
ಬೆಂಗಳೂರು: ಟೂರ್ನಿ ಮೇಲೆ ಮತ್ತೆ ಕೋವಿಡ್-19 ಸೋಂಕಿನ ಕರಿ ನೆರಳು ಆವರಿಸಲು ಆರಂಭವಾಗಿದೆ. ಐಪಿಎಲ್ 2022 ಟೂರ್ನಿ ಮಾರ್ಚ್-ಮೇ ಅವಧಿಯಲ್ಲಿ ಭಾರತದಲ್ಲಿ ಆಯೋಜನೆ ಆಗಬೇಕಿದೆ. ಆದರೆ, ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆ ಭಾರತದಲ್ಲಿ ಅಬ್ಬರಿಸಲು ಶುರು ಮಾಡಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ () ವಿದೇಶದಲ್ಲಿ ಟೂರ್ನಿ ಆಯೋಜಿಸಲು ಆಲೋಚನೆ ಮಾಡಿದೆ. ಅಂದಹಾಗೆ ಈವರೆಗೆ ಎರಡು ಬಾರಿ ಸಂಪೂರ್ಣ ಐಪಿಎಲ್ ಟೂರ್ನಿಯನ್ನು ವಿದೇಶದಲ್ಲಿ ಆಯೋಜಿಸಲಾಗಿದೆ. ಭಾರತದಲ್ಲಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 2009ರಲ್ಲಿ ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ಮತ್ತು ಕೋವಿಡ್-19 ಕಾರಣ 2020ರಲ್ಲಿ ಯುಎಇ ಆತಿಥ್ಯದಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಇದೀಗ ಐಪಿಎಲ್ 2022 ಟೂರ್ನಿಯನ್ನು ಕೊರೊನಾ ವೈರಸ್ ಕಾರಣ ವಿದೇಶದಲ್ಲಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಆದರೆ, ಯುಎಇ ಮೇಲಿನ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ಅಥವಾ ಆತಿಥ್ಯದಲ್ಲಿ ನಡೆಸುವ ಬಗ್ಗೆ 'ಪ್ಲಾನ್ ಬಿ' ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ. ಈ ಬಾರಿ ಟೂರ್ನಿಗೆ ಅಹ್ಮದಾಬಾದ್ ಮತ್ತು ಲಖನೌ ಫ್ರಾಂಚೈಸಿಗಳು ಹೊಸ ತಂಡಗಳಾಗಿ ಕಣಕ್ಕಿಳಿದಿವೆ. 10 ತಂಡಗಳನ್ನು ಒಳಗೊಂಡ ದೊಡ್ಡ ಮಟ್ಟದ ಟೂರ್ನಿಯನ್ನು ಅತ್ಯಂತ ಸುರಕ್ಷಿತವಾಗಿ ಆಯೋಜಿಸುವುದು ಬಿಸಿಸಿಐ ಮುಂದಿರುವ ದೊಡ್ಡ ಸವಾಲು. ಕಳೆದ ಬಾರಿ ಕೋವಿಡ್-19 ಸೋಂಕಿನ 2ನೇ ಅಲೆ ಕಾರಣ ಐಪಿಎಲ್ 2021 ಟೂರ್ನಿ ಅರ್ಧಕ್ಕೆ ನಿಂತು ಬಿಸಿಸಿಐ ಸಾಕಷ್ಟು ಸಮಸ್ಯೆ ಎದುರಿಸಿತ್ತು. ಆದರೆ, ಈ ಬಾರಿ ಇಂತಹ ಗೊಂದಲಗಳಿಗೆ ಆಸ್ಪದ ನೀಡಲು ಬಿಸಿಸಿಐ ಸಿದ್ಧವಿಲ್ಲ. ಈ ನಡುವೆ ಮಹಾರಾಷ್ಟ್ರ ಒಂದರಲ್ಲೇ ಸಂಪೂರ್ಣ ಲೀಗ್ ಆಯೋಜಿಸುವ ಬಗ್ಗೆಯೂ ಚಿಂತಿಸಲಾಗುತ್ತಿತ್ತು. ಆದರೆ, ಮಹಾರಾಷ್ಟ್ರದಲ್ಲೂ ಕೋವಿಡ್-19 ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಅನ್ಯ ಮಾರ್ಗಗಳ ಕಡೆಗೆ ಗಮನ ನೀಡಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಮಾಡಿರುವ ವರದಿ ಪ್ರಕಾರ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ ನಡೆಸಲು ಬಿಸಿಸಿಐ ಆಲೋಚಿಸಿದೆ ಎನ್ನಲಾಗಿದೆ. "ಪ್ರತಿ ಬಾರಿ ನಾವು ಯುಎಇ ಮೇಲೆ ಅವಲಂಬನೆ ಆಗುವುದು ಸರಿಯಲ್ಲ. ಹೀಗಾಗಿ ಬೇರೆ ಎಲ್ಲಿ ಆಯೋಜಿಸಬಹುದು ಎಂಬುದರ ಬಗ್ಗೆ ಆಲೋಚಿಸಿದ್ದೇವೆ. ದಕ್ಷಿಣ ಆಫ್ರಿಕಾದಲ್ಲಿನ ಸಮಯ ಭಾರತೀಯ ಕಾಲಮಾನಕ್ಕೆ ಹೊಂದಾಣಿಕೆ ಮಾಡಿ ಆಯೋಜನೆ ಮಾಡಲು ಸಾಧ್ಯವಾಗಲಿದೆ," ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ. ಟೀಮ್ ಇಂಡಿಯಾ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ತಲಾ ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್ ಸರಣಿಗಳಲ್ಲಿ ಪೈಪೋಟಿ ನಡೆಸುತ್ತಿದೆ. ಅಂದಹಾಗೆ ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ವೈರಸ್ ಹೆಚ್ಚಾಗಿದ್ದ ಕಾರಣ ಭಾರತ ತಂಡದ ಈ ಪ್ರವಾಸ ರದ್ದಾಗುವ ಸಾಧ್ಯತೆ ಇತ್ತು. ಆದರೆ ಕಟ್ಟು ನಿಟ್ಟಿನ ಕೋವಿಡ್-19 ನಿಯಂತ್ರಣ ಕ್ರಮ ಮತ್ತು ಬಯೋ ಬಬಲ್ ನಿರ್ಮಾಣ ಮಾಡಿ ಸರಣಿ ವೇಳಾಪಟ್ಟಿಯಲ್ಲಿ ಹೊಂದಾಣಿಕೆ ತಂದು ಆಯೋಜಿಸಲಾಗುತ್ತಿದೆ. "ಭಾರತ ತಂಡ 2ನೇ ಟೆಸ್ಟ್ ಸಲುವಾಗಿ ಉಳಿದುಕೊಂಡಿದ್ದ ಜಾಗ ಬರೋಬ್ಬರಿ 2 ಎಕರೆ ಅಷ್ಟು ವಿಸ್ತೀರ್ಣವಿದೆ. ವಾಕಿಂಗ್ ಸಲುವಾಗಿ ಪ್ರತ್ಯೇಕ ಸ್ಥಳವಿದೆ. ಕೆರೆ ಇದೆ. ಹೀಗಾಗಿ ಅಲ್ಲಿ ಕಳೆದ ಎರಡು ವರ್ಷಗಳಲ್ಲಿ ಹಲವು ಸರಣಿಗಳನ್ನು ಆಯೋಜಿಸಲು ಸಾಧ್ಯವಾಗಿದೆ," ಎಂದು ಅಧಿಕಾರಿಗಳು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಸೋಂಕಿನ ಭೀತಿ ಕಡಿಮೆಯಾಗಿದ್ದು, ಒಂದು ತಿಂಗಳ ಹಿಂದೆಯೇ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಹೀಗಾಗಿ ಐಪಿಎಲ್ 2022 ಆಯೋಜನೆಗೆ ದಕ್ಷಿಣ ಆಫ್ರಿಕಾ ಸೂಕ್ತ ತಾಣವಾಗಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3nlq4He