IND vs SA: ಫಾಲೋಆನ್ ಭೀತಿಯಲ್ಲಿ ದಕ್ಷಿಣ ಆಫ್ರಿಕಾ

ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿನ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸಂಪೂರ್ಣ ಹಿಡಿತ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಚೊಚ್ಚಲ ದ್ವಿಶತಕ (215) ಹಾಗೂ ಭರ್ಜರಿ ಶತಕದ (176) ನೆರವಿನಿಂದ 136 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 502 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಬಳಿಕ ಉತ್ತರ ನೀಡಲಾರಂಭಿಸಿದ ದಕ್ಷಿಣ ಆಫ್ರಿಕಾ, ಎರಡನೇ ದಿನದಂತ್ಯಕ್ಕೆ 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿದೆ. ರವಿಚಂದ್ರನ್ ಅಶ್ವಿನ್ 9 ರನ್ನಿಗೆ ಎರಡು ವಿಕೆಟ್ ಪಡೆದು ಮಿಂಚಿದರು. ಎರಡನೇ ದಿನದಂತ್ಯಕ್ಕೆ 463 ರನ್‌ಗಳ ಹಿನ್ನಡೆಯಲ್ಲಿರುವ ದಕ್ಷಿಣ ಆಫ್ರಿಕಾ, ಫಾಲೋ ಆನ್ ಭೀತಿಯಲ್ಲಿದೆ. ಫಾಲೋಆನ್‌ನಿಂದ ತಪ್ಪಿಸಿಕೊಳ್ಳಲು ಇನ್ನು ಏಳು ವಿಕೆಟ್ ಬಾಕಿ ಉಳಿದಿರುವಂತೆಯೇ 263 ರನ್‌ಗಳಿಸಬೇಕಾದ ಅಗತ್ಯವಿದೆ. ಮೊದಲ ದಿನ ಮುರಿಯದ ಮೊದಲ ವಿಕೆಟ್‌ಗೆ 202 ರನ್‌ ಗಳಿಸಿದ್ದ ರೋಹಿತ್‌ ಮತ್ತು ಮಯಾಂಕ್‌, 2ನೇ ದಿನ ಸರಣಿ ದಾಖಲೆಗಳೊಂದಿಗೆ ಗಮನ ಸೆಳೆದರು. ಅದರಲ್ಲೂ28 ವರ್ಷದ ಕರ್ನಾಟಕದ ಬಲಗೈ ಬ್ಯಾಟ್ಸ್‌ಮನ್‌ ಮಯಾಂಕ್‌ ಚೊಚ್ಚಲ ಶತಕವನ್ನು ದ್ವಿಶತಕವಾಗಿ ಪರಿವರ್ತಿಸಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್‌ ಎಂಬ ಹಿರಿಮೆಗೆ ಭಾಜನರಾದರು. 5ನೇ ಟೆಸ್ಟ್‌ ಆಡುತ್ತಿರುವ ಮಯಾಂಕ್‌, ಮೊದಲ ವಿಕೆಟ್‌ಗೆ ರೋಹಿತ್‌ ಶರ್ಮ ಜತೆ 317 ರನ್‌ಗಳ ದಾಖಲೆ ಜತೆಯಾಟದಲ್ಲಿಯೂ ಭಾಗಿಯಾದರು. ಇದರೊಂದಿಗೆ ಆರಂಭಿಕರಾಗಿ 300ಕ್ಕೂ ಅಧಿಕ ರನ್‌ ಪೇರಿಸಿದ ಭಾರತದ ಮೂರನೇ ಜೋಡಿ ಎಂಬ ಗೌರವಕ್ಕೆ ಮಯಾಂಕ್‌ ಮತ್ತು ರೋಹಿತ್‌ ಪಾತ್ರರಾದರು. ಇದು ಒಟ್ಟಾರೆ 12ನೇ ಗರಿಷ್ಠ ಮೊತ್ತದ ಆರಂಭಿಕ ಜತೆಯಾಟವಾಗಿಯೂ ಕಡತ ಸೇರಿತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/332Q9OR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...