ಡಿಸೆಂಬರ್‌ ಚಳಿಯಲ್ಲಿ ಮತ್ತೆ ಕಾವೇರಲಿದೆ ಅಯೋಧ್ಯೆ! ಸುಪ್ರೀಂಗೆ ಮುಸ್ಲಿಂ ಸಂಘಟನೆಗಳ ಮೇಲ್ಮನವಿ ಫಿಕ್ಸ್

ಹೊಸ ದಿಲ್ಲಿ: ನವೆಂಬರ್ 9ರಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ನೀಡಿದ ಐತಿಹಾಸಿಕ ಅಯೋಧ್ಯಾ ತೀರ್ಪಿಗೆ ಸಲ್ಲಿಸುವ ವಿಚಾರದಲ್ಲಿ ಸಂಘಟನೆಗಳ ನಡುವೆಯೇ ಒಡಕು ಮೂಡಿದೆ. ಸುಪ್ರೀಂ ತೀರ್ಪು ಪ್ರಶ್ನೆ ಮಾಡೋದಿಲ್ಲ, ವಿವಾದ ಇಷ್ಟಕ್ಕೇ ಬಗೆಹರಿಯಲಿ ಎಂದು ಈ ಹಿಂದೆಯೇ ಸುನ್ನಿ ವಕ್ಫ್‌ ಬೋರ್ಡ್‌ ನಿರ್ಧರಿಸಿದೆ. ಆದ್ರೆ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಾತ್ರ ಮೇಲ್ಮನವಿ ಸಲ್ಲಿಸಲೇಬೇಕೆಂದು ಪಟ್ಟು ಹಿಡಿದು ಕುಳಿತಿದೆ. ಪುನರ್‌ ವಿಮರ್ಶಾ ಅರ್ಜಿ ಸಲ್ಲಿಕೆ ಸಂವಿಧಾನದತ್ತ ಅಧಿಕಾರ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರತಿಪಾದಿಸಿದೆ. ಕೂಡಾ ಪುನರ್‌ ವಿಮರ್ಶಾ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ಹೀಗಾಗಿ ನಾವು ಡಿಸೆಂಬರ್‌ ಮೊದಲ ವಾರದಲ್ಲಿ ಪುನರ್‌ ವಿಮರ್ಶಾ ಅರ್ಜಿ ಸಲ್ಲಿಸುತ್ತೇವೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸ್ಪಷ್ಟಪಡಿಸಿದೆ. ಸುನ್ನಿ ವಕ್ಫ್‌ ಬೋರ್ಡ್‌ ವಿರೋಧ ಕಾನೂನಾತ್ಮಕವಾಗಿ ಯಾವುದೇ ಪರಿಣಾಮ ಬೀರೋದಿಲ್ಲ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ. ಅಷ್ಟೇ ಅಲ್ಲ, ಹೊರಪಡಿಸಿ ಮಿಕ್ಕೆಲ್ಲಾ ಮುಸ್ಲಿಂ ಸಂಘಟನೆಗಳೂ ನಮ್ಮ ಬೆಂಬಲಕ್ಕಿವೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ. ನವೆಂಬರ್ 17ರಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂ ಮಂಡಳಿ ಹಾಗೂ ಜಮಿಯತ್ ಉಲೇಮಾ ಇ ಹಿಂದ್ ಸಂಘಟನೆಗಳು ಪ್ರತ್ಯೇಕವಾಗಿ ಸಭೆ ಸೇರಿದ್ದವು. ಮುಸ್ಲಿಂ ಸಮುದಾಯದ ಕಾನೂನು ತಜ್ಞರು ಹಾಗೂ ಹಿರಿಯ ವಕೀಲರೂ ಈ ಸಭೆಯಲ್ಲಿ ಭಾಗಿಯಾಗಿದ್ರು. ಎರಡೂ ಸಂಘಟನೆಗಳು ಸುಪ್ರೀಂ ತೀರ್ಪನ್ನು