ಜೀವನಾಂಶ ವ್ಯಾಜ್ಯಕ್ಕೆ ಆಸ್ತಿ ಘೋಷಣೆ ಕಡ್ಡಾಯ: ಸುಪ್ರೀಂಕೋರ್ಟ್ ಮಹತ್ವದ ಆದೇಶ

ಶ್ರೀಕಾಂತ್‌ ಹುಣಸವಾಡಿ ಬೆಂಗಳೂರು ಬೆಂಗಳೂರು: ಪತಿ-ಪತ್ನಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದ ವೇಳೆ ಎದುರಾಗುವ ನಿಗದಿ ಪ್ರಕರಣಗಳಲ್ಲಿ ಇಬ್ಬರೂ ತಮ್ಮ ವಿವರಗಳನ್ನು ಘೋಷಿಸುವುದು ಕಡ್ಡಾಯವಾಗಿದೆ. ಕೌಟುಂಬಿಕ ವ್ಯಾಜ್ಯಗಳಲ್ಲಿ ಹೆಚ್ಚಿನ ಪ್ರಕರಣಗಳು ಜೀವನಾಂಶ ನಿಗದಿಗೆ ಸಂಬಂಧಿಸಿವೆ. ಇಷ್ಟು ದಿನ ಕೌಟುಂಬಿಕ ನ್ಯಾಯಾಲಯಗಳಿಗೆ ಜೀವನಾಂಶ ನಿಗದಿ 'ದೊಡ್ಡ ತಲೆನೋವಾಗಿ' ಪರಿಣಮಿಸಿತ್ತು. ಕಾರಣ, ಕಾನೂನಿನಲ್ಲಿ ಆದಾಯ ವಿವರ ಘೋಷಿಸಬೇಕೆಂಬ ನಿಯಮವಿಲ್ಲದಿರುವುದು. ಆಸ್ತಿ ಅಷ್ಟಿದೆ-ಇಷ್ಟಿದೆ ಎಂದು ಸುಮ್ಮನೆ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದರು. ಜೊತೆಗೆ ಆ ಆರೋಪಗಳಿಗೆ ಅಗತ್ಯ ದಾಖಲೆ ಒದಗಿಸಲು ಪರದಾಡುತ್ತಿದ್ದರು. ಇದರಿಂದ ಕೋರ್ಟ್‌ಗಳೂ ನಿಖರವಾಗಿ ಜೀವನಾಂಶ ಕೊಡಿಸಲು ಕಷ್ಟಪಡುತ್ತಿದ್ದವು. ನ್ಯಾಯಾಧೀಶರು ಅಂದಾಜಿನ ಮೇಲೆ ಜೀವನಾಂಶ ನಿಗದಿ ಮಾಡುತ್ತಿದ್ದರು. ಆನಂತರವೂ ಜೀವನಾಂಶ ಹೆಚ್ಚಳ ಕೋರಿ ಪತ್ನಿ, ಕಡಿಮೆ ಮಾಡುವಂತೆ ಕೋರಿ ಪತಿ ನಡುವೆ ಮತ್ತೆ ವ್ಯಾಜ್ಯ ಮುಂದುವರಿಯುವುದು ಮಾಮೂಲಿಯಾಗಿತ್ತು. ಸುಪ್ರೀಂಕೋರ್ಟ್‌ ಆದೇಶವೇನು?ಜೀವನಾಂಶ ನಿಗದಿ ಕುರಿತು ಕುಸುಮಾ ಶರ್ಮಾ ವರ್ಸಸ್‌ ಮಹಿಂದರ್‌ ಕುಮಾರ್‌ ಶರ್ಮಾ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್‌ ನಾಲ್ಕು ಸರಣಿ ತೀರ್ಪುಗಳನ್ನು ನೀಡಿ, ಸವಿವರವಾಗಿ ಚರ್ಚಿಸಿದೆ. ಅದೇ ಚರ್ಚೆಗಳನ್ನು ಮುಂದುವರಿಸಿದ ಸುಪ್ರೀಂಕೋರ್ಟ್‌, ಇತ್ತೀಚೆಗೆ, ರಜನೀಶ್‌ ವರ್ಸಸ್‌ ನೇಹಾ ಪ್ರಕರಣದಲ್ಲಿ 'ಜೀವನಾಂಶ' ನಿಗದಿ ಕುರಿತಂತೆ ಮಹತ್ವದ ತೀರ್ಪು ನೀಡಿದೆ. ಮಧ್ಯಂತರ ಜೀವನಾಂಶ, ಕಾಯಂ ಜೀವನಾಂಶ ಹೀಗೆ ಹಲವು ಆಯಾಮಗಳನ್ನು ವಿಶ್ಲೇಷಿಸಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದಕ್ಕೆ ಪೂರಕವಾದ ಆದಾಯ ಘೋಷಣೆ ನಮೂನೆಯನ್ನೂ ಅಂತಿಮಗೊಳಿಸಿದೆ. ಆ ನಮೂನೆಗಳನ್ನು ಈಗ ಎಲ್ಲ ಫ್ಯಾಮಿಲಿ ಕೋರ್ಟ್‌ಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ನಾಲ್ಕು ಕಾಯಿದೆಯಡಿ ಜೀವನಾಂಶವಿಶೇಷ ಮದುವೆ ಕಾಯಿದೆ 1954, ಹಿಂದೂ ವಿವಾಹ ಕಾಯಿದೆ 1955, ಹಿಂದೂ ದತ್ತು ಮತ್ತು ನಿರ್ವಹಣಾ ಕಾಯಿದೆ 1956, ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ 2005ರಡಿ, ಅಪರಾಧ ದಂಡ ಸಂಹಿತೆ ಸೆಕ್ಷನ್‌ 125 ಅನ್ವಯ ಪತಿಯಿಂದ ಪರಿತ್ಯಕ್ತರಾದ ಪತ್ನಿ ತನ್ನ ಜೀವನ ನಿರ್ವಹಣೆ ಮತ್ತು ಮಕ್ಕಳ ಪೋಷಣೆಗೆ ಜೀವನಾಂಶ ಕೋರಿ ಕೌಟುಂಬಿಕ ನ್ಯಾಯಾಲಯಗಳಲ್ಲಿ ದಾವೆ ಹೂಡಲು ಅವಕಾಶಗಳಿವೆ.


from India & World News in Kannada | VK Polls https://ift.tt/37LuDmU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...