ಚಿಕ್ಕಬಳ್ಳಾಪುರ: ಯಾವುದೇ ಒಂದು ರಾಜ್ಯದ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಪ್ರಾದೇಶಿಕ ಪಕ್ಷಗಳು ಅವಶ್ಯಕ. ತಮಿಳುನಾಡು, ತೆಲಂಗಾಣ, ಆಂಧ್ರದಲ್ಲಿ ಈಗ ಮಹಾರಾಷ್ಟ್ರದಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವುದರಿಂದ ಪ್ರಧಾನಮಂತ್ರಿ ಅವರ ಮನೆ ಬಾಗಿಲಿಗೆ ಬರುತ್ತಾರೆ ಹಾಗೂ ಬೆಂಬಲ ಕೋರುತ್ತಾರೆ. 40 ವರ್ಷದಿಂದ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಉಳಿದಿದೆ. ಅದಕ್ಕೆ ಕರ್ನಾಟಕದ ಮಹಾಜನತೆ ಕಾರಣ ಎಂದು ಮಾಜಿ ಪ್ರಧಾನಿ ಹೇಳಿದರು. ಶನಿವಾರ ಕೆಂಗಲ್ಚಿಕ್ಕಬಳ್ಳಾಪುರದಲ್ಲಿ ಎನ್. ರಾಧಾಕೃಷ್ಣ ಪರ ಮತಯಾಚಿಸಿದ ದೇವೇಗೌಡರು, ಹನುಮಂತಯ್ಯನವರು ಸ್ವರಾಜ್ ಪಾರ್ಟಿ ಅಂತ ಕಟ್ಟಿದರ. ಯಡಿಯೂರಪ್ಪನವರೂ ಕೆಜೆಪಿ ಪಾರ್ಟಿ ಕಟ್ಟಿದ್ದರು. ಗುಂಡೂರಾವ್, ರಾಮಕೃಷ್ಣ ಹೆಗಡೆ ಅವರು ಪಕ್ಷವನ್ನು ಕಟ್ಟಿದರು. ಆದರೆ ಪಕ್ಷ ಉಳಿಸಿಕೊಳ್ಳಲು ಆಗಿಲ್ಲ. ತಮಿಳುನಾಡಲ್ಲಿ ಪ್ರಾದೇಶಿಕ ಪಕ್ಷ ಇದ್ದ ಕಾರಣ ವಿ.ಪಿ. ಸಿಂಗ್, ವಾಪಪೇಯಿ, ಸೋನಿಯಾಗಾಂಧಿ, ಮನಮೋಹನ್ ಸಿಂಗ್ ಎಲ್ಲರೂ ಕರುಣಾನಿಧಿ ಮನೆಗೆ ಹೋಗುತ್ತಾರೆ. ಕನ್ನಡಿಗರಾದ ನಮಗೆ ಏನಾಗಿದೆ? ಅಂತಹ ಶಕ್ತಿ, ಸ್ವಾಭಿಮಾನ ನಮ್ಮಲ್ಲಿ ಇಲ್ಲವಾ? ನಾವು ಜನರ ಬಳಿ ಮತಬಿಕ್ಷೆಗೆ ಬಂದಿದ್ದೇವೆ. ಮತ ಕೊಡುವ ಪುಣ್ಯಾತ್ಮರು ಜನ, ನೀವು ಮೊದಲು ತೀರ್ಮಾನ ಮಾಡಬೇಕು ಎಂದರು. ರಾಜ್ಯದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ನಡುವೆ ಚುನಾವಣೆ ಬಂದಿದೆ. ಇದು ಸ್ವಾಭಿಮಾನದ ಚುನಾವಣೆ. ಯಾವ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಉಳಿಗಾಲ ಎಂಬುದು ಅರ್ಥ ಮಾಡಿಕೊಂಡು ಮತ ಕೊಡಬೇಕು ಎಂದು ದೇವೇಗೌಡರು ವಿಧಾನಸಭೆ ಕ್ಷೇತ್ರದ ಮತದಾರರಲ್ಲಿ ವಿನಂತಿ ಮಾಡಿಕೊಂಡರು. ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ. ಕೆ. ಸುಧಾಕರ್, ಕಾಂಗ್ರೆಸ್ನಿಂದ ನಂದಿ ಎಂ. ಅಂಜನಪ್ಪ ಅವರು ಕಣದಲ್ಲಿದ್ದಾರೆ.
from India & World News in Kannada | VK Polls https://ift.tt/2L90Vwn