ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಸಿದ್ಧ ಮಾದರಿ ಕುರಿಗೊಬ್ಬರ..!

ಚಿಕ್ಕಮಗಳೂರು: ಸಿದ್ಧ ಮಾದರಿಯ ಕುರಿ ಗೊಬ್ಬರವನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಕುರಿ ಮತ್ತು ಉಣ್ಣೆ ಸಹಕಾರ ಸಂಘದ ಅಧ್ಯಕ್ಷ ಎ.ಎನ್‌.ಮಹೇಶ್‌ ಹೇಳಿದರು. ನಗರದ ಜಿಲ್ಲಾ ಸ್ಕೌಟ್ಸ್‌ ಭವನದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಕುರಿ ಮತ್ತು ಉಣ್ಣೆ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುರಿ ಸಾಕಣೆದಾರರಿಗೆ ಸೂಕ್ತ ಮಾರ್ಗದರ್ಶನ, ಮಹಿಳಾ ಕುರಿಗಾರರಿಗೆ ಆರ್ಥಿಕ ಚೈತನ್ಯಕ್ಕೆ ಕುರಿಮಿತ್ರ ಸಂಘಗಳ ರಚನೆಗೆ ಆದ್ಯತೆ ನೀಡಲಾಗಿದೆ. ಇದುವರೆಗೆ 1 ಕೋಟಿ ರೂ.ಗಳವರೆಗೆ ಸಾಲಸೌಲಭ್ಯ ಕಲ್ಪಿಸಲಾಗಿದೆ ಎಂದರು. ಕುರಿಗಾರರಿಗೆ ಮಾರುಕಟ್ಟೆ ಸೌಲಭ್ಯ ಅಗತ್ಯವಾಗಿದೆ. ಮಾಂಸ, ಚರ್ಮ, ಕುರಿ ಗೊಬ್ಬರಕ್ಕೆ ಉತ್ತಮ ಮಾರುಕಟ್ಟೆ ಬೇಕಿದೆ. ಮಾಂಸ ಮಾರುಕಟ್ಟೆ ಮಳಿಗೆ ತೆರೆಯಲು ಸಂಘ ಉದ್ದೇಶಿಸಿದೆ. ರೈತರಿಂದ ಖರೀದಿಸಿ ಅದನ್ನು ಸಿದ್ಧ ಮಾದರಿಗೆ ತಂದು ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ವಿತರಿಸಲು ಸಿದ್ಧತೆ ನಡೆದಿದೆ. ವಿಶೇಷವಾಗಿ ಕೈತೋಟಗಳಿಗೆ 5ಕೆಜಿ ಕುರಿ ಗೊಬ್ಬರವನ್ನು ತಾಂತ್ರಿಕ ವಿಶೇಷತೆಯೊಂದಿಗೆ ಸಿದ್ಧಪಡಿಸಲಿದ್ದು, ಇದಕ್ಕೆ ನಬಾರ್ಡ್‌ ನೆರವು ನೀಡಲಿದೆ ಎಂದು ಹೇಳಿದರು. ಸಂಘದಲ್ಲಿ1600 ಸದಸ್ಯರಿದ್ದು, ಲಾಭದಲ್ಲಿ ಮುನ್ನಡೆಯುತ್ತಿದೆ. ಸದಸ್ಯರಿಂದ ಠೇವಣಿ ಸಂಗ್ರಹಿಸುವ ಗುರಿ ಇದೆ. ಜಿಲ್ಲೆಯಲ್ಲಿ 50 ಸಾವಿರ ಅಸಂಘಟಿತ ಕುರಿಗಾರರಿದ್ದು, 10 ಲಕ್ಷಕ್ಕೂ ಹೆಚ್ಚು ಕುರಿ ಸಾಕಣೆ ಮಾಡಲಾಗುತ್ತಿದೆ. ಕುರಿ ಅಭಿವೃದ್ಧಿ ನಿಗಮಕ್ಕೆ ಕನಿಷ್ಠ ಒಂದು ಸಾವಿರ ಕೋಟಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.


from India & World News in Kannada | VK Polls https://ift.tt/3hmVc5e

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...