ಬೆಂಗಳೂರು: ಕರ್ನಾಟಕ ವಿಚಾರವಾಗಿ ರಾಜ್ಯ ಸರಕಾರ ಸಲ್ಲಿಸಿರುವ ವರದಿಯನ್ನು ಕೇಂದ್ರ ಸರಕಾರ ತಿರಸ್ಕೃರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರವಾಹ ಬಂದು ರಾಜ್ಯಕ್ಕೆ 38 ಸಾವಿರ ಕೋಟಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ವರದಿ ಸಲ್ಲಿಸಿತ್ತು. ಆದರೆ ಈ ವಾದವನ್ನು ಒಪ್ಪದ ಕೇಂದ್ರದ ಅಧಿಕಾರಿಗಳ ತಂಡ, ನೆರೆ ಪರಿಹಾರ ಕುರಿತು ಸಮರ್ಪಕ ವರದಿ ನೀಡಲು ರಾಜ್ಯದ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಕಾರಣ ಕೊಟ್ಟಿದೆ. ರಾಜ್ಯ ಸರಕಾರದ ವರದಿಗೂ ಕೇಂದ್ರ ಅಧ್ಯಯನ ತಂಡ ನೀಡಿರುವ ವರದಿಗೂ ಸಾಮ್ಯತೆಯಿಲ್ಲ. ಹೀಗಾಗಿ ಪ್ರವಾಹದಿಂದ ಆಗಿರುವ ನಷ್ಟ ಕುರಿತು ಪ್ರಮಾಣೀಕೃತ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಮತ್ತೆ ಸೂಚನೆ ನೀಡಲಾಗಿದೆ. ಪ್ರವಾಹ ಪರಿಸ್ಥಿತಿ ಕುರಿತು ರಾಜ್ಯ ಸರಕಾರದ ಅಧಿಕಾರಿಗಳ ಕಾರ್ಯ ನಿರ್ವಹಣೆಯನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಅಧ್ಯಯನ ತಂಡ. ಕೇಂದ್ರದ ಅಂದಾಜಿನ ಪ್ರಕಾರ 1.15 ಲಕ್ಷ ಮನೆಗಳಿಗೆ ಹಾನಿಯಾಗಿದೆ. ಆದರೆ ರಾಜ್ಯ ಸರಕಾರ 2.5 ಲಕ್ಷ ಹಾನಿಯಾಗಿದೆ ಎಂದು ವರದಿ ನೀಡಿತ್ತು. ಹಾನಿಯಾದ ಎಲ್ಲಾ ಮನೆಗಳು ಐದು ಲಕ್ಷ ಬೆಲೆ ಬಾಳುತ್ತದೆಯೇ ಎಂದು ಪ್ರಶ್ನಿಸಿರುವ ಕೇಂದ್ರ ನಿಯಮಾವಳಿ ಪ್ರಕಾರ ಪ್ರಮಾಣೀಕೃತ ವರದಿ ಸಲ್ಲಿಸಿ ಎಂದು ಆದೇಶಿಸಿದೆ. 25 ಮಂದಿ ಉತ್ತರ ಕುಮಾರರೇ ನಿಮ್ಮ ಉತ್ತರವೇನು?: ಕೈ ಟ್ವೀಟ್ ರಾಜ್ಯಕ್ಕೆ ನರೆ ಪರಿಹಾರ ಕೋರಿ ಸಲ್ಲಿಸಿರುವ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿರುವುದಕ್ಕೆ ಕಾಂಗ್ರೆಸ್ ಖಂಡನೆ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ಟಿಟ್ಟರ್ ನಲ್ಲಿ ರಾಜ್ಯ ಕಾಂಗ್ರೆಸ್ "ಪರಿಹಾರ ಕೋರಿ ರಾಜ್ಯ ಸಲ್ಲಿಸಿರುವ ನೆರೆಯ ನಷ್ಟದ ವರದಿಯನ್ನು ಕೇಂದ್ರವು ತಿರಸ್ಕರಿಸುವುದು ಖಂಡನೀಯ. ಪರಿಹಾರ ಬಿಡುಗಡೆ ಮಧ್ಯಂತರವೂ ಇಲ್ಲ. ವರದಿ ನಂತರವೂ ಇಲ್ಲ! ರಾಜ್ಯಕ್ಕೆ ಮಾಡುತ್ತಿರುವ ದ್ರೋಹವನ್ನು ಸಹಿಸುವುದು ಹೇಗೆ? 25 ಮಂದಿ ಉತ್ತರ ಕುಮಾರರೇ ನಿಮ್ಮ ಉತ್ತರವೇನು? ಯಡಿಯೂರಪ್ಪ ಅವರೇ ಪರಿಹಾರ ಕಾರ್ಯ ಸರಿಯಾಗಿ ನಿರ್ವಹಿಸಿ ಇಲ್ಲ ನಿರ್ಗಮಿಸಿ." ಎಂಸು ಬರೆದುಕೊಂಡಿದೆ.
from India & World News in Kannada | VK Polls https://ift.tt/2Vaypyi