ಮಡಿಕೇರಿ ದಸರಾ ಸಂಭ್ರಮ : ಕೊಡಗು ಜಾನಪದ ಉತ್ಸವಕ್ಕೆ ಚಾಲನೆ

ಕೊಡಗು: ಮಂಜಿನ ನಗರಿ ಮಡಿಕೇರಿಯಲ್ಲಿ ಮೂರು ದಿನಗಳಿಂದ ದಸರಾ ಉತ್ಸವ ನಡೆಯುತ್ತಿದೆ. ದಸರಾ ಜನೋತ್ಸವ ಅಂಗವಾಗಿ ಕೊಡಗು ಜಾನಪದ ಉತ್ಸವಕ್ಕೆ ಗುರುವಾರ ಚಾಲನೆ ದೊರೆತಿದೆ. ಉತ್ಸವದಲ್ಲಿ ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆ ಬಿಂಬಿಸುವ ಕಲಾತಂಡಗಳ ಮೆರವಣಿಗೆ ನಡೆದವು. ಮಂಜಿನ ನಗರಿಯಲ್ಲಿ ಜಾನಪದ ಜಾಥಾ ಗಮನ ಸೆಳೆಯಿತು. ಮೈಸೂರು ದಸರಾದಂತೆಯೇ ಮಡಿಕೇರಿಯಲ್ಲೂ ಒಂಬತ್ತು ದಿನಗಳ ದಸರಾ ಹಬ್ಬ ಆಚರಿಸಲಾಗುತ್ತದೆ. ಈ ವರ್ಷ ಸೆ.30ರಿಂದ ಅ.8ರ ವರೆಗೆ ನಡೆಯಲಿದೆ. ಅ.2ರಂದು ಮಕ್ಕಳ ದಸರಾ, ಇಂದು (ಅ.3) ಜನಪದೋತ್ಸವಕ್ಕೆ ಚಾಲನೆ ನೀಡಲಾಗಿದೆ. ಅ.4ರಂದು ಕವಿಗೋಷ್ಠಿ, ಅ.5ರಂದು ಯುವ ದಸರಾ, ಅ.6ರಂದು ಮಹಿಳಾ ದಸರಾ, ವಿಜಯ ದಶಮಿಯ ಕೊನೆಯ ದಿನ ಸಂಗೀತ ರಸ ಮಂಜರಿ ನಡೆಯುತ್ತದೆ. ದಶಮಂಟಪಗಳ ಶೋಭಾಯಾತ್ರೆ ಕೊನೆಯಾಗುತ್ತಿದ್ದಂತೆಯೇ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಮೂಲಕ ಮಡಿಕೇರಿ ದಸರಾ ಉತ್ಸವ ಸಂಪನ್ನವಾಗಲಿದೆ.


from India & World News in Kannada | VK Polls https://ift.tt/2pros3F

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...