ಮೆಡಿಕಲ್ ಕಾಲೇಜ್ ಸ್ಟಾಫ್ ನರ್ಸ್ ಸಿಬ್ಬಂದಿ ಪ್ರತಿಭಟನೆಗೆ ಸಚಿವ ಸುಧಾಕರ್ ಸ್ಪಂದನೆ

ಬೆಂಗಳೂರು: ವೈರಸ್ ಸೋಂಕು ರಾಜ್ಯದಲ್ಲಿ ತಾಂಡವವಾಡುತ್ತಿರುವ ಹೊತ್ತಿನಲ್ಲಿ ಆರೋಗ್ಯ ಇಲಾಖೆಯ ತಾರತಮ್ಯ ನೀತಿ ವಿರೋಧಿಸಿ ಖಾಯಂ ಶುಶ್ರೂಷಕರ ಸಂಘದ ವತಿಯಿಂದ ಸ್ಟಾಫ್‌ ನರ್ಸ್‌ಗಳು ಮಾಡುತ್ತಿದ್ದಾರೆ. ಸ್ಟಾಫ್ ನರ್ಸ್‌ಗಳು ಆರಂಭಿಸಿದ್ದ ಈ ಪ್ರತಿಭಟನೆ ಮೂರನೇ ದಿನಕ್ಕೆ ತಲುಪಿದ್ದು, ಕೊರೊನಾ ವಿಚಾರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯಕೀಯ ಇಲಾಖೆ ಸಿಬ್ಬಂದಿ ನಡುವೆ ಮಾಡುತ್ತಿರುವ ತಾರತಮ್ಯ ಸರಿಯಲ್ಲ ಎಂದು ಪ್ರತಿಭಟನಾಕಾರರು ಕಳೆದ ಮೂರು ದಿನಗಳಿಂದ ಕೈಗೆ ಕಪ್ಪು ಪಟ್ಟಿ ಧರಿಸಿ ಆಗ್ರಹಿಸುತ್ತಿದ್ದಾರೆ. ಶುಶ್ರೂಷಕರ ಸಂಘದ ವತಿಯಿಂದ ನಡೆಯುತ್ತಿರುವ ಈ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿದ್ದು ಇದೀಗ ಸ್ಟಾಫ್‌ ನರ್ಸ್‌ಗಳ ಪ್ರತಿಭಟನೆಗೆ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಸ್ಪಂದಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ಸುಧಾಕರ್, ಮೆಡಿಕಲ್ ಕಾಲೇಜ್ ಪ್ರತಿಭಟನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಸಮಯದಲ್ಲಿ ಖಾಯಂ ಶುಶ್ರೂಷಕರ ಸಂಘಕ್ಕೆ ತಿಳಿಸುವುದೇನೆಂದರೆ, ನಿಮ್ಮ ವಿವಿಧ ಬೇಡಿಕೆಯ ಬಗ್ಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶೀ ಬಿಎಸ್‌ ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಎರಡು ಟ್ವೀಟ್‌ ಮಾಡಿರುವ ಸುಧಾಕರ್ ಮತ್ತೊಂದು ಟ್ವೀಟ್‌ನಲ್ಲಿ, ಆದಷ್ಟು ಬೇಗ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತೇನೆ. ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಈ ತಕ್ಷಣವೇ ತಾವು ಕಾರ್ಯಪ್ರವೃತ್ತರಾಗಿ. ಕೊರೊನಾ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಸರ್ಕಾರ ನಿಮ್ಮ ಬೇಡಿಕೆಗಳನ್ನು ಈಡೇರಿಸಲಿದೆ ಎಂದು ಭರವಸೆ ನೀಡುತ್ತಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ. ಬೆಂಗಳೂರು ಮೆಡಿಕಲ್ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಮೆಡಿಕಲ್ ಕಾಲೇಜ್ ಸ್ಟಾಫ್ ನರ್ಸ್‌ಗಳು ಖಾಯಂ ಶುಶ್ರೂಷಕರ ಸಂಘದ ಸದಸ್ಯರು, ಆರೋಗ್ಯ ಇಲಾಖೆಯ ಸ್ಟಾಫ್‌ ನರ್ಸ್‌ಗಳಿಗೆ ಸಿಗುವ ಸೌಲಭ್ಯ ವೈದ್ಯಕೀಯ ಶಿಕ್ಷಣ ಇಲಾಖೆಯ ನರ್ಸ್‌ಗಳಿಗೂ ಸಿಗಬೇಕು ಮತ್ತು ನೂತನ ಪಿಂಚಣಿ ಯೋಜನೆಯನ್ನೂ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದರು.


from India & World News in Kannada | VK Polls https://ift.tt/2EwkZZ9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...