ವಾಷಿಂಗ್ಟನ್: ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ಭಾರತದಲ್ಲಿ ನಡೆಯುತ್ತಿರುವ ಇದೀಗ ಅಮೆರಿಕನ್ನರ ಗಮನ ಸೆಳೆದಿದೆ. ಈ ಕುರಿತು ಅಮೆರಿಕದ ಏಳು ಜನಪ್ರತಿನಿಧಿಗಳು ವಿದೇಶಾಂಗ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ. ಭಾರತೀಯ ಮೂಲದ ಕಾಂಗ್ರೆಸ್ ಸದಸ್ಯೆ ಪ್ರಮಿಳಾ ಜಯ್‌ಪಾಲ್ ಸೇರಿದಂತೆ ಒಟ್ಟು ಏಳು ಜನ ಜನಪ್ರತಿನಿಧಿಗಳು ಮೈಕ್ ಪಾಂಪಿಯೋ ಅವರಿಗೆ ಪತ್ರ ಬರೆದಿದ್ದು, ಕೂಡಲೇ ಭಾರತದ ವಿದೇಶಾಂಗ ಸಚಿವರೊಂದಿಗೆ ಈ ಕುರಿತು ಮಾತನಾಡುವಂತೆ ಆಗ್ರಹಿಸಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಹಾಗತಿಕ ಗಮನ ಸೆಳೆದಿದ್ದು, ಈ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಸಚಿವರೊಂದಿಗೆ ಮೈಕ್ ಪಾಂಪಿಯೋ ಮಾತನಾಡಬೇಕು ಎಂದು ಈ ಏಳು ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ. ಭಾರತ ತನ್ನ ಆಂತರಿಕ ನೀತಿಗಳನ್ನು ರೂಪಿಸುವಲ್ಲಿ ಸ್ವಂತಂತ್ರವಾಗಿದೆ. ಭಾರತದ ಸಾರ್ವಭೌಮತ್ವವನ್ನು ನಾವು ಗೌರವಿಸುತ್ತೇವೆ. ಆದರೆ ಜಾಗತಿಕ ಗಮನ ಸೆಳೆದಿರುವ ರೈತ ಪ್ರತಿಭಟನೆ ಕುರಿತು ಮೈಕ್ ಪಾಂಪಿಯೋ ಭಾರತದ ವಿದೇಶಾಂಗ ಸಚಿವರೊಂದಿಗೆ ಮಾತನಾಡಬೇಕಿದೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ಭಾಋತದ ರೈತರು ಕೃಷಿ ಕಾಯ್ದೆಯನ್ನು ತಮ್ಮ ಆರ್ಥಿಕತೆ ಮೇಲೆ ನಡೆದ ಪ್ರಹಾರ ಎಂದೇ ಭಾವಿಸಿದ್ದು, ರೈತರ ನಿರಂತರ ಪ್ರತಿಭಟನೆ ಬಗ್ಗೆ ಕಳವಳ ವ್ಯಕ್ತಪಡಿಸಬೇಕಿದೆ ಎಂದು ಈ ಏಳು ಜನಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಬಗ್ಗೆ ಅಮೆರಿಕನ್ ಭಾರತೀಯರು ಚಿಂತಾಕ್ರಾಂತರಾಗಿದ್ದು, ಅವರ ಈ ಆತಂಕವನ್ನು ಭಾರತದ ವಿದೇಶಾಂಗ ಸಚಿವರಿಗೆ ಮೈಕ್ ಪಾಂಪಿಯೋ ತಲುಪಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಕೂಡ ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆದರೆ ಟ್ರುಡೋ ಹೇಳಿಕೆಯನ್ನು ಖಂಡಿಸಿದ್ದ ಭಾರತ, ಆಂತರಿಕ ವಿಷಯದಲ್ಲಿ ಮೂಗು ತೂರಿಸದಂತೆ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
from India & World News in Kannada | VK Polls https://ift.tt/3mN7BQZ