ವಿಶ್ವದ ಎಲ್ಲಾ ಬ್ಯಾಟ್ಸ್‌ಮನ್‌ಗಳಿಗೂ ಬುಮ್ರಾ ಭಯವಿದೆ ಎಂದ ಗಂಭೀರ್‌!

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಸರಣಿ ನಿರ್ಣಾಯಕ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ ಸಾಧನೆ ಮಾಡಿದ ವೇಗಿ ಅವರನ್ನು ಮಾಜಿ ಆರಂಭಿಕ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಪಂದ್ಯದ ಎರಡನೇ ದಿನದಾಟದಲ್ಲಿ ಜಸ್‌ಪ್ರಿತ್‌ ಬುಮ್ರಾ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ್ದ ಡೀನ್‌ ಎಲ್ಗರ್‌ ಸಾರಥ್ಯದ ದಕ್ಷಿಣ ಆಫ್ರಿಕಾ ಪ್ರಥಮ ಇನಿಂಗ್ಸ್‌ನಲ್ಲಿ 201 ರನ್‌ಗಳಿಗೆ ಆಲ್ಔಟ್‌ ಆಗಿತ್ತು. ಆ ಮೂಲಕ 13 ರನ್‌ ಅಲ್ಪ ಹಿನ್ನಡೆ ಅನುಭವಿಸಿತ್ತು. 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಇದೇ ಅಂಗಣದಲ್ಲಿ ಬುಮ್ರಾ 5 ವಿಕೆಟ್‌ ಸಾಧನೆ ಮಾಡಿದ್ದು ವಿಶೇಷತೆಯನ್ನು ತಂದುಕೊಟ್ಟಿತು. ಎರಡನೇ ದಿನದಾಟದ ಅಂತ್ಯಕ್ಕೆ ಸ್ಟಾರ್ ಸ್ಪೋರ್ಟ್ಸ್ ಚರ್ಚೆಯಲ್ಲಿ ಗೌತಮ್‌ ಗಂಭೀರ್‌ 31ರ ಪ್ರಾಯದ ವೇಗಿಯ ಬೌಲಿಂಗ್‌ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಈ ಸರಣಿಯುದ್ದಕ್ಕೂ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಬುಮ್ರಾ ಭೀತಿ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. "ಜಸ್‌ಪ್ರಿತ್‌ ಬುಮ್ರಾ ಈ ಸರಣಿಯುದ್ದಕ್ಕೂ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳಿಗೆ ಭೀತಿ ಹುಟ್ಟಿಸಿದ್ದಾರೆ. ಮಾರಕ ಎಸೆತಗಳನ್ನು ಹಾಕುವ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಸದಾ ಪರೀಕ್ಷೆಗೆ ಒಳಪಡಿಸುತ್ತಾರೆ. ಯಾರಾದರೂ ಅಗ್ರ ಬ್ಯಾಟ್ಸ್‌ಮನ್‌ಗಳನ್ನು ನೀವು ಕೇಳಿ ನೋಡಿ, ಯಾರೂ ಕೂಡ ಇವರನ್ನು ಎದುರಿಸಲು ಇಷ್ಟಪಡುವುದಿಲ್ಲ. ಇದರರ್ಥ ಎಲ್ಲಾ ಬ್ಯಾಟ್ಸ್‌ಮನ್‌ಗಳಿಗೂ ಬುಮ್ರಾ ಭಯ ಇದ್ದೇ ಇರುತ್ತದೆ," ಎಂದರು. "ಸ್ಟಂಪ್ಸ್‌ಗಳ ಹತ್ತಿರದಿಂದ ಬೌಲ್‌ ಮಾಡುವ ಜಸ್‌ಪ್ರಿತ್‌ ಬುಮ್ರಾ ಆಫ್‌ ಸ್ಟಂಪ್ ಆಸುಪಾಸಿನ ಲೈನಲ್ಲಿಯೇ ಚೆಂಡನ್ನು ಪಿಚ್‌ ಮಾಡುತ್ತಾರೆ. ಆ ಮೂಲಕ ಚೆಂಡು ಹೆಚ್ಚು ಚಲನೆ ಪಡೆದುಕೊಳ್ಳುವ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ಪರಿಣಾಮಕಾರಿಯಾಗುತ್ತದೆ ಹಾಗೂ ಈ ವೇಳೆ ಎಡ್ಜ್‌ ಆಗುವ ಸಾಧ್ಯತೆ ಇರುತ್ತದೆ," ಎಂದು ಗಂಭೀರ್‌ ಹೇಳಿದರು. ಇದೇ ವೇಳೆ ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರನ್ನು ಶ್ಲಾಘಿಸಿದ ಗೌತಮ್‌ ಗಂಭೀರ್‌ ಪ್ರಸ್ತುತ ವಿಶ್ವದ ಶ್ರೆಷ್ಠ ಟೆಸ್ಟ್‌ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದರು. "ಮೊಹಮ್ಮದ್‌ ಶಮಿ ಅಥವಾ ಜಸ್‌ಪ್ರಿತ್‌ ಬುಮ್ರಾ ಇಬ್ಬರು ಯಾವುದೇ ಬ್ಯಾಟ್ಸ್‌ಮನ್‌ಗೆ ನಿಯಮಿತವಾಗಿ ಸವಾಲು ನೀಡಬಲ್ಲರು ಎಂದು ನಾನು ಭಾವಿಸುತ್ತೇನೆ. ಯಾವುದೇ ಸನ್ನಿವೇಶ ಎದುರಾದರೂ ಮೊಹಮ್ಮದ್‌ ಶಮಿ ಪಟ್ಟು ಬಿಡದೆ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ನಡುಕು ಉಂಟು ಮಾಡಬಲ್ಲರು. ಪ್ರಸ್ತುತ ವಿಶ್ವದಲ್ಲಿಯೇ ಶಮಿ ಅತ್ಯುತ್ತಮ ಟೆಸ್ಟ್‌ ಬೌಲರ್‌ಗಳಲ್ಲಿ ಒಬ್ಬರು," ಎಂದು ಗಂಭೀರ್‌ ಹಿರಿಯ ವೇಗಿಯನ್ನು ಗುಣಗಾನ ಮಾಡಿದ್ದಾರೆ. ಪಂದ್ಯದ ಎರಡನೇ ದಿನದಾಟದಲ್ಲಿ ಮೊಹಮ್ಮದ್‌ ಶಮಿ ಹಾಗೂ ಉಮೇಶ್‌ ಯಾದವ್‌ ಕೂಡ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಜಸ್‌ಪ್ರಿತ್‌ ಬುಮ್ರಾಗೆ ಅತ್ಯುತ್ತಮ ಸಾಥ್‌ ನೀಡಿದ್ದರು. ಇನ್ನು ವೇಗದ ಬೌಲಿಂಗ್‌ ಆಲ್‌ರೌಂಡರ್ ಶಾರ್ದುಲ್‌ ಠಾಕೂರ್‌ ಒಂದು ಪಡೆಯುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3qnjTEx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...