
ಹೊಸದಿಲ್ಲಿ: ಭಾರತದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಎರಡೂವರೆ ಲಕ್ಷ ಸಮೀಪಿಸಿದೆ. ತಳಿ ಹರಡಿದ ಬಳಿಕ ಉಂಟಾಗಿರುವ ಮೂರನೇ ಅಲೆ ವೇಳೆ ಇದು ದಿನವೊಂದರಲ್ಲಿ ದಾಖಲಾದ ಅತ್ಯಧಿಕ ಪ್ರಕರಣವಾಗಿದೆ. ಇದರೊಂದಿಗೆ ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3.60 ಕೋಟಿಗೆ ಏರಿಕೆಯಾಗಿದೆ. 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 5,488 ಓಮಿಕ್ರಾನ್ ಕೇಸ್‌ಗಳು ದಾಖಲಾಗಿವೆ. ಬುಧವಾರ 1.90 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಗುರುವಾರದ ವರದಿ ಪ್ರಕಾರ ಅದರಲ್ಲಿ ಶೇ 27ರಷ್ಟು ಹೆಚ್ಚಳವಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,47,417 ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷದ ಮೇ ತಿಂಗಳ ಬಳಿಕ ದಾಖಲಾದ ಅತ್ಯಧಿಕ ಒಂದು ದಿನದ ಪ್ರಕರಣವಾಗಿದೆ. 84,825 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ದೇಶದ ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ 11,17,531ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಒಟ್ಟು ಪ್ರಮಾಣ ಶೇ 3.08ಕ್ಕೆ ತಲುಪಿದೆ. ಇದುವರೆಗೂ 3,47,15,361 ಮಂದಿ ಚೇತರಿಸಿಕೊಂಡಿದ್ದಾರೆ. ಚೇತರಿಕೆ ಪ್ರಮಾಣ ಶೇ 95.59ಕ್ಕೆ ಕುಸಿದಿದೆ. ಕಳೆದ 24 ಗಂಟೆಗಳಲ್ಲಿ ದೈನಂದಿನ ಪಾಸಿಟಿವಿಟಿ ದರ ಶೇ 13.11ಕ್ಕೆ ಏರಿಕೆಯಾಗಿದೆ. ವಾರದ ಪಾಸಿಟಿವಿಟಿ ದರ ಶೇ 10.80ಕ್ಕೆ ತಲುಪಿದೆ. ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಬುಧವಾರ ಒಂದೇ ದಿನ 380 ಸೋಂಕಿತರು ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಕೋವಿಡ್ ಮರಣ ಸಂಖ್ಯೆ 4,85,035ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಬುಧವಾರ 46,723 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇಲ್ಲಿಯೂ ಶೇ 27ರಷ್ಟು ಹೆಚ್ಚು ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ ಕೋವಿಡ್ ಕೇಸ್ 70 ಲಕ್ಷ ಗಡಿ ದಾಟಿದೆ. 86 ಹೊಸ ಓಮಿಕ್ರಾನ್ ಪ್ರಕರಣಗಳೊಂದಿಗೆ ಒಟ್ಟು ಓಮಿಕ್ರಾನ್ ಕೇಸ್ ಸಂಖ್ಯೆ 1,367ಕ್ಕೆ ತಲುಪಿದೆ. 5,488 ಓಮಿಕ್ರಾನ್ ಸೋಂಕಿತರ ಪೈಕಿ 2,162 ಮಂದಿ ಗುಣಮುಖರಾಗಿದ್ದಾರೆ. ರಾಜಸ್ಥಾನದಲ್ಲಿ 792, ದಿಲ್ಲಿಯಲ್ಲಿ 549, ಕೇರಳದಲ್ಲಿ 486 ಮತ್ತು ಕರ್ನಾಟಕದಲ್ಲಿ 479 ಓಮಿಕ್ರಾನ್ ಕೇಸ್‌ಗಳು ವರದಿಯಾಗಿವೆ. ಈವರೆಗೂ 154.61 ಕೋಟಿ ಡೋಸ್ ಸಾಧನೆ ಮಾಡಲಾಗಿದೆ. ದಿಲ್ಲಿಯಲ್ಲಿ 27,561 ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ ಶೇ 29ರಷ್ಟು ಪ್ರಕರಣಗಳ ಏರಿಕೆಯಾಗಿದ್ದು , ಕಳೆದ ಏಪ್ರಿಲ್ ಬಳಿಕ ವರದಿಯಾದ ಅತ್ಯಧಿಕ ದೈನಂದಿನ ಪ್ರಕರಣವಾಗಿದೆ. ಕರ್ನಾಟಕದಲ್ಲಿ 21,390 ಹೊಸ ಕೇಸ್‌ಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 30,99,519ಕ್ಕೆ ಏರಿಕೆಯಾಗಿದೆ. ಒಂದು ದಿನದ ಅವಧಿಯಲ್ಲಿ 1.95 ಲಕ್ಷ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಪಾಸಿಟಿವಿಟಿ ದರವೂ ಶೇ. 10.96ಕ್ಕೆ ಏರಿಕೆಯಾಗಿದೆ.
from India & World News in Kannada | VK Polls https://ift.tt/3flPPmG