ತಪ್ಪಿದ ದುರಂತ, ಮೈಸೂರಿಗೆ ಹೊರಟಿದ್ದ ವಾಯುಸೇನೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಮಂಡ್ಯ: ಭಾರತೀಯ ವಾಯುಸೇನೆಗೆ ಸೇರಿದ ತಾಂತ್ರಿಕ ದೋಷದಿಂದಾಗಿ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ‌ ಚೆನ್ನಹಳ್ಳಿ ಬುಧವಾರ ತುರ್ತು ಭೂಸ್ಪರ್ಶ ಮಾಡಿದೆ. ಮೈಸೂರು 2019ರ ಹಿನ್ನೆಲೆಯಲ್ಲಿ ಏರ್ ಷೋ ಗಾಗಿ ಅರಮನೆ ನಗರಿಗೆ ತೆರಳುತ್ತಿದ್ದ ವೇಳೆ ಸೇನಾ ಹೆಲಿಕಾಪ್ಟರ್ ನಲ್ಲಿ ಹೈಡ್ರಾಲಿಕ್ ವ್ಯವಸ್ಥೆ ಕೈಕೊಟ್ಟ ಕಾರಣಕ್ಕೆ ಚೆನ್ನಹಳ್ಳಿಯ ಮಹದೇವಪುರ ದ ಗದ್ದೆಯಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಇದನ್ನು ಕಂಡ ಗ್ರಾಮಸ್ಥರು ಗಾಬರಿಗೊಂಡರು. ಉತ್ಸುಕರಾದ ಜನರು ಹೆಲಿಕಾಪ್ಟರ್ ಅನ್ನು ನೋಡಲು ಮುಗಿಬಿದ್ದರು. ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇನ್ನು ಸೇನಾ ಹೆಲಿಕಾಪ್ಟರ್ ಪೈಲಟ್ ನ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿದೆ. ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ. ಇನ್ನು ಹೆಲಿಕಾಪ್ಟರ್ ನ ಪೈಲೆಟ್ ಕೂಡ ಸುರಕ್ಷಿತವಾಗಿದ್ದು, ಯಾವುದೇ ಹಾನಿ, ಅಪಾಯ ಇಲ್ಲ ಎಂದು ಸೇನೆ ಮಾಹಿತಿ ನೀಡಿದೆ.


from India & World News in Kannada | VK Polls https://ift.tt/2pgbXYO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...