
ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಹಾಗೂ ಟೆಸ್ಟ್ ಸರಣಿ ನಿರ್ಣಾಯಕ ಪಂದ್ಯದ ಮೂರನೇ ದಿನದಾಟ ಶುರು ಮಾಡಿದ ಭಾರತ ತಂಡ ಹಿರಿಯ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ್ ಪೂಜಾರ(9) ಹಾಗೂ ಅಜಿಂಕ್ಯ ರಹಾನೆ(1) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 70 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ ತಂಡಕ್ಕೆ ಮಾರ್ಕೊ ಯೆನ್ಸನ್ ಹಾಗೂ ಕಗಿಸೋ ಆಘಾತ ನೀಡಿದರು. ಪ್ರಥಮ ಇನಿಂಗ್ಸ್‌ನಲ್ಲಿ 43 ರನ್ ಗಳಿಸಿದ್ದ ಪೂಜಾರ ದ್ವಿತೀಯ ಇನಿಂಗ್ಸ್‌ನಲ್ಲಿ 9 ರನ್‌ಗೆ ವಿಕೆಟ್ ಒಪ್ಪಿಸಿದರು ಹಾಗೂ ಅಜಿಂಕ್ಯ ರಹಾನೆ ಮತ್ತೊಮ್ಮೆ ವಿಫಲರಾದರು. 23 ಓವರ್‌ಗಳಿಗೆ ಭಾರತ ತಂಡ 4 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದ್ದು, 83 ರನ್ ಮುನ್ನಡೆಯಲ್ಲಿದೆ. ಕ್ರೀಸ್‌ನಲ್ಲಿ ವಿರಾಟ್ ಕೊಹ್ಲಿ(16*) ಹಾಗೂ ರಿಷಭ್ ಪಂತ್ (10*) ಇದ್ದಾರೆ. ಬುಮ್ರಾ5 ವಿಕೆಟ್ ಸಾಧನೆ: ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಜಸ್‌ಪ್ರಿತ್ ಬುಮ್ರಾ ಮಾರಕ ಬೌಲಿಂಗ್ ದಾಳಿ ನಡೆಸಿದ್ದರು. ಪಂದ್ಯದ ಆರಂಭಿಕ ದಿನವಾದ ಮಂಗಳವಾರ ನಾಯಕ ಡೀನ್ ಎಲ್ಗರ್ ವಿಕೆಟ್ ಕಿತ್ತಿದ್ದ ಬುಮ್ರಾ, ಬುಧವಾರ ಏಡೆನ್ ಮಾರ್ಕ್ರಮ್(8), ಕೀಗನ್ ಪೀಟರ್ಸನ್(72), ಮಾರ್ಕೊ ಯೆನ್ಸನ್(7) ಹಾಗೂ ಲುಂಗಿ ಎನ್ಗಿಡಿ(3) ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 210 ರನ್‌ಗಳಿಗೆ ಆಲ್‌ಔಟ್ ಮಾಡುವಲ್ಲಿ ಭಾರತಕ್ಕೆ ನೆರವಾಗಿದ್ದರು. ಹರಿಣಗಳ ಪರ ಕೀಗನ್ ಪೀಟರ್ಸನ್(72) ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಅರ್ಧಶತಕ: ಮೊದಲನೇ ದಿನ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಕರ್ಷಕವಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡದ ಪರ ವಿರಾಟ್ ಕೊಹ್ಲಿ ಶಿಸ್ತುಬದ್ಧ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಎದುರಿಸಿದ್ದ 201 ಎಸೆತಗಳಲ್ಲಿ 79 ರನ್ ಗಳಿಸಿದ್ದರು. ಆ ಮೂಲಕ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 223 ರನ್ ದಾಖಲಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರು. ಸಂಕ್ಷಿಪ್ತ ಸ್ಕೋರ್(ಎರಡನೇ ದಿನದಾಟದ ಅಂತ್ಯಕ್ಕೆ) ಭಾರತ: ಪ್ರಥಮ ಇನಿಂಗ್ಸ್‌ನಲ್ಲಿ 77.3 ಓವರ್‌ಗಳಿಗೆ 223/10 (ವಿರಾಟ್ ಕೊಹ್ಲಿ 79, ಚೇತೇಶ್ವರ್ ಪೂಜಾರ 43, ರಿಷಭ್ ಪಂತ್ 27; ಕಗಿಸೊ ರಬಾಡ 73ಕ್ಕೆ 4, ಮಾರ್ಕೊ ಯೆನ್ಸನ್ 55 ಕ್ಕೆ 3, ಡುವಾನ್ ಒಲಿವಿಯರ್ 42 ಕ್ಕೆ 1, ಕೇಶವ್ ಮಹಾರಾಜ್ 14ಕ್ಕೆ 1, ಲುಂಗಿ ಎನ್ಗಿಡಿ 33ಕ್ಕೆ 1) ದಕ್ಷಿಣ ಆಫ್ರಿಕಾ: ಪ್ರಥಮ ಇನಿಂಗ್ಸ್ 76.3 ಓವರ್‌ಗಳಿಗೆ 210/10 (ಕೀಗನ್ ಪೀಟರ್ಸನ್ 72, ಕೇಶವ್ ಮಹಾರಾಜ್ 25, ರಾಸಿ ವ್ಯಾನ್ ಡೆರ್ ಡುಸ್ಸೆನ್ 21, ತೆಂಬಾ ಬವೂಮ 28; ಜಸ್‌ಪ್ರಿತ್ ಬುಮ್ರಾ 42 ಕ್ಕೆ 5, ಉಮೇಶ್ ಯಾದವ್ 64 ಕ್ಕೆ 2, ಮೊಹಮ್ಮದ್ ಶಮಿ39 ಕ್ಕೆ 2, ಶಾರ್ದುಲ್ ಠಾಕೂರ್ 37ಕ್ಕೆ 1) ಭಾರತ: ದ್ವಿತೀಯ ಇನಿಂಗ್ಸ್ 17 ಓವರ್‌ಗಳಿಗೆ 57/.2 (ವಿರಾಟ್ ಕೊಹ್ಲಿ 14*, ಚೇತೇಶ್ವರ್ ಪೂಜಾರ 9*; ಕಗಿಸೊ ರಬಾಡ 25 ಕ್ಕೆ 1, ಮಾರ್ಕೊ ಯೆನ್ಸನ್ 7 ಕ್ಕೆ 1) ಉಭಯ ತಂಡಗಳ ಪ್ಲೇಯಿಂಗ್ XI ಭಾರತ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ(ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್(ಪ), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್(ನಾಯಕ), ಏಡೆನ್ ಮಾರ್ಕ್ರಮ್, ಕೀಗನ್ ಪೀಟರ್ಸನ್, ರಾಸ್ಸೀ ವ್ಯಾನ್ ಡೆರ್ ಡುಸ್ಸೆನ್, ತೆಂಬಾ ಬವೂಮ, ಕೈಲ್ ವೆರಿನೆ (ವಿಕೆಟ್ ಕೀಪರ್), ಮಾರ್ಕೊ ಯೆನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಡುವಾನ್ ಒಲಿವಿಯರ್, ಲುಂಗಿ ಎನ್ಗಿಡಿ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3fhZlHp