ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದ ಯಂಗ್ ಶುಭಮನ್ ಗಿಲ್

ರಾಂಚಿ: ಭಾರತೀಯ ಕ್ರಿಕೆಟ್‌ನ ಯುವ ಆಟಗಾರ , ದೇಶೀಯ ಟೂರ್ನಿಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. 20ರ ಹರೆಯದ ಶುಭಮನ್ ಗಿಲ್, ದೇವಧರ್ ಟ್ರೋಫಿ ಫೈನಲ್‌ನಲ್ಲಿ ನಾಯಕತ್ವ ವಹಿಸಿದ ಅತಿ ಕಿರಿಯ ಆಟಗಾರನೆಂಬ ಹಿರಿಮೆಗೆ ಭಾಜನವಾಗಿದ್ದಾರೆ. ಈ ಮೂಲಕ ಭಾರತದ ನಾಯಕ ಅವರ 10 ವರ್ಷ ಹಳೆಯ ದಾಖಲೆಯನ್ನೇ ಮುರಿದಿದ್ದಾರೆ. ದೇವಧರ್ ಟ್ರೋಫಿ ಟೂರ್ನಿಯಲ್ಲಿ ಭಾರತ ಸಿ ತಂಡವನ್ನು ಗಿಲ್ ಮುನ್ನಡೆಸುತ್ತಿದ್ದಾರೆ. ಅಲ್ಲದೆ ಸೋಮವಾರ ಭಾರತ ಬಿ ವಿರುದ್ಧ ಫೈನಲ್‌ನಲ್ಲಿ ಕಣಕ್ಕಿಳಿಯುವ ಮೂಲಕ ದೇವಧರ್ ಟ್ರೋಫಿ ಫೈನಲ್ಸ್‌ನ ಅತಿ ಕಿರಿಯ ನಾಯಕ ಪಟ್ಟ ವಹಿಸಿದ್ದಾರೆ. ದೇವಧರ್ ಟ್ರೋಫಿ ಫೈನಲ್‌ನ ಅತಿ ಕಿರಿಯ ನಾಯಕರು:
  • ಶುಭಮನ್ ಗಿಲ್ (20 ವರ್ಷ 57 ದಿನ), ಭಾರತ ಸಿ, 2019-20
  • ವಿರಾಟ್ ಕೊಹ್ಲಿ (21 ವರ್ಷ 124 ದಿನ), ಉತ್ತರ ವಲಯ, 2009-10
  • ಉನ್ಮುಕ್ತ್ ಚಾಂದ್, (22 ವರ್ಷ 310 ದಿನ), ಭಾರತ ಬಿ, 2017-18
  • ಮನೋಜ್ ತಿವಾರಿ, (23 ವರ್ಷ 124 ದಿನ), ಪೂರ್ವ ವಲಯ, 2008-09
  • ಕಪಿಲ್ ದೀವ್ (23 ವರ್ಷ 305 ದಿನ), ಉತ್ತರ ವಲಯ, 1982-83
ವಿರಾಟ್ ಕೊಹ್ಲಿ ಜತೆಗೆ ಕೆಲವು ಸಾಮತ್ಯೆಗಳನ್ನು ಶುಭಮನ್ ಗಿಲ್ ಹೊಂದಿದ್ದಾರೆ. ಶುಭಮನ್ ಗಿಲ್ 2018ರ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು. ಈ ಹಿಂದೆ 2008ರಲ್ಲಿ ವಿರಾಟ್ ಕೊಹ್ಲಿ ಮುಂದಾಳತ್ವದಲ್ಲಿ ಭಾರತ ಅಂಡರ್-19 ವಿಶ್ವಕಪ್ ಜಯಿಸಿತ್ತು. ಹಾಗಿದ್ದರೂ ಫೈನಲ್ ಪಂದ್ಯದಲ್ಲಿ ಮಿಂಚಲು ಗಿಲ್‌ಗೆ ಸಾಧ್ಯವಾಗಲಿಲ್ಲ. ಕೇವಲ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದಲ್ಲಿ ಕಾಣಿಸಿಕೊಂಡರೂ ಆಡುವ ಅವಕಾಶದಿಂದ ಗಿಲ್ ವಂಚಿತರಾಗಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2PJpKCg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...