ನವದೆಹಲಿ: ಈ ವರ್ಷಾಂತ್ಯಕ್ಕೆ ಮಾರಕ ಕೊರೊನಾ ವೈರಸ್‌ಗೆ ದೇಶೀಯ ಲಸಿಕೆ ಸಿದ್ಧಗೊಳ್ಳಲಿದೆ ಎಂದು ಡಾ. ಹರ್ಷವರ್ಧನ್ ಭರವಸೆ ನೀಡಿದ್ದಾರೆ. ಸದ್ಯ ದೇಶದಲ್ಲಿ ಮೂರು ಲಸಿಕೆಗಳು ಸಂಶೋಧನಾ ಹಂತದಲ್ಲಿದ್ದು, ಇವುಗಳ ಪೈಕಿ ಒಂದು ಲಸಿಕೆ ಮೂರನೇ ಹಂತದ ಮಾನವ ಪ್ರಯೋಗ ನಡೆಸುತ್ತಿದೆ ಎಂದು ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ. ಸಂಶೋಧನೆಗೆ ಎಲ್ಲ ದೇಶಗಳೂ ಒತ್ತು ನೀಡುತ್ತಿದ್ದು, ಕೂಡ ಈ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಡಾ. ಹರ್ಷವರ್ಧನ್ ನುಡಿದಿದ್ದಾರೆ. ಭಾರತ ಕಳೆದ ಎಂಟು ತಿಂಗಳಿನಿಂದ ವಿರುದ್ಧ ಹೋರಾಡುತ್ತಿದ್ದು, ಇಡೀ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಗುಣಮುಖ ಪ್ರಮಾಣವನ್ನು ಹೊಂದಿದೆ ಎಂದು ಹರ್ಷವರ್ಧನ್ ಈ ವೇಳೆ ಸಂತಸ ವ್ಯಕ್ತಪಡಿಸಿದರು. ಭಾರತದಲ್ಲಿ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಏ.75ರಷ್ಟಿದ್ದು, ಇದುವರೆಗೂ ಒಟ್ಟು 2.2 ಮಿಲಿಯನ್ ಜನ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದರು. ಅದರಂತೆ ಇದೀಗ ಕೋವಿಡ್ ಲಸಿಕೆ ಸಂಶೋಧನೆ ಕೂಡ ಪ್ರಗತಿ ಕಾಣುತ್ತಿದ್ದು, ಯಶಸ್ವಿ ಲಸಿಕೆ ಸಿದ್ಧಗೊಂಡರೆ ಭಾರತ ಸಂಪೂರ್ಣವಾಗಿ ಕೊರೊನಾ ವೈರಸ್ ಮೇಲೆ ಹಿಡಿತ ಸಾಧಿಸಲಿದೆ ಎಂದು ಹರ್ಷವರ್ಧನ್ ಈ ವೇಳೆ ಭರವಸೆ ವ್ಯಕ್ತಪಡಿಸಿದರು.
from India & World News in Kannada | VK Polls https://ift.tt/3aLTZ46