ಸಿಯಾಚಿನ್ ನಲ್ಲಿ ಹಿಮಪಾತ, ನಾಲ್ವರು ಯೋಧರು ಸೇರಿ 6 ಮಂದಿ ಬಲಿ

ಹೊಸದಿಲ್ಲಿ: ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಉತ್ತರ ಭಾಗದಲ್ಲಿ ಸೋಮವಾರ ಸಂಭವಿಸಿದ ಹಿಮಪಾತಕ್ಕೆ ನಾಲ್ವರು ಭಾರತೀಯ ಯೋಧರು ಸೇರಿ ಇಬ್ಬರು ನಾಗರೀಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮಧ್ಯಾಹ್ನ 3.30ರ ವೇಳೆಯಲ್ಲಿ ಈ ದುರ್ಘಟನೆ ನಡೆದಿದ್ದು, ಒಟ್ಟು ಎಂಟು ಮಂದಿ ಹಿಮದಡಿ ಸಿಲುಕಿದ್ದರು. ಪ್ರದೇಶದ ಉತ್ತರಭಾಗದ 19,000 ಅಡಿ ಎತ್ತರದಲ್ಲಿ ಗಸ್ತು ತಿರುಗುತ್ತಿದ್ದಾಗ ಈ ದುರಂತ ನಡೆದಿದ್ದು, ತಕ್ಷಣ ಸಮೀಪದ ಶಿಬಿರದಲ್ಲಿ ಇದ್ದ ಯೋಧರು ಕಾರ್ಯಾಚರಣೆ ನಡೆಸಿ ಹಿಮದಡಿಯಿಂದ ಹೊರತೆಗೆದರು. ಇದರಲ್ಲಿ ತೀರ್ವರವಾಗಿ ಗಾಯಗೊಂಡ 7 ಮಂದಿಯನ್ನು ಸೇನಾ ಹೆಲಿಕಾಪ್ಟರ್ ಮೂಲಕ ಸಮೀಪದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆರು ಮಂದಿ ಸಾವನ್ನಪ್ಪಿದ್ದಾರೆ. ಸಿಯಾಚಿನ್ ನೀರ್ಗಲ್ಲು ಪ್ರದೇಶ ಕಾಕೋರಂ ಪರ್ವತ ಶ್ರೇಣಿಯಲ್ಲಿದ್ದು, ಸಮುದ್ರ ಮಟ್ಟದಿಂದ ಸುಮಾರು 20,000 ಅಡಿ ಎತ್ತರದಲ್ಲಿದೆ. ಜಗತ್ತಿನ ಅತ್ಯಂತ ಎತ್ತರದ ಯುದ್ಧಭೂಮಿಯಾಗಿರುವ ಈ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಯೋಧರು ಗಡಿ ಕಾಯುತ್ತಾರೆ. ಪ್ರತಿ ಚಳಿಗಾಲದಲ್ಲಿ ಈ ಪ್ರದೇಶದಲ್ಲಿ ಹವಾಮಾನ ಹೆಚ್ಚು ಶೀತದಿಂದ ಕೂಡಿರುತ್ತದೆ. ಮೈನಸ್ 60 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತದೆ. ಈ ವೇಳೆ ಹಿಮಪ್ರವಾಹವೂ ಆರಂಭವಾಗುತ್ತದೆ.


from India & World News in Kannada | VK Polls https://ift.tt/2XAWv6N

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...