ಬಾಗಲಕೋಟೆ: ನೆರೆಭಾದಿತ ಪ್ರದೇಶದ ವೀಕ್ಷಣೆಗೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್. ಕಾಯ೯ಕ್ರಮಕ್ಕೆ ಬಂದೂಬಸ್ತ್ ಗಾಗಿ ತೆರಳುತ್ತಿದ್ದ ಪೋಲಿಸ ವಾಹನ ಫಲ್ಟಿಯಾಗಿದ್ದು, ಓರ್ವ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿರುವ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸೈದಾಪೂರ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಇಳಕಲ್ ಪಿಎಸ್ಐ ಕುಮಾರ ಹೆಡಕರ್, ಡ್ರೈವರ್ ಶಿವಾನಂದ, ಪೇದೆ ಮಂಜುನಾಥ ಗಾಯಗೊಂಡಿದ್ದಾರೆ. ಇಂದು ಸಿಎಂ ಆಗಮನ ಹಿನ್ನೆಲೆಯಲ್ಲಿ ಪೋಲಿಸರು ವಾಹನದೊಂದಿಗೆ ರಿಹಸ೯ಲ್ ನಲ್ಲಿ ತೊಡಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯ ಸೈದಾಪೂರ ಬಳಿ ಕಪ್ಪಲಗುದ್ದಿ ಕ್ರಾಸ್‌ನಲ್ಲಿ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಕಬ್ಬಿನ ಹೊಲಕ್ಕೆ ನುಗ್ಗಿರುವ ಪೋಲಿಸ ವಾಹನ ಫಲ್ಟಿಯಾಗಿದೆ. ಈ ಅಪಘಾತದಲ್ಲಿ ಪಿಎಸ್ಐ ಸೇರಿ ಮೂವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಬುಲೆನ್ಸ್ ಮೂಲಕ ಗಾಯಗೊಂಡ ಪೋಲಿಸರ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಪೊಲೀಸ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸ್ ವಾಹನ ಇಳಕಲ್ ದಿಂದ ಸೈದಾಪೂರಕ್ಕೆ ಬಂದೂಬಸ್ತ್ ಗೆ ತೆರಳುತ್ತಿತ್ತು.
from India & World News in Kannada | VK Polls https://ift.tt/30IYyp2