ಡೇವಿಸ್‌ ಕಪ್‌: ಮೊದಲ ದಿನವೇ ಪಾಕಿಸ್ತಾನ ವಿರುದ್ಧ ಭಾರತದ ಪ್ರಾಬಲ್ಯ

ನೂರ್‌ ಸುಲ್ತಾನ್‌ (ಕಝಕಸ್ತಾನ): ಡೇವಿಸ್ ಕಪ್ ಟೂರ್ನಿಯಲ್ಲಿ ಭಾರತ ತಂಡದ ರಾಮ್‌ಕುಮಾರ್ ರಾಮನಾಥನ್ ಹಾಗೂ ಸುಮಿತ್ ನಾಗಲ್ ಅವರು ಪ್ರತ್ಯೇಕ ಸಿಂಗಲ್ಸ್‌ ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವು ದಾಖಲಿಸಿದ್ದಾರೆ. ಇದರೊಂದಿಗೆ ಭಾರತ ತಂಡ 2-0 ಅಂತರದ ಮುನ್ನಡೆ ಸಾಧಿಸಿದೆ. ಕೇವಲ 42 ನಿಮಿಷಗಳ ಕಾಲ ನಡೆದ ಮೊದಲ ಹಣಾಹಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ರಾಮ್‌ಕುಮಾರ್ ರಾಮನಾಥನ್ ಅವರು ಪಾಕಿಸ್ತಾನದ 17ರ ಪ್ರಾಯದ ಮುಹಮ್ಮದ್ ಶೊಯೇಬ್ ವಿರುದ್ಧ ನೇರ ಸೆಟ್‌ಗಳ ಜಯ ದಾಖಲಿಸಿದರು. ಮತ್ತೊಂದು ಸಿಂಗಲ್ಸ್‌ ಪಂದ್ಯದಲ್ಲಿ ಸುಮಿತ್ ನಾಗಲ್ ಅವರು ಹುಝೇಫಾ ಅಬ್ದುಲ್ ವಿರುದ್ಧ 6-0, 6-2 ಅಂತರದ ನೇರ ಸೆಟ್‌ಗಳಿಂದ ಸುಲಭವಾಗಿ ಜಯ ದಾಖಲಿಸಿದರು. ಇದು ಟೂರ್ನಿಯಲ್ಲಿ ನಗಾಲ್‌ ಅವರ ವೃತ್ತಿ ಜೀವನದ ಮೊದಲನೇ ಗೆಲುವಾಗಿದೆ. ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಭಾರತ ಮತ್ತು ನಡುವಣ ಪಂದ್ಯವನ್ನು ಕಜಕೀಸ್ತಾನದ ನೂರ್ ಸುಲ್ತಾನಗೆ ಸ್ಥಳಾಂತರ ಮಾಡಲಾಗಿತ್ತು. ಹೀಗಾಗಿ ಟೂರ್ನಿಯಲ್ಲಿ ಪಾಕಿಸ್ತಾನದ ಪ್ರಮುಖ ಆಟಗಾರರು ಗೈರಾಗಿದ್ದಾರೆ. ಅವರು ಟೆನಿಸ್ ಒಕ್ಕೂಟದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮೊದಲನೇ ಪಂದ್ಯ ರಾಮ್‌ಕುಮಾರ್ ರಾಮನಾಥನ್‌ಗೆ ಪಾಕ್‌ನ 17ರ ಪ್ರಾಯದ ತರುಣ ಸವಾಲು ನೀಡಲೇ ಇಲ್ಲ. ಸುಲಭವಾಗಿ ಶರಣಾದರು. ಆದರೆ, ಸುಮಿತ್ ನಾಗಲ್ ಅವರಿಗೆ ಹುಝೇಫಾ ಮೊದಲನೇ ಸೆಟ್ ನಲ್ಲಿ ಬೇಗ ಸೋತರೂ, ಎರಡನೇ ಸೆಟ್‌ನಲ್ಲಿ ಲಾಂಗ್ ರಾಲಿಗಳ ಮೂಲಕ ಕಠಿಣ ಪ್ರತಿರೋಧ ನೀಡಿದರು. ಭಾರತ ತಂಡ ಇದುವರೆಗೂ ಪಾಕಿಸ್ತಾನದ ವಿರುದ್ಧ ಆರು ಬಾರಿ ಮುಖಾಮುಖಿಯಾಗಿದ್ದು, ಒಮ್ಮೆಯೂ ಸೋಲು ಅನುಭವಿಸಿಲ್ಲ. ಶನಿವಾರ ಲಿಯಾಂಡರ್ ಪೇಸ್ ಹಾಗೂ ಜೀವನ್ ನೆಡುನ್‌ಚೆಳಿಯನ್‌ ಅವರು ಡಬಲ್ಸ್‌ ವಿಭಾಗದಲ್ಲಿ ಹುಝೇಫಾ ಹಾಗೂ ಶೊಯೇಬ್ ವಿರುದ್ಧ ಸೆಣಸಲಿದ್ದಾರೆ. ನಾಳಿನ ಪಂದ್ಯದಲ್ಲಿ ಪೇಸ್ ಗೆದ್ದರೆ ಡೆವಿಸ್ ಕಪ್ ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಮೊದಲ ಆಟಗಾರ ಎಂಬ ಸಾಧನೆಗೆ ಭಾಜನರಾಗಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35Lg6Un

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...