಸಾಬೀತುಪಡಿಸಿ, ಸರಕಾರ ರಚನೆ ಮಾಡಲಿದ್ದಾರೆ. ಈಗಾಗಲೇ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟ 'ಮಹಾ ವಿಕಾಸ್ ಅಘಾಡಿ' ಉದ್ಧವ್ ಠಾಕ್ರೆ ಅವರನ್ನು ಶಾಸಕಾಂಗ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದೆ. ಇದರೊಂದಿಗೆ ಉದ್ಧವ್, ರಾಜ್ಯದ ಸಿಎಂ ಗಾದಿ ಅಲಂಕರಿಸಿದ ಠಾಕ್ರೆ ವಂಶದ ಮೊಗಲ ನಾಯಕ ಎಂದೆನಿಸಿಕೊಳ್ಳಲಿದ್ದಾರೆ. ಡಿಸೆಂಬರ್ 1ಕ್ಕೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ನಿಗದಿಯಾಗಿತ್ತಾದರೂ ನವೆಂಬರ್ 28, ಗುರುವಾರ ಉದ್ಧವ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮಂಗಳವಾರ ಸಂಜೆ ನಡೆದ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಉದ್ಧವ್ ಠಾಕ್ರೆ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಗೋವಾ, ಮಣಿಪುರದಲ್ಲಿ ಬಹುಮತವಿಲ್ಲದ ಬಿಜೆಪಿ ಸರಕಾರ ರಚನೆ ಮಾಡಿದೆ. ಆದರೆ ಇದೇನು ಗೋವಾ ಅಲ್ಲ. ಇದು . ಇಲ್ಲಿ ತಪ್ಪು ನಡೆದರೆ ಜನರು ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಗುಡುಗಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್.
from India & World News in Kannada | VK Polls https://ift.tt/2Di81u7