IND vs SA: ಹರಿಣಗಳ ತಂಡವನ್ನು ಆದಷ್ಟು ಬೇಗನೇ ಕಟ್ಟಿಹಾಕುವ ತವಕದಲ್ಲಿ ಟೀಮ್ ಇಂಡಿಯಾ

ವಿಶಾಖಪಟ್ಟಣ: ಇಲ್ಲಿನ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ 502 ರನ್‌ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ ದಿಟ್ರ ಪ್ರತ್ಯುತ್ತರ ನೀಡುತ್ತಿದ್ದು, 385/8 ಎಂಬಲ್ಲಿದ್ದ ನಾಲ್ಕನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರಿಸಿದೆ. ತಾಜಾ ಮಾಹಿತಿ ನಿರೀಕ್ಷಿಸಿ... ದ.ಆಫ್ರಿಕಾ ದಿಟ್ಟ ಹೋರಾಟ; ಅಶ್ವಿನ್ ಕಡಿವಾಣ... ಹರಿಣಗಳ ತಂಡವನ್ನು ಭಾರತೀಯ ಬೌಲರ್‌ಗಳು ಬೇಗನೇ ಕಟ್ಟಿಹಾಕುವ ನಿರೀಕ್ಷೆಯಿದ್ದರೂ ಯೋಜನೆಗಳೆಲ್ಲ ತಲೆಕೆಳಗಾದವು. ದಕ್ಷಿಣ ಆಫ್ರಿಕಾದ ಎಡಗೈ ಅನುಭವಿ ಆರಂಭಿಕ ಡೀನ್ ಎಲ್ಗರ್ (160) ಹಾಗೂ ಕ್ವಿಂಟನ್ ಡಿ ಕಾಕ್ (111) ಸಮಯೋಚಿತ ಶತಕ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ (55) ಆಕರ್ಷಕ ಅರ್ಧಶತಕದ ನೆರವಿನಿಂದ ಮೂರನೇ ದಿನದಾಟದಲ್ಲಿ ಎಂಟು ವಿಕೆಟ್ ನಷ್ಟಕ್ಕೆ 385 ರನ್ ಪೇರಿಸಿದೆ. ಆದರೂ 117 ರನ್‌ಗಳ ಹಿನ್ನಡೆಯಲ್ಲಿದೆ. ಭಾರತದ ಪರ ಐದು ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್, ಹರಿಣಗಳ ಓಟಕ್ಕೆ ಅಲ್ಪ ಮಟ್ಟಿನ ಕಡಿವಾಣ ಹಾಕಿದರು. ಮಯಾಂಕ್ ಮಾಯೆ, ರೋ'ಹಿಟ್'... ಈ ಮೊದಲು ಮಳೆ ಬಾಧಿತ ಪ್ರಥಮ ದಿನದಲ್ಲಿ ಮುರಿಯದ ಮೊದಲ ವಿಕೆಟ್‌ಗೆ 202 ರನ್‌ ಗಳಿಸಿದ್ದ ರೋಹಿತ್‌ ಶರ್ಮಾ ಮತ್ತು ಮಯಾಂಕ್‌ ಅಗರ್ವಾಲ್, 2ನೇ ದಿನ ಸರಣಿ ದಾಖಲೆಗಳೊಂದಿಗೆ ಗಮನ ಸೆಳೆದರು. ಅದರಲ್ಲೂ28 ವರ್ಷದ ಕರ್ನಾಟಕದ ಬಲಗೈ ಬ್ಯಾಟ್ಸ್‌ಮನ್‌ ಮಯಾಂಕ್‌ ಚೊಚ್ಚಲ ಶತಕವನ್ನು ದ್ವಿಶತಕವಾಗಿ (215) ಪರಿವರ್ತಿಸಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್‌ ಎಂಬ ಹಿರಿಮೆಗೆ ಭಾಜನರಾದರು. ಇನ್ನೊಂದೆಡೆ ಆರಂಭಿಕನಾಗಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿರುವ 176 ರನ್ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದರು. 5ನೇ ಟೆಸ್ಟ್‌ ಆಡುತ್ತಿರುವ ಮಯಾಂಕ್‌, ಮೊದಲ ವಿಕೆಟ್‌ಗೆ ರೋಹಿತ್‌ ಶರ್ಮ ಜತೆ 317 ರನ್‌ಗಳ ದಾಖಲೆ ಜತೆಯಾಟದಲ್ಲಿಯೂ ಭಾಗಿಯಾದರು. ಇದರೊಂದಿಗೆ ಆರಂಭಿಕರಾಗಿ 300ಕ್ಕೂ ಅಧಿಕ ರನ್‌ ಪೇರಿಸಿದ ಭಾರತದ ಮೂರನೇ ಜೋಡಿ ಎಂಬ ಗೌರವಕ್ಕೆ ಮಯಾಂಕ್‌ ಮತ್ತು ರೋಹಿತ್‌ ಪಾತ್ರರಾದರು. ಇದು ಒಟ್ಟಾರೆ 12ನೇ ಗರಿಷ್ಠ ಮೊತ್ತದ ಆರಂಭಿಕ ಜತೆಯಾಟವಾಗಿಯೂ ಕಡತ ಸೇರಿತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Vch9c4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...