ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ LIVE; ಶತಕದತ್ತ ಕಿಂಗ್ ಕೊಹ್ಲಿ; ಬೃಹತ್ ಮುನ್ನಡೆಯತ್ತ ಭಾರತ

ಕೋಲ್ಕೊತಾ: ಇಲ್ಲಿನ ಇತಿಹಾಸ ಪ್ರಸಿದ್ಧ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಐತಿಹಾಸಿಕ ಪಿಂಕ್ ಬಾಲ್ ಪಂದ್ಯದ ಎರಡನೇ ದಿದನಾಟದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕದತ್ತ ಮುನ್ನುಗುತ್ತಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾ ಬೃಹತ್ ಮುನ್ನಡೆಯತ್ತ ಮುನ್ನಡೆಯುತ್ತಿದೆ. ಕೊಹ್ಲಿ, ರಹಾನೆ ಜತೆಯಾಟ... ಎರಡನೇ ದಿನದಾಟದಲ್ಲೂ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಉತ್ತಮ ಜತೆಯಾಟವನ್ನು ನೀಡಿದರು. ಇದರೊಂದಿಗೆ ಭಾರತವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಈ ನಡುವೆ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ರಹಾನೆ ಸತತ ನಾಲ್ಕನೇ ಅರ್ಧಶತಕ ಸಾಧನೆ ಮಾಡಿದರು. ಮೊದಲ ದಿನದಾಟದಲ್ಲಿ ಭಾರತೀಯ ವೇಗಿಗಳ ಮಾರಕ ದಾಳಿಗೆ ತತ್ತರಿಸಿರುವ ಬಾಂಗ್ಲಾದೇಶ, 30.3 ಓವರ್‌ಗಳಲ್ಲಿ 106 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಬಳಿಕ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಮೂರು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತ್ತು. ಸತತ 4ನೇ ಫಿಫ್ಟಿ ಬಳಿಕ ರಹಾನೆ ಪತನ... ಈ ನಡುವೆ ಉತ್ತಮವಾಗಿ ತಡುತ್ತಿದ್ದ ಅಜಿಂಕ್ಯ ರಹಾನೆ ಕೆಟ್ಟ ಶಾಟ್‌ಗೆ ಬಲಿಯಾದರು. ಆಗನೇ ನಾಯಕ ವಿರಾಟ್ ಕೊಹ್ಲಿ ಜತೆಗೆ ನಾಲ್ಕನೇ ವಿಕೆಟ್‌ಗೆ 99 ರನ್‌ಗಳ ಜತೆಯಾಟ ನೀಡಿದರು. 69 ಎಸೆತಗಳನ್ನು ಎದುರಿಸಿದ ರಹಾನೆ ಏಳು ಬೌಂಡರಿಗಳಿಂದ 51 ರನ್ ಗಳಿಸಿದರು. ಗುಲಾಬಿ ಚೆಂಡಿನಲ್ಲಿ ವೇಗಿಗಳ ದರ್ಬಾರು ಈಡನ್‌ ಗಾರ್ಡನ್ಸ್‌ ಪಿಚ್‌ನಲ್ಲಿ ಭರ್ಜರಿಯಾಗಿ ಪುಟಿಯುತ್ತಿದ್ದ ಗುಲಾಬಿ ಬಣ್ಣದ ಚೆಂಡಿನ ಮರ್ಮವನ್ನು ಅರಿತ ಭಾರತೀಯ ವೇಗಿಗಳು ಬಾಂಗ್ಲಾದೇಶ ಬ್ಯಾಟಿಂಗ್‌ ಪಡೆಯನ್ನೇ ಛಿದ್ರಗೊಳಿಸುವ ಮೂಲಕ, ಭಾರತದಲ್ಲಿ ನಡೆಯುತ್ತಿರುವ ಮೊಟ್ಟಮೊದಲ ಹಗಲು- ರಾತ್ರಿ ಪಂದ್ಯದ ಮೊದಲ ದಿನದಾಟದಲ್ಲಿಆತಿಥೇಯರ ಮುನ್ನಡೆಗೆ ಕಾರಣರಾದರು. ಕೊಹ್ಲಿ, ಪೂಜಾರ ಆಸರೆ: ಭಾರತದ ಪರ ಆಡಲಿಳಿದ ಆರಂಭಿಕರಾದ ಮಯಾಂಕ್‌ ಅಗರ್ವಾಲ್‌ (14) ಹಾಗೂ ರೋಹಿತ್‌ ಶರ್ಮ (21)ಗೆ ಅಲ್‌ ಅಮೀನ್‌ ಹಾಗೂ ಇಬಾದತ್‌ ಹೊಸೈನ್‌ ಬೇಗ ಪೆವಿಲಿಯನ್‌ ದಾರಿ ತೋರಿದರು. ಆದರೆ, ನಂತರ ಕ್ರೀಸಿಗಿಳಿದ ಚೇತೇಶ್ವರ ಪೂಜಾರ (55) ಅರ್ಧ ಶತಕ ದಾಖಲಿಸಿದರೆ, ನಾಯಕನಾಟ ತೋರಿದ ವಿರಾಟ್‌ ಕೊಹ್ಲಿ59 ರನ್‌ ಗಳಿಸಿ ಎರಡನೇ ದಿನಕ್ಕೆ ಆಟ ಮುಂದುವರಿಸಿದರು. ಬೌನ್ಸರ್‌ ಗಾಯ: ಮೊಹಮ್ಮದ್‌ ಶಮಿ 2 ವಿಕೆಟ್‌ ಮಾತ್ರ ಪಡೆದರೂ ಬಾಂಗ್ಲಾಬ್ಯಾಟ್ಸ್‌ಮನ್‌ಗಳಿಗೆ ಅವರು ಅಪಾಯಕಾರಿಯಾಗಿ ಕಂಡರು. ಬಾಂಗ್ಲಾತಂಡಕ್ಕೆ ಆಸರೆಯಾಗಿದ್ದ ಲಿಟನ್‌ ದಾಸ್‌ ತಲೆಗೆ ಶಮಿ ಎಸೆದ ಬೌನ್ಸರ್‌ ಬಡಿದು ಅವರು ಗಾಯಗೊಂಡು ಮೈದಾನದಿಂದ ಹೊರಕ್ಕೆ ನಡೆದರೆ, ಬದಲಿ ಆಟಗಾರನಾಗಿ ಬಂದ ನಯೀಮ್‌ ತಲೆಗೂ ಶಮಿಯ ಬೌನ್ಸರ್‌ ಬಡಿಯಿತು. ಹೀಗಾಗಿ ಅವರೂ ನಂತರದಲ್ಲಿಫೀಲ್ಡಿಂಗ್‌ ಮಾಡಲು ಬರಲಿಲ್ಲ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2L1V3Ft

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...