ಹೊಸದಿಲ್ಲಿ: ಮುಂಜಾನೆ ಕ್ರಾಂತಿಯಲ್ಲಿ ಮಹಾರಾಷ್ಟ್ರದಲ್ಲಿ ಸರಕಾರ ರಚನೆಯಾಗಿದ್ದನ್ನು ವಿರೋಧಿಸಿ ಪಕ್ಷದ ನಾಯಕರು ಸೋಮವಾರ ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸ್ವತಃ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ‘ಪ್ರಜಾಪ್ರಭುತ್ವದ ಕಗ್ಗೊಲೆ ನಿಲ್ಲಿಸಿ’ ಎಂಬ ಬ್ಯಾನರ್ ಹಿಡಿದು ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಲೋಕಸಭೆ ಅಧಿವೇಶನ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ವೇಳೆಯಲ್ಲಿ 'ಸಂವಿಧಾನದ ಹತ್ಯೆ ನಿಲ್ಲಿಸಿ... ನಿಲ್ಲಿಸಿ...' ಎಂಬ ಘೋಷಣೆಗಳನ್ನು ಹಿಂದಿಯಲ್ಲಿ ಕೂಗಿ ಗದ್ದಲವೆಬ್ಬಿಸಿದರು.
ರಾಜ್ಯಸಭೆಯಲ್ಲೂ ವಿಚಾರ ಪ್ರಸ್ತಾಪವಾಯಿತು. ಇಲ್ಲೂ ವಿರೋಧ ಪಕ್ಷಗಳ ನಾಯಕರು ಗದ್ದಲವೆಬ್ಬಿಸಿದ್ದರಿಂದ ಅಧಿವೇಶನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಲೋಕಸಭೆಯ ಕಲಾಪವನ್ನು ಮೊದಲಿಗೆ 12 ಗಂಟೆಗೆ ಮುಂದೂಡಿದರೆ, ನಂತರ ಮತ್ತೊಮ್ಮೆ ಅಧಿವೇಶನ ಸೇರಿದಾಗ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಅಧಿವೇಶನವನ್ನು 2 ಗಂಟೆಗೆ ಮುಂದೂಡಲಾಯಿತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಮತ್ತು ಸರಕಾರ ರಚನೆ ಪ್ರಯತ್ನ ಕೊನೆಯ ಹಂತದಲ್ಲಿದ್ದಾಗ ಶನಿವಾರ ಮುಂಜಾನೆ ಅಚ್ಚರಿಯ ರೀತಿಯಲ್ಲಿ ಬಿಜೆಪಿ ಸರಕಾರ ರಚಿಸಿತ್ತು. ಎರಡನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿಯಾಗಿ ಎನ್‌ಸಿಪಿಯ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ್ದರು.
from India & World News in Kannada | VK Polls https://ift.tt/34smujr