ರೋಹಿತ್ ಬ್ಯಾಟಿಂಗ್ ವೈಭವ; ಟೆಸ್ಟ್ ಆರಂಭಿಕನಾಗಿ 150+ ದಾಖಲೆ

ವಿಶಾಖಪಟ್ಟಣ: ಟೆಸ್ಟ್ ಆರಂಭಿಕನಾಗಿ ಕ್ರೀಸಿಗಿಳಿದ ಮೊದಲ ಪಂದ್ಯದಲ್ಲೇ ಶತಕೋತ್ತರ ಶತಕಾರ್ಧದ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ರೋಹಿತ್ ಈ ಸ್ಮರಣೀಯ ದಾಖಲೆ ಮೆರೆದರು. ಆರಂಭ ಅಂದರೆ ಹೇಗಿರಬೇಕು ಎನ್ನುವುದನ್ನು ತೋರಿಸಿಕೊಡಲೋ ಎಂಬಂತೆ ಭಾರತ ಏಕದಿನ ತಂಡದ ಉಪನಾಯಕ ರೋಹಿತ್‌ ಶರ್ಮ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಟೀಂ ಮ್ಯಾನೇಜ್ಮೆಂಟ್‌ ತಮ್ಮ ಮೇಲಿಟ್ಟ ಭರವಸೆಗೆ ತಕ್ಕ ಉಡುಗೊರೆಯನ್ನೇ ನೀಡಿದ್ದರು. ಎರಡನೇ ದಿನದಾಟದಲ್ಲಿ ರೋಹಿತ್ ಬ್ಯಾಟಿಂಗ್ ವೈಭವ ಮುಂದುವರಿದಿತ್ತು. ಅಲ್ಲದೆ ನಿರಂತರ ಬೌಂಡರಿಗಳ ಮೂಲಕ ದಕ್ಷಿಣ ಆಫ್ರಿಕಾ ಮೇಲೆ ಒತ್ತಡವನ್ನು ಹೇರುತ್ತಲೇ ಸಾಗಿದರು. ರೋಹಿತ್ ಶರ್ಮಾ 224 ಎಸೆತಗಳಲ್ಲಿ ಶತಕೋತ್ತರ ಶತಕಾರ್ಧದ ಸಾಧನೆ ಮಾಡಿದರು. ಈ ವೇಳೆಯಾಗುವಾಗ 18 ಬೌಂಡರಿ ಹಾಗೂ ಐದು ಸಿಕ್ಸರ್‌ಗಳನ್ನು ಬಾರಿಸಿದ್ದರು. ರೋಹಿತ್ ಅಂಕಿಅಂಶ: - ಆರಂಭಿಕನಾಗಿ ಚೊಚ್ಚಲ ಟೆಸ್ಟ್ ಶತಕ, - ಸತತ 6ನೇ ಬಾರಿಗೆ 50+ ರನ್‌ ಸಾಧನೆ, - ರಾಹುಲ್‌ ದ್ರಾವಿಡ್‌ ಸರಿಗಟ್ಟಿದ ರೋ'ಹಿಟ್' (ದ್ರಾವಿಡ್ ತವರಿನಲ್ಲಿ, 1997 ಮತ್ತು 1998ರ ನಡುವೆ ಸತತ ಆರು 50+ ಸಾಧನೆ ಮಾಡಿದ್ದರು). ಒಟ್ಟಾರೆಯಾಗಿ 4ನೇ ಟೆಸ್ಟ್ ಶತಕ, - ಮಯಾಂಕ್ ಜತೆಗೆ ದಾಖಲೆಯ ಜತೆಯಾಟ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2oGsQLQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...