ಕೊರೊನಾ ವೈರಾಣು ನಿಯಂತ್ರಣಕ್ಕೆ ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದೆ. ರಷ್ಯಾದ ಗಮಲೇಯಾ ಇನ್‌ಸ್ಟಿಟ್ಯೂಟ್ ಕಂಡುಹಿಡಿದಿರುವ ಲಸಿಕೆಯ ಕ್ಲಿನಿಕಲ್ ಟ್ರಯಲ್ ಮುಕ್ತಾಯಗೊಂಡಿದೆ. ಈಗ ಲಸಿಕೆ ನೋಂದಣಿ ಪ್ರಕ್ರಿಯೆ ಬಾಕಿ ಇದೆ ಎಂದು ಸರಕಾರ ತಿಳಿಸಿದೆ. ಮೂರೂ ಹಂತಗಳ ವೈದ್ಯಕೀಯ ಪ್ರಯೋಗ ಪೂರೈಸಲಾಗಿದೆಯೇ ಅಥವಾ ಎರಡೇ ಹಂತಗಳ ಪರೀಕ್ಷೆ ಮುಗಿದಿಯೇ ಎನ್ನುವುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಅಕ್ಟೋಬರ್ ಹೊತ್ತಿಗೆ ಲಸಿಕೆ ಉತ್ಪಾದನೆ ಆರಂಭಿಸುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ ಶಿಕ್ಷಕರು ಮತ್ತು ವೈದ್ಯರಿಗೆ ಲಸಿಕೆ ನೀಡಲಾಗುತ್ತದೆ. ಮಾನವನ ಮೇಲೆ ಪ್ರಯೋಗಿಸುವ ಕ್ಲಿನಿಕಲ್ ಟ್ರಯಲ್‌ನಲ್ಲಿ ಮೂರು ಹಂತಗಳಿರುತ್ತವೆ. ಇನ್ನು ಹಂತಗಳ ಬಗ್ಗೆ ಇನ್ನು ಸ್ಪಷ್ಟನೆ ನೀಡದ ಹಿನ್ನೆಲೆ ಮೇಲೆ ಸಹಜವಾಗೇ ಅನುಮಾನ ಮೂಡಿದೆ. ಲಸಿಕೆ ಪರಿಣಾಮ ಹಾಗೂ ಸುರಕ್ಷತೆ ಬಗ್ಗೆ ಯಾವುದೇ ಮಾಹಿತಿಯನ್ನ ಸಂಶೋಧಕರು ಹಾಗೂ ಸರಕಾರ ಬಹಿರಂಗಪಡಿಸಿಲ್ಲ. ಹೀಗಾಗಿ ಈ ಬಗ್ಗೆ ಪ್ರಶ್ನೆಗಳು ಏಳ ತೊಡಗಿವೆ. ಕೊರೊನಾ ಲಸಿಕೆ ಕಂಡು ಹಿಡಿಯುವಲ್ಲಿ ಎಲ್ಲಾ ದೇಶಗಳ ಭಾರೀ ಸಂಶೋಧನೆ ನಡೆಸುತ್ತಿದೆ. ಅಮೆರಿಕ ಸೇರಿ ಎಲ್ಲಾ ದೇಶಗಳು ಈ ಬಗ್ಗೆ ಹೆಜ್ಜೆ ಇಡುತ್ತಿದ್ದಾರೆ. ಆದರೆ ಯಾವ ದೇಶಕ್ಕೂ ಸಾಧ್ಯವಾಗುತ್ತಿಲ್ಲ. ಭಾರತ ಕೂಡ ಲಸಿಕೆ ವಿಚಾದಲ್ಲಿ ಮುಂಚೂಣಿಯಲ್ಲಿದೆ.
from India & World News in Kannada | VK Polls https://ift.tt/3gskiOI