6 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದ ಜಿಡಿಪಿ: 2ನೇ ತ್ರೈಮಾಸಿಕದಲ್ಲಿ ಶೇ.4.5ಕ್ಕೆ ಇಳಿಕೆ

ಹೊಸದಿಲ್ಲಿ: ಜುಲೈ-ಸೆಪ್ಟೆಂಬರ್‌ ಅವಧಿಯ ತ್ರೈಮಾಸಿಕ ಬೆಳವಣಿಗೆ ಶೇ.4.5ರಷ್ಟಿದೆ ಎಂದು ಕೇಂದ್ರ ಸರಕಾರ ಶುಕ್ರವಾರ (ನ.29) ಪ್ರಕಟಿಸಿದೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಮಟ್ಟ ಶೇ.5ಕ್ಕೆ ಕುಸಿದಿತ್ತು. ಇದೀಗ ಮತ್ತೂ ಕೆಳಮಟ್ಟಕ್ಕೆ ಕುಸಿದಿದ್ದು, 6 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದೆ. ಮಾಜಿ ಪ್ರಧಾನಿ ಹಾಗೂ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್‌ ಅವರು ಜಿಡಿಪಿ ಕುಸಿತಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಜಿಡಿಪಿ ಕುಸಿತ ಭಾರತಕ್ಕೆ ಒಂದು ಎಚ್ಚರಿಕೆ ಗಂಟೆ ಎಂದಿದ್ದಾರೆ. ಶೇ. 4.5ರಷ್ಟು ಜಿಡಿಪಿ ಸ್ವೀಕಾರಾರ್ಹವಲ್ಲ. ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.5ಕ್ಕೆ ಕುಸಿದಿದ್ದ ಜಿಡಿಪಿ ಬೆಳವಣಿಗೆ ಎರಡನೇ ತ್ರೈ,ಮಾಸಿಕದಲ್ಲಿ ಮತ್ತೂ ಕುಸಿದಿದ್ದು ಶೇ.4.5ಕ್ಕೆ ಇಳಿದಿದೆ. ಇದು ಯೋಚಿಸಲೇಬೇಕಾದ ವಿಷಯ. ಕೇವಲ ಆರ್ಥಿಕ ನೀತಿಗಳನ್ನು ಬದಲಾಯಿಸುವುದರಿಂದ ಮಾತ್ರವೇ ಆರ್ಥಿಕ ಪುನಶ್ಚೇತನ ಅಸಾಧ್ಯ ಎಂಬುದನ್ನು ಇದರಿಂದ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ಈ ನಡುವೆ ಮುಂದಿನ ಜಿಡಿಪಿ ಲೆಕ್ಕಾಚಾರದಲ್ಲಿಮೂಲ ವರ್ಷವಾಗಿ 2020-21 ಅನ್ನು ಬಳಸಲು ಸಂಸದೀಯ ಸಲಹಾ ಮಂಡಳಿ ಶಿಫಾರಸು ನೀಡಿದೆ ಎಂದು ಸರಕಾರ ಗುರುವಾರ ತಿಳಿಸಿತ್ತು.


from India & World News in Kannada | VK Polls https://ift.tt/2OAEBhz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...