ಬೆಂಗಳೂರು: ನವೆಂಬರ್ 21ರಂದು ಆರಂಭಗೊಳ್ಳಲಿರುವ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್ ಹಂತಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆ ಮನೀಶ್ ಪಾಂಡೆ ನೇತೃತ್ವದ 15 ಸದಸ್ಯರ ತಂಡವನ್ನು ಸೋಮವಾರ ಪ್ರಕಟಿಸಿದೆ. ಲೀಗ್ ಹಂತದ ಆರು ಪಂದ್ಯಗಳ ಪೈಕಿ ಐದರಲ್ಲಿ ಗೆದ್ದು 20 ಅಂಕಗಳೊಂದಿಗೆ 'ಎ' ಗುಂಪಿನಿಂದ ಅಗ್ರ ತಂಡವಾಗಿ ಸೂಪರ್ ಲೀಗ್ ಹಂತಕ್ಕೆ ತೇರ್ಗಡೆ ಹೊಂದಿದೆ. ಸೂಪರ್ ಲೀಗ್ ಹಂತದಲ್ಲಿ ಕರ್ನಾಟಕ ತಂಡವೀಗ ನವೆಂಬರ್ 21ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಜಸ್ಥಾನ ಸವಾಲನ್ನು ಎದುರಿಸಲಿದೆ. ಅತ್ತ ರಾಜಸ್ಥಾನ ತಂಡ ಬಿ ಗುಂಪಿನಲ್ಲಿ ಆಡಿದ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಗಳಿ 16 ಅಂಕಗಳೊಂದಿಗೆ ಎರಡನೇ ಸ್ಥಾನಿಯಾಗಿ ಸೂಪರ್ ಲೀಗ್ ಹಂತ ಪ್ರವೇಶಿಸಿದೆ. ಸೂಪರ್ ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳಲ್ಲಿ ಭಾಗವಹಿಸಲಿದೆ. ನ. 21ರ ಬಳಿಕ 22, 24 ಹಾಗೂ 25ನೇ ದಿನಾಂಕಗಳಲ್ಲಿ ಸ್ಪರ್ಧೆಗಿಳಿಯಲಿದೆ. ರಾಜಸ್ಥಾನ ಹೊರತುಪಡಿಸಿ ಇತರೆ ಸ್ಪರ್ಧಿಗಳು ಇನ್ನಷ್ಟೇ ನಿಗದಿಯಾಗಬೇಕಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೆಮಿಫೈನಲ್ ಪಂದ್ಯಗಳು ನವೆಂಬರ್ 29ರಂದು ಸೂರತ್‌ನ್ ಲಾಲ್‌ಬಾಗ್ ಕಾಂಟ್ರಾಕ್ಟರ್ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಗೆಯೇ ಅದೇ ಮೈದಾನದಲ್ಲಿ ಡಿಸೆಂಬರ್ 1 ಭಾನುವಾರದಂದು ಫೈನಲ್ ಪಂದ್ಯ ಆಯೋಜನೆಯಾಗಲಿದೆ. ಕರ್ನಾಟಕ ತಂಡ ಇಂತಿದೆ: ಮನೀಶ್ ಪಾಂಡೆ (ನಾಯಕ), ಕರುಣ್ ನಾಯರ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ರೋಹನ್ ಕದಂ, ಪವನ್ ದೇಶಪಾಂಡೆ, ಲವ್ನಿಥ್ ಸಿಸೋಡಿಯಾ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಜಗದೀಶ್ ಸುಚಿತ್, ಪ್ರವೀಣ್ ದುಬೆ, ಅಭಿಮನ್ಯು ಮಿಥುನ್, ವಿ ಕೌಶಿಕ್, ರೋನಿತ್ ಮೋರೆ, ಮನೋಜ್ ಭಾಂಡಗೆ ಮತ್ತು ಅನಿರುದ್ಧ ಜೋಶಿ. ಗುಂಪು ಎ ಅಂಕಪಟ್ಟಿ ಇಂತಿದೆ: ಕರ್ನಾಟಕ: ಪಂದ್ಯ: 6, ಗೆಲುವು: 5, ಸೋಲು: 1, ಅಂಕ: 20, ನೆಟ್ ರನ್‌ರೇಟ್: +2.052 ಬರೋಡಾ: ಪಂದ್ಯ: 6, ಗೆಲುವು: 5, ಸೋಲು: 1, ಅಂಕ: 20, ನೆಟ್ ರನ್‌ರೇಟ್: +1.351 ಸರ್ವಿಸಸ್: ಪಂದ್ಯ: 6, ಗೆಲುವು: 4, ಸೋಲು: 2, ಅಂಕ: 16, ನೆಟ್ ರನ್‌ರೇಟ್: +0.234 ಆಂಧ್ರ: ಪಂದ್ಯ: 6, ಗೆಲುವು: 3, ಸೋಲು: 3, ಅಂಕ: 12, ನೆಟ್ ರನ್‌ರೇಟ್: +0.797 ಉತ್ತರಖಂಡ: ಪಂದ್ಯ: 6, ಗೆಲುವು: 2, ಸೋಲು: 4, ಅಂಕ: 8, ನೆಟ್ ರನ್‌ರೇಟ್: -0.386 ಗೋವಾ: ಪಂದ್ಯ: 6, ಗೆಲುವು: 2, ಸೋಲು: 4, ಅಂಕ: 8, ನೆಟ್ ರನ್‌ರೇಟ್: -0.917 ಗೋವಾ: ಪಂದ್ಯ: 6, ಗೆಲುವು: 0, ಸೋಲು: 6, ಅಂಕ: 0, ನೆಟ್ ರನ್‌ರೇಟ್: -3.068
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32VEKQB