ಖಜಾನೆ ಖಾಲಿ ಹೇಳಿಕೆ ನೇಕಾರರಿಗೆ ನೆರವಾಗಲು ಮಾತ್ರ, ಸಿಎಂ ಹೇಳಿಕೆ ತಿರುಚಲಾಗಿದೆ: ಸಿ ಟಿ ರವಿ

ಕೋಲಾರ: ರಾಜ್ಯ ಸರಕಾರದ ಖಜಾನೆ ಖಾಲಿಯಾಗಿರುವುದು ನೇಕಾರರ ಉದ್ಯಮಕ್ಕೆ ನೆರವಾಗಲು ಮಾತ್ರ ಎಂದು ಸಮರ್ಥನೆ ನೀಡಿರುವ ಪ್ರವಾಸೋದ್ಯಮ ಸಚಿವ , ಮಾಧ್ಯಮಗಳು ಮುಖ್ಯಮಂತ್ರಿ ಅವರ ಹೇಳಿಕೆಯನ್ನು ತಿರುಚಿವೆ ಎಂದು ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಪರಿಹಾರ ಬಿಡುಗಡೆ ಮಾಡುವಲ್ಲಿ ಕೇಂದ್ರ ಸರಕಾರ ತಾರತಮ್ಯ ತೋರುತ್ತಿಲ್ಲ. ಪರಿಹಾರ ಮೊತ್ತ ಪರಿಷ್ಕರಿಸಿ ವರದಿ ಸಲ್ಲಿಸುವಂತೆ ಕೇಳಿದೆ ಎಂದಿದ್ದಾರೆ. ಪರಿಹಾರ ಬಿಡುಗಡೆ ಸಹಜವಾಗಿಯೇ ವಿಳಂಬವಾಗುತ್ತದೆ. ಆದರೆ, ಶೀಘ್ರದಲ್ಲಿಯೇ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಒದಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಅವರ ಜನಹಿತ ಅಭಿಪ್ರಾಯವನ್ನು ಬೆಂಬಲಿಸುತ್ತೇನೆ. ಅತಿವೃಷ್ಟಿ ಪರಿಹಾರ ಪಡೆಯಲು ರಾಜ್ಯ ಸರಕಾರದ ಪ್ರಯತ್ನವನ್ನು ಅವರಿಗೆ ವಿವರಿಸುತ್ತೇನೆಂದು ಹೇಳಿದರು. ಕಾಂಗ್ರೆಸ್-ಜೆಡಿಎಸ್ ಬಂಡಾಯ ಶಾಸಕರ ರಾಜೀನಾಮೆಯಿಂದ ತೆರವಾಗಿರುವ 15 ವಿಧಾನಸಭೆ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ, ಅವರ ಪರ ಕೆಲಸ ಮಾಡುತ್ತೇನೆಂದು ಸಚಿವ ಸಿ ಟಿ ರವಿ ಹೇಳಿದರು. ನೆರೆ ಪರಿಹಾರ ಕೊಡಲು ರಾಜ್ಯದ ಬಳಿ ಹಣವಿಲ್ಲ. ಬೊಕ್ಕಸ ಖಾಲಿಯಾಗಿದೆ ಎಂದು ಯಡಿಯೂರಪ್ಪ ಅವರು ಬೆಳಗಾವಿ ಜಿಲ್ಲಾ ಪಂತಾಯತ್ ಸಭಾಂಗಣದಲ್ಲಿ ನೀಡಿದ ಹೇಳಿಕೆ ವಿರೋಧ ಪಕ್ಷಗಳ ನಾಯಕರಿಗೆ ಅಸ್ತ್ರವಾಗಿತ್ತು.


from India & World News in Kannada | VK Polls https://ift.tt/32ZgIo4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...