ಜಿನೆವಾ: ಈವರೆಗೆ ಕೊರೊನಾ ಪಡೆಯದ ಮಂದಿಗೆ ರೂಪಾಂತರಿ ವೈರಸ್ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಎಚ್ಚರಿಸಿದೆ. ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್‌ನಿಂದಾಗಿ ಜಾಗತಿಕವಾಗಿ ಕೋವಿಡ್ ಸೋಂಕಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಡೆಲ್ಟಾಗಿಂತಲೂ ಓಮಿಕ್ರಾನ್ ತುಂಬಾನೇ ವೇಗವಾಗಿ ಹರಡುತ್ತಿದ್ದು, ಇದನ್ನು ಅಂತಾ ಪರಿಗಣಿಸಲು ಸಾಧ್ಯವಿಲ್ಲ ಎಂದೂ ಡಬ್ಲ್ಯೂಎಚ್‌ಒ ಹೇಳಿದೆ. ಕೊರೊನಾ ವೈರಸ್ ಸೋಂಕಿನ ಪ್ರಮಾಣ ಜಾಗತಿಕವಾಗಿ ತೀವ್ರ ಸ್ವರೂಪದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಓಮಿಕ್ರಾನ್ ವೈರಸ್ ಅನ್ನು ಸೋಂಕು ಕೊನೆಯಾಗುವ ಲಕ್ಷಣ ಎಂದು ಈಗಲೇ ಪರಿಗಣಿಸಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಕಳೆದ ಒಂದು ವಾರದಲ್ಲಿ ಈಗಾಗಲೇ 15 ದಶಲಕ್ಷ ಕೊರೊನಾ ಪ್ರಕರಣಗಳು ಜಾಗತಿಕವಾಗಿ ದೃಢಪಟ್ಟಿದ್ದು, ಲೆಕ್ಕಕ್ಕೇ ಸಿಗದ ಕೋಟ್ಯಂತರ ಪ್ರಕರಣಗಳು ಇರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಡೆಲ್ಟಾಗಿಂತಲೂ ಓಮಿಕ್ರಾನ್ ಅಷ್ಟೇನೂ ಅಪಾಯಕಾರಿ ಅಲ್ಲವಾದ್ರೂ ಈ ರೂಪಾಂತರಿಯ ಅಪಾಯ ಇದ್ದೇ ಇದೆ. ಅದರಲ್ಲೂ ಲಸಿಕೆ ಹಾಕಿಸಿಕೊಳ್ಳದವರಿಗೆ ಈ ವೈರಸ್ ತುಂಬಾನೇ ಅಪಾಯಕಾರಿ ಎಂದು ಡಬ್ಲ್ಯೂಎಚ್‌ಒ ಹೇಳಿದೆ. ಇನ್ನು ಓಮಿಕ್ರಾನ್ ವೈರಸ್ ಸೋಂಕಿತರಾದವರ ಪೈಕಿ ಹೆಚ್ಚಿನ ಪಾಲು ಜನರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯನ್ನೂ ತಜ್ಞರು ತಳ್ಳಿಹಾಕಿದ್ದಾರೆ. ಅದರಲ್ಲೂ ಕೊರೊನಾ ಲಸಿಕೆ ಪಡೆದವರು ಆಸ್ಪತ್ರೆಗೆ ದಾಖಲಾಗುವಷ್ಟು ಗಂಭೀರ ಸ್ವರೂಪದ ರೋಗ ಲಕ್ಷಣ ಹೊಂದಿರೋದಿಲ್ಲ, ಇನ್ನು ಸಾವಿನ ಪ್ರಮಾಣ ಕೂಡಾ ಕೂಡಾ ಡೆಲ್ಟಾಗೆ ಹೋಲಿಸಿದರೆ ಕಡಿಮೆ ಎಂದು ಹೇಳಬಹುದಾಗಿದೆ. ಆದ್ರೆ, ಲಸಿಕೆ ಪಡೆದವರು ಸೋಂಕನ್ನು ಹರಡುವ ಸಾಧ್ಯತೆ ಇದ್ದೇ ಇದೆ. ಎಲ್ಲಕ್ಕಿಂತಾ ಹೆಚ್ಚಾಗಿ ಅತಿ ಹೆಚ್ಚಾಗಿ ಹರಡುವ ಸಾಮರ್ಥ್ಯ ಇರುವ ವೈರಸ್‌ನಿಂದ ಅತಿ ಹೆಚ್ಚು ಜನರಿಗೆ ಸೋಂಕು ಸಹಜವಾಗಿಯೇ ಹರಡುತ್ತದೆ. ಹೀಗಾಗಿ, ಅತಿ ಹೆಚ್ಚು ಜನರು ಆಸ್ಪತ್ರೆ ಪಾಲಾಗುತ್ತಾರೆ. ಹೀಗಾದಾಗ ಸಾವಿನ ಸಂಖ್ಯೆಯೂ ಹೆಚ್ಚುತ್ತದೆ. ಬಹಳಷ್ಟು ಮಂದಿ ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಮನೆಯಲ್ಲೇ ಉಳಿಯಬೇಕಾಗುತ್ತದೆ. ಅದರಲ್ಲೂ ಶಿಕ್ಷಕರು ಹಾಗೂ ಅರೋಗ್ಯ ಕಾರ್ಯಕರ್ತರಿಗೆ ಒತ್ತಡ ಹೆಚ್ಚುತ್ತದೆ. ಇವೆಲ್ಲದರ ನಡುವೆ, ಇನ್ನಷ್ಟು ಅಪಾಯಕಾರಿಯಾದ ಕೊರೊನಾ ರೂಪಾಂತರಿಯ ಉಗಮಕ್ಕೂ ಈ ಪ್ರಕ್ರಿಯೆ ನಾಂದಿ ಹಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಸದ್ಯ ಪ್ರತಿ ವಾರ ವಿಶ್ವಾದ್ಯಂತ 50 ಸಾವಿರ ಮಂದಿ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಕೊರೊನಾ ವೈರಸ್‌ನೊಂದಿಗೇ ನಾವು ಬದುಕಬೇಕಿದೆ. ಆದ್ರೆ, ಹಾಗಂತಾ ಇಷ್ಟು ದೊಡ್ಡ ಪ್ರಮಾಣದ ಸಾವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಡಬ್ಲ್ಯೂಎಚ್‌ಒದ ಟೆಡ್ರೋಸ್ ಹೇಳುತ್ತಾರೆ.
from India & World News in Kannada | VK Polls https://ift.tt/3Fm70Pn