ಆತನೋರ್ವ ಕ್ರೂರಿ ಹಾಗೂ ಸುಳ್ಳುಗಾರ: ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ ಸಹೋದರಿ!

ವಾಷಿಂಗ್ಟನ್: ಶತಾಯಗತಾಯ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂದು ಪಣತೊಟ್ಟಿರುವ ಅಮೆರಿಕದ ಅಧ್ಯಕ್ಷ , ಭರ್ಜರಿ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ. ಆದರೆ ಟ್ರಂಪ್ ಅವರಿಗೆ ಆಂತಿಕವಾಗಿಯೇ ವಿರೋಧಿಗಳು ಹೆಚ್ಚುತ್ತಿದ್ದು, ಟ್ರಂಪ್ ಕುಟುಂಬಸ್ಥರೇ ಅವರ ವಿರುದ್ಧ ಗಂಭಿರ ಆರೋಪಗಳನ್ನು ಮಾಡುತ್ತಿರುವುದು ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಡೊನಾಲ್ಡ್ ಟ್ರಂಪ್ ಓರ್ವ ಕ್ರೂರಿ ಹಾಗೂ ಮಹಾನ್ ಸುಳ್ಳುಗಾರ ಎಂದು ಅವರ ಸಹೋದರಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಾದ ಬ್ಯಾರಿ ಅವರ ಸಂಭಾಷಣೆ ಟೇಪ್ ಇದೀಗ ಅಮೆರಿಕದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಟ್ರಂಪ್ ಅವರ ಕ್ರೂರ ವಲಸೆ ನೀತಿಯಿಂದ ಸಾವಿರಾರು ಜನ ಬೀದಿಪಾಲಾಗಿದ್ದು, ಗಡಿಯಲ್ಲಿ ತಾಯಿ-ಮಕ್ಕಳನ್ನು ಬೇರ್ಪಡಿಸಿ ಬಂಧನ ಕೇಂದ್ರಗಳಿಗೆ ಕಳುಹಿಸಿದ ಶಾಪ ಟ್ರಂಪ್ ಅವರಿಗೆ ತಟ್ಟಲಿದೆ ಎಂದು ಮರಿಯಾನ್ನೆ ಟ್ರಂಪ್ ಬ್ಯಾರಿ ಹೇಳಿದ್ದಾರೆ. ತನ್ನ ಆಡಳಿತಾವಧಿಯ ಉದ್ದಕ್ಕೂ ಕೇವಲ ಸುಳ್ಳುಗಳನ್ನೇ ಹೇಳಿಕೊಂಡು ಬಂದಿರುವ ಟ್ರಂಪ್, ಅಮೆರಿಕದ ಜನತೆಗೆ ಮೋಸ ಮಾಡಿರುವುದಾಗಿ ಮರಿಯಾನ್ನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಿಯಾನ್ನೆ ಟ್ರಂಪ್ ಬ್ಯಾರಿ ಅವರ ಸಂಭಾಷಣೆಯ ಟೇಪ್‌ನ್ನು ಟ್ರಂಪ್ ಅವರ ಸಂಬಂಧಿ ಮೇರಿ ಟ್ರಂಪ್ ಬಿಡುಗಡೆ ಮಾಡಿದ್ದು, ಟ್ರಂಪ್ ಕುಟುಂಬದ ಆಪ್ತ ವಲಯದಿಂದಲೇ ವಿರೋಧ ಎದುರಿಸಬೇಕಾಗಿ ಬಂದಿರುವುದು ಸ್ಪಷ್ಟವಾಗಿದೆ. ಮೇರಿ ಟ್ರಂಪ್ ಡೊನಾಲ್ಡ್ ಟ್ರಂಪ್ ಅವರ ಕುರಿತು ಬರೆದಿರುವ 'Too Much and Never Enough' ಎಂಬ ಪುಸ್ತಕದ ಸುಮಾರು ಒಂದು ಮಿಲಿಯನ್ ಕಾಪಿಗಳು ಮಾರಾಟವಾಗಿವೆ. ಇದೀಗ ಟ್ರಂಪ್ ಸಹೋದರಿ ಮರಿಯಾನ್ನೆ ಟ್ರಂಪ್ ಅಮೆರಿಕದ ಅಧ್ಯಕ್ಷರ ಕುರಿತು ಆಡಿದ ಮಾತುಗಳು ಅಮೆರಿಕದಲ್ಲಿ ಭಾರೀ ಕೋಲಾಹಲವನ್ನು ಎಬ್ಬಿಸಲಿದೆ ಎಂದು ನಿರೀಕ್ಷಿಸಲಾಗಿದೆ.


from India & World News in Kannada | VK Polls https://ift.tt/2CRJakl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...