
ಕೇಪ್ ಟೌನ್: ದಕ್ಷಿಣ ಆಫ್ರಿಕಾ ವೇಗಿ ಮಾರ್ಕೊ ಯೆನ್ಸನ್ ಅವರೊಂದಿಗೆ ನಡೆದಿದ್ದ ಮಾತಿನ ಚಕಮಕಿ ಬಗ್ಗೆ ವೇಗಿ ಮೂರನೇ ಹಾಗೂ ಸರಣಿ ನಿರ್ಣಾಯಕ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಬಳಿಕ ಪ್ರತಿಕ್ರಿಯಿಸಿದ್ದಾರೆ. ಜೊಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದ ವೇಳೆ ಜಸ್‌ಪ್ರಿತ್ ಬುಮ್ರಾ ಹಾಗೂ ನಡುವೆ ಸಾಕಷ್ಟು ಬಾರಿ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಬ್ಯಾಟ್ ಮಾಡುತ್ತಿದ್ದ ಜಸ್‌ಪ್ರಿತ್ ಬುಮ್ರಾಗೆ ಮಾರ್ಕೊ ಯೆನ್ಸನ್ ನಿಯಮಿತವಾಗಿ ಬಾಡಿ ಲೈನ್‌ನಲ್ಲಿ ಬೌನ್ಸರ್ ಹಾಕಿದ್ದರು. ಈ ವೇಳೆ ಬುಮ್ರಾ ಹಲವು ಬಾರಿ ಚೆಂಡಿನಿಂದ ಪೆಟ್ಟು ತಿಂದಿದ್ದರು. ಇದರಿಂದ ರೋಸಿ ಹೋಗಿದ್ದ ಜಸ್‌ಪ್ರಿತ್ ಬುಮ್ರಾ ಅಫ್ರಿಕಾ ವೇಗಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಆದರೆ ಬುಧವಾರ ಮೂರನೇ ಟೆಸ್ಟ್ ಎರಡನೇ ದಿನ ಬ್ಯಾಟಿಂಗ್‌ಗೆ ಇಳಿದ ಮಾರ್ಕೊ ಯೆನ್ಸನ್ ಅವರಿಗೂ ಬುಮ್ರಾ ಹಲವು ಬಾರಿ ಬೌನ್ಸರ್ ಹಾಕಿ ನಡುಕು ಉಂಟು ಮಾಡಿದ್ದರು. ನಂತರ 7 ರನ್‌ಗಳಿಗೆ ಯೆನ್ಸನ್ ಅವರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು. ಆ ಮೂಲಕ ಅಫ್ರಿಕಾ ವೇಗಿಗೆ ಚೆಂಡಿನ ಮೂಲಕವೇ ಮುಟ್ಟಿ ನೋಡಿಕೊಳ್ಳುವಂತೆ ಬುಮ್ರಾ ತಿರುಗೇಟು ನೀಡಿದರು. ಕೇಪ್ ಟೌನ್ ಟೆಸ್ಟ್ ಎರಡನೇ ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಬುಮ್ರಾಗೆ ಇದೇ ವಿಷಯವನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಬುಮ್ರಾ, ಮೂರನೇ ಟೆಸ್ಟ್‌ನಲ್ಲಿ ಅವರ ಜೊತೆ ಯಾವುದೇ ಮಾತಿನ ಚಕಮಕಿ ಅಥವಾ ಕಣ್ಣಿನಿಂದಲೂ ಅವರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದರು. ಎರಡೂ ತಂಡಗಳು ಕೂಡ ತಮ್ಮ ಪಾಡಿಗೆ ಪಂದ್ಯದ ಮೇಲೆ ಗಮನವನ್ನು ಕೇಂದ್ರಿಕರಿಸುತ್ತಿವೆ ಎಂದು ಹೇಳಿದರು. "ಈ ಟೆಸ್ಟ್ ಪಂದ್ಯದಲ್ಲಿ ನನ್ನ ಹಾಗೂ ಅವರ(ಯೆನ್ಸನ್) ನಡುವೆ ಯಾವುದೇ ಸಂಭಾಷಣೆ ಇಲ್ಲ ಎಂದು ನಾನು ಭಾವಿಸುತ್ತೇನೆ. ಕಳೆದ ಟೆಸ್ಟ್ ಪಂದ್ಯದಲ್ಲಿ ನಮ್ಮ ನಡುವೆ ಏನು ನಡೆದಿತ್ತು, ಅದು ಆ ಪಂದ್ಯದಲ್ಲಿಯೇ ಅಂತ್ಯವಾಗಿತ್ತು. ನಾವು ಕೂಡ ಅದನ್ನು ಅಲ್ಲಿಯೇ ಬಿಟ್ಟು ಹೊರ ಬಂದಿದ್ದೇವೆ. ಆದರೆ ಈ ಪಂದ್ಯದಲ್ಲಿ ನಮ್ಮ ನಡುವೆ ಯಾವುದೇ ಚರ್ಚೆ ನಡೆದಿಲ್ಲ ಹಾಗೂ ಕನಿಷ್ಠ ಕಣ್ಣಿನ ಮೂಲಕವೂ ನಾವು ಸಂಪರ್ಕಿಸಿಲ್ಲ," ಎಂದು ಸ್ಪಷ್ಟಪಡಿಸಿದರು. "ನಮ್ಮ ನಮ್ಮ ತಂಡಗಳ ಗೆಲುವಿನ ಕಡೆಗೆ ನಾವು ಗಮನವನ್ನು ಕೇಂದ್ರಿಕರಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಎದುರಾಳಿ ತಂಡ ತನಗೆ ಏನು ಬೇಕೋ ಅದನ್ನು ಮಾಡಲಿ . ಆದರೆ ನಾವು ನಮ್ಮ ಪ್ರಕ್ರಿಯೆಗಳನ್ನು ಹಿಂಬಾಲಿಸುತ್ತೇವೆ ಹಾಗೂ ತಂಡವನ್ನು ಉತ್ತಮ ಹಂತಕ್ಕೆ ತಲುಪಿಸುವ ಕಡೆಗೆ ನಾವು ಪ್ರಯತ್ನಿಸುತ್ತೇವೆ," ಎಂದು ಬುಮ್ರಾ ಹೇಳಿದರು. ಜಸ್‌ಪ್ರಿತ್ ಬುಮ್ರಾ ಎರಡನೇ ದಿನ ಮಾರ್ಕೊ ಯೆನ್ಸನ್ ಅವರ ವಿಕೆಟ್ ಅಲ್ಲದೆ ಇನ್ನು ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. 2018ರಲ್ಲಿ ಅಂತಾರಾಷ್ಟ್ರಿಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಇದೇ ಅಂಗಣದಲ್ಲಿ ಇದೀಗ 5 ವಿಕೆಟ್ ಸಾಧನೆ ಮಾಡಿದರು ಹಾಗೂ ದಕ್ಷಿಣ ಆಫ್ರಿಕಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 210 ರನ್‌ಗಳಿಗೆ ಆಲ್‌ಔಟ್ ಮಾಡಲು ಭಾರತಕ್ಕೆ ನೆರವಾದರು. ಬಳಿಕ 13 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಭಾರತ ತಂಡ ಬಹುಬೇಗ ಆರಂಭಿಕರಾದ ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಕಠಿಣ ಹೋರಾಟ ನಡೆಸುವ ಮೂಲಕ ತಮ್ಮ ಬ್ಯಾಟಿಂಗ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ಅಂದಹಾಗೆ ಎರಡನೇ ದಿನದಾಟದ ಅಂತ್ಯಕ್ಕೆ 17 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿರುವ ಭಾರತ 70 ರನ್ ಮುನ್ನಡೆ ಪಡದುಕೊಂಡಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3I4td6b