ವೀರು-ದ್ರಾವಿಡ್ ದಾಖಲೆಯನ್ನೇ ಮುರಿದ ರೋಹಿತ್-ಮಯಾಂಕ್

ವಿಶಾಖಪಟ್ಟಣ: ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಶೈಲಿಯಲ್ಲಿ ಬ್ಯಾಟಿಂಗ್ ಬೀಸಿರುವ , ಟೆಸ್ಟ್ ಓಪನರ್‌ ಆಗಿ ಕ್ರೀಸಿಗಿಳಿದ ಮೊದಲ ಪಂದ್ಯದಲ್ಲೇ 176 ರನ್ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ರೋಹಿತ್ ಅಮೋಘ ಶತಕೋತ್ತರ ಶತಕಾರ್ಧದ ಸಾಧನೆ ಮಾಡಿದ್ದರು. ಅಷ್ಟೇ ಯಾಕೆ ತಮ್ಮ ಜತೆಗಾರ ಕರ್ನಾಟಕದ ಜತೆ ಸೇರಿ ಮೊದಲ ವಿಕೆಟ್‌ಗೆ 317 ರನ್‌ಗಳ ದಾಖಲೆಯನ್ನು ಬರೆದರು. ಈ ಮೂಲಕ ಮಾಜಿ ದಿಗ್ಗಜರಾದ ವೀರೇಂದ್ರ ಸೆಹ್ವಾಗ್ ಹಾಗೂ ರಾಹುಲ್ ದ್ರಾವಿಡ್ ದಾಖಲೆಯನ್ನೇ ಮುರಿದಿದ್ದಾರೆ. ಇದು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ವಿಕೆಟ್‌ಗೆ ಭಾರತ ಗಳಿಸಿದ ಅತ್ಯಧಿಕ ರನ್‌ಗಳ ಜತೆಯಾಟವಾಗಿದೆ. ರೋಹಿತ್ ಹಾಗೂ ಮಯಾಂಕ್ ಓಪನರ್ ಆಗಿ ಜತೆಯಾಟಕ್ಕಿಳಿದ ಮೊದಲ ಇನ್ನಿಂಗ್ಸ್‌ನಲ್ಲೇ ಈ ಸಾಧನೆ ಮೆರೆದಿರುವುದು ವಿಶೇಷವೇ ಸರಿ. ಈ ಹಿಂದೆ 2007/08ರ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ವಿಕೆಟ್‌ಗೆ ಸೆಹ್ವಾಗ್ ಹಾಗೂ ದ್ರಾವಿಡ್ 268 ರನ್‌ಗಳ ಜತೆಯಾಟ ನೀಡಿದ್ದರು. ಇದೀಗ ಈ ದಾಖಲೆ ಮುರಿದಿರುವ ರೋಹಿತ್-ಮಯಾಂಕ್ ಜೋಡಿಯು ಮೊದಲ ವಿಕೆಟ್‌ಗೆ 317 ರನ್‌ಗಳ ಜತೆಯಾಟ ನೀಡಿದೆ. 82 ಓವರ್‌ಗಳಲ್ಲೇ ರೋಹಿತ್-ಮಯಾಂಕ್ ಜೋಡಿಯು ತ್ರಿಶತಕದ ಜತೆಯಾಟವನ್ನು ಬರೆದಿದೆ. ಈ ಪೈಕಿ 244 ಎಸೆತಗಳನ್ನು ಎದುರಿಸಿರುವ ರೋಹಿತ್ 23 ಬೌಂಡರಿ ಹಾಗೂ ಆರು ಸಿಕ್ಸರ್ ನೆರವಿನಿಂದ 176 ರನ್ ಗಳಿಸಿದ್ದರು. ಇನ್ನೊಂದೆಡೆ ಚೊಚ್ಚಲ ಟೆಸ್ಟ್ ಶತಕ ಬಾರಿಸಿರುವ ಮಯಾಂಕ್, ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2pB12ZV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...