ಕೋಲ್ಕೊತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಗ್ರಾಮವೊಂದರಲ್ಲಿಇತ್ತೀಚೆಗೆ ಟಿ.ವಿ ನೋಡುವುದು ಸೇರಿದಂತೆ ಹಲವು ಚಟುವಟಿಕೆಗಳನ್ನು ನಿರ್ಬಂಧಿಸಿ ಹೊರಡಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯ ಬಾಹುಳ್ಯವಿರುವ ಈ ಪ್ರದೇಶದಲ್ಲಿ ಈ ತರಹದ ಒಂದು ಫತ್ವಾ ಹೊರಡಿಸಲಾಗಿದ್ದು, ಟಿವಿ ನೋಡುವುದು, ಕೇರಮ್ ಆಡುವುದು, ಲಾಟರಿ, ಮದ್ಯ ಮಾರಾಟ ಮತ್ತು ಖರೀದಿ, ಮೊಬೈಲ್ ಮತ್ತು ಕಂಪ್ಯೂಟರ್‌ನಲ್ಲಿ ಸಂಗೀತ ಆಲಿಸುವುದು ಕೂಡ ನಿಷೇಧ ಮಾಡಲಾಗಿದೆ. ಅಲ್ಲದೇ ಈ ನಿಯಮವನ್ನು ಉಲ್ಲಂಘನೆ ಮಾಡಿದವರಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸಲಾಗಿದೆ. ಸಾಮಾಜಿಕ ಸುಧಾರಣಾ ಸಮಿತಿಯ ಬ್ಯಾನರ್‌ನಡಿ ಈ ಫತ್ವಾವವನ್ನು ಹೊರಡಿಸಿಲಾಗಿದ್ದು, ಇದೀಗ ಈ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೊಂದು ಕಡೆ ಇಂತಹ ವಿವಾದಾತ್ಮಕ ಫತ್ವಾ ಹೊರಡಿಸಿರುವ ಸಮುದಾಯದ ಮೂಲಭೂತವಾದಿಗಳ ವಿರುದ್ಧ ಯುವಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದ್ವೇತಾ ನಗರ್ ಗ್ರಾಮದ ಸಮಾಜ ಸುಧಾರಣೆ ಸಮಿತಿ ಹೆಸರಿನಲ್ಲಿಈ ಫತ್ವಾ ಹೊರಡಿಸಲಾಗಿದ್ದು, ನಿರ್ಬಂಧಿತ ಚಟುವಟಿಕೆ ಮಾಡಿದವರಿಗೆ ಕನಿಷ್ಠ 500 ರೂ. ನಿಂದ ಆರಂಭಗೊಂಡು 7,000 ರೂ.ವರೆಗೆ ದಂಡದ ದರವನ್ನು ಕೂಡ ನಿಗದಿಪಡಿಸಲಾಗಿದೆ.
from India & World News in Kannada | VK Polls https://ift.tt/2Qfppq2