ಮುಂಬಯಿ: ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ನಡೆದ ಕ್ಷಿಪ್ರ ಬೆಳವಣಿಗೆಯಿಂದ ಆಡಳಿತಕ್ಕೆ ಬಂದಿದೆ. ಬಿಜೆಪಿ ಮತ್ತು ನ್ಯಾಷನಲಿಸ್ಟ್ ಪಾರ್ಟಿ(ಎನ್‍ಸಿಪಿ) ದೋಸ್ತಿ ಮಾಡಿಕೊಂಡು ಬೆಳ್ಳಂಬೆಳಗ್ಗೆ ಅಧಿಕಾರದ ಗದ್ದುಗೆ ಏರಿದೆ ವಹಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲ 10 ದಿನಗಳ ಹಿಂದೆ ಹೇರಿಕೆಯಾಗಿದ್ದ ರಾಷ್ಟ್ರಪತಿ ಆಡಳಿತ ಶನಿವಾರ ಮುಂಜಾನೆ 5.47ಕ್ಕೆ ಹಿಂಪಡೆಯಲಾಗಿದೆ. ನಾಯಕ ಅಣ್ಣ ಅನಂತ್ ರಾವ್ ಪವಾರ್ ಅವರ ಪುತ್ರ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡಿರುವುದಕ್ಕೆ ಸ್ವತಃ ಎನ್‌ಸಿಪಿಯಲ್ಲೇ ಒಳ ಜಗಳ ಮತ್ತು ಕುಟುಂಬ ಜಗಳಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕವೆಂಬಂತೆ ಶರದ್ ಪವಾರ್ ಮಗಳು ಸುಪ್ರಿಯಾ ಸುಳೆ, "ಪಕ್ಷ ಮತ್ತು ಕುಟುಂಬ ಇಬ್ಬಾಗ"ವಾಗಿದೆ ಎಂದು ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ಮೈತ್ರಿ ಸರಕಾರ ರಚನೆಯಾದ ಬೆನ್ನಲ್ಲೇ ಅಸಮಾಧಾನ ಹೊರ ಹಾಕಿರುವ ಎನ್‌ಸಿಪಿ ನಾಯಕ ಶರದ್ ಪವಾರ್ ಟ್ವೀಟ್ ಮಾಡಿ 'ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಸೇರಿಕೊಂಡು ಸರಕಾರ ರಚಿಸುವ ಅಜಿತ್ ಪವಾರ್ ಅವರ ನಿರ್ಧಾರ ವೈಯಕ್ತಿಕವಾದುದು. ಅಜಿತ್ ಅವರ ಈ ನಿರ್ಧಾರಕ್ಕೆ ನಮ್ಮ ಬೆಂಬಲವಿಲ್ಲ. ಪಕ್ಷ ಕೂಡ ಇದನ್ನು ಅನುಮೋದಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಶರದ್ ಪವಾರ್ ಅವರಿಗೆ ತಿಳಿಸದೇ ಈ ನಿರ್ಧಾರ ತೆಗೆದುಕೊಂಡ ಅಜಿತ್ ಪವಾರ್ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿರುವ ಎನ್‌ಸಿಪಿ ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆ ಇದೆ. ಈ ದಿಢೀರ್ ಬೆಳವಣಿಗೆ ಇಡೀ ಮಹಾರಾಷ್ಟ್ರದಲ್ಲಿ ಸದ್ದು ಮಾಡುತ್ತಿದೆ. ಜೊತೆಗೆ ಕಾಂಗ್ರೆಸ್ ಮತ್ತು ಶಿವಸೇನೆ ಪಕ್ಷಗಳು ಎನ್‌ಸಿಪಿ ವಿರುದ್ಧ ಕೆಂಡಕಾರುತ್ತಿದೆ. ಶಿವಸೇನೆ ನಾಯಕ ಸಂಜಯ್ ರಾವತ್ ಕೂಡ ತುರ್ತು ಸುದ್ದಿಗೋಷ್ಠಿ ನಡೆಸಿ ಅಜಿತ್ ಪವಾರ್ ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ಶರದ್ ಪವಾರ್ ಅವರ ಬೆಂಬಲ ಇದಕ್ಕೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದರ ಜೊತೆ ಇಬ್ಬಾಗವಾದ ಎನ್‌ಸಿಪಿ ಮತ್ತು ಬಿಜೆಪಿ ಮೈತ್ರಿ ಸರಕಾರ ಬಹುಮತ ಸಾಬೀತುಪಡಿಸಬೇಕಿದ್ದು, ಅಗತ್ಯ ಬಹುಮತಕ್ಕಾಗಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ರೆಸಾರ್ಟ್ ರಾಜಕೀಯ ಆರಂಭಿಸಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಕುದುರೆ ವ್ಯಾಪಾರದ ಭೀತಿಯಿಂದ ಶರದ್ ಪವಾರ್ ತನ್ನ ಉಳಿದ ಎಲ್ಲ ಶಾಸಕರನ್ನು ಮಹಾರಾಷ್ಟ್ರದಿಂದ ಹೊರಗೆ ಕಳುಹಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಜೊತೆಗೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಮಧ್ಯಾಹ್ನ 12.30 ಕ್ಕೆ ಜಂಟಿ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಇದರ ಜೊತೆಗೆ ಸಂಜೆ 4.30ಕ್ಕೆ ಶರದ್ ಪವಾರ್ ಎನ್‌ಸಿಪಿಯ ಶಾಸಕರ ಸಭೆಯನ್ನು ಕೂಡ ಕರೆದಿದ್ದಾರೆ.
from India & World News in Kannada | VK Polls https://ift.tt/2riaFgZ