ಪ್ರಶ್ನಿಸಿ ಪುನರ್‌ ವಿಮರ್ಶಾ ಮೇಲ್ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಿದ್ದವು. ಆದ್ರೆ, ಬಾಬ್ರಿ ಮಸೀದಿ ಪ್ರಕರಣದ ಮೂಲ ದಾವೆದಾರ ಸುನ್ನಿ ವಕ್ಫ್‌ ಬೋರ್ಡ್‌ ಮಾತ್ರ ಪುನರ್‌ ವಿಮರ್ಶಾ ಅರ್ಜಿ ಸಲ್ಲಿಸಲು ವಿರೋಧ ವ್ಯಕ್ತಪಡಿಸಿತ್ತು. ಈಗಲೂ ಕೂಡಾ ಸುನ್ನಿ ವಕ್ಫ್‌ ಬೋರ್ಡ್‌ ತನ್ನ ನಿಲುವಿಗೆ ಬದ್ಧವಾಗಿದೆ. ಸುನ್ನಿ ವಕ್ಫ್‌ ಬೋರ್ಡ್‌ ಹೊರತುಪಡಿಸಿ ಇನ್ನುಳಿದ ಮುಸ್ಲಿಂ ಸಂಘಟನೆಗಳ ವಾದವೇನು..? ಸುಪ್ರೀಂ ತೀರ್ಪು ಮುಸ್ಲಿಂ ಕಕ್ಷಿದಾರರ ವಿರುದ್ಧವಾಗಿ ಬಂದಿದೆ ಅನ್ನೋದು ಮುಸ್ಲಿಂ ಸಂಘಟನೆಗಳ ವಾದ. ಮುಸ್ಲಿಂ ಕಾನೂನು ತಜ್ಞರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ. ಸಂವಿಧಾನದ ಪ್ರಕಾರ ನಮಗೆ ಮೇಲ್ಮನವಿ ಸಲ್ಲಿಸುವ ಹಕ್ಕು, ಅಧಿಕಾರ ಹಾಗೂ ಆಯ್ಕೆ ಇದೆ. ಇದೀಗ ಸುಪ್ರೀಂ ಕೋರ್ಟ್‌ ಕೊಟ್ಟಿರುವ ತೀರ್ಪೇ ಅಂತಿಮ. ಹೀಗಾಗಿ, ಸುಪ್ರೀಂ ತೀರ್ಪನ್ನು ನಾವು ಪುನರ್‌ ವಿಮರ್ಶೆ ಮಾಡುವಂತೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸೋಣ ಎಂದು ಸಂಘಟನೆಗಳು ತೀರ್ಮಾನಿಸಿವೆ. ನಿವೃತ್ತ ಸಿಜೆಐ ರಂಜನ್‌ ಗೊಗೋಯ್ ತೀರ್ಪಿನಲ್ಲೇನಿತ್ತು? ನವೆಂಬರ್ 9ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ವಿವಾದಿತ 2.77 ಎಕರೆ ಭೂಮಿಯನ್ನು ಅದರ ಹಕ್ಕುದಾರ ರಾಮಲಲ್ಲಾಗೆ ಬಿಟ್ಟುಕೊಡುವಂತೆ ತೀರ್ಪು ನೀಡಿತ್ತು. ಮುಸ್ಲಿಂ ಕಕ್ಷಿದಾರರಿಗೆ ಬಾಬ್ರಿ ಮಸೀದಿ ಕಟ್ಟಿಕೊಳ್ಳಲು ಅಯೋಧ್ಯೆಯಲ್ಲೇ 5 ಎಕರೆ ಭೂಮಿ ನೀಡಲು ಆದೇಶಿಸಿತ್ತು. ಅಷ್ಟೇ ಅಲ್ಲ, ಈ ಪ್ರಕರಣದ ಮತ್ತೊಬ್ಬ ದಾವೆದಾರ ಅಖಾರಾ ಪರಿಷತ್‌ಗೆ ರಾಮಮಂದಿರ ನಿರ್ಮಾಣ ಟ್ರಸ್ಟ್‌ನಲ್ಲಿ ಸ್ಥಾನ ನೀಡುವಂತೆ ಸೂಚಿಸಿತ್ತು.


from India & World News in Kannada | VK Polls https://ift.tt/2XOZVTv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...