ಬೆಂಗಳೂರು: ಮಾರಣಾಂತಿಕ ಹಲ್ಲೆಗೊಳಗಾಗಿ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿರುವ ನರಸಿಂಹ ರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಅವರ ಆರೋಗ್ಯದಲ್ಲಿ ಮಂಗಳವಾರ ಚೇತರಿಕೆ ಕಂಡು ಬಂದಿದ್ದು, ಕೃತಕ ಉಸಿರಾಟಕ್ಕೆ ಅಳವಡಿಸಲಾಗಿದ್ದ ವೆಂಟಿಲೇಟರ್ನ್ನು ತೆಗೆಯಲಾಗಿದೆ. ಈ ನಡುವೆ ಶಾಸಕ ತನ್ವೀರ್ ಅವರ ಗನ್ ಮ್ಯಾನ್ ಅನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ತನ್ವೀರ್ ಮೇಲೆ ದಾಳಿ ಮಾಡುವಾಗ ಕರ್ತವ್ಯ ಲೋಪ ಎಸೆಗಿದ್ದಾರೆ ಎಂಬ ಆರೋಪದ ಮೇಲೆ ಗನ್ ಮ್ಯಾನ್ ಎಂಬವರನ್ನು ಅಮಾನತು ಮಾಡಲಾಗಿದೆ. ನವೆಂಬರ್ 17ರಂದು ರಾತ್ರಿ ಮೈಸೂರಿನ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಸೇಠ್ ಮೇಲೆ ಎಂಬಾತ ಚೂರಿಯಿಂದ ದಾಳಿ ನಡೆಸಿ ಇರಿದಿದ್ದ, ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಚೇತರಿಸಿಕೊಳ್ಳುತ್ತಿದ್ದು, ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣದ ತನಿಖೆ ಚುರುಕುಗೊಂಡಿದೆ. ಕೊಲೆಗೆ ಯತ್ನ ನಡೆಸಿದ ಆರೋಪಿ ಫರಾನ್ ಗೆ 12 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
from India & World News in Kannada | VK Polls https://ift.tt/2KBhhxw