ಯಡಿಯೂರಪ್ಪ-ಅಶೋಕ್‌ ನಡುವೆ ಕೊಂಡಿ ಕಳಚಿದೆ: ಕುಮಾರಸ್ವಾಮಿ​

ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ಒಳಜಗಳ ಇದ್ದರೆ ಒಳಗೆ ಇಟ್ಟುಕೊಳ್ಳಲಿ. ಪಕ್ಷದ ರಾಜಕೀಯ ಸರಿಪಡಿಸಲು ಮುಖ್ಯಮಂತ್ರಿಗಳಿಗೆ ಸಮಯ ಸಾಲುತ್ತಿಲ್ಲ. ಇನ್ನು ಜನರ ಸಮಸ್ಯೆ ಬಗೆಹರಿಸಲು ಇವರಿಗೆ ಸಮಯ ಎಲ್ಲಿಂದ ಸಿಗಬೇಕು? ಯಡಿಯೂರಪ್ಪ ಮತ್ತು ಆರ್‌ ಆಶೋಕ್ ನಡುವೆ ಕೊಂಡಿ ಕಳಚಿದೆ ಅನ್ನಿಸುತ್ತಿದೆ ಎಂದು ಅವರು ಯಡಿಯೂರಪ್ಪ ಮತ್ತು ಅಶೋಕ್‌ ಮಧ್ಯೆ ಸಂಬಂಧ ಕಳಚಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತಪಡಸಿದರು. ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮ ಸಂವಾದ ನಡೆಸಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಸಂಪುಟದ ಮಂತ್ರಿಗಳು ಯಾರು ಸಿಎಂಗೆ ಬೆಂಬಲ ಕೊಡುತ್ತಿಲ್ಲ ಎಂದೆನಿಸುತ್ತಿದೆ. ಸಂಪುಟದ ಒಬ್ಬೊಬ್ಬರಿಗೆ ಎರಡೇರಡು ಜಿಲ್ಲೆಯ ಉಸ್ತುವಾರಿ ಕೊಟ್ಟಿದ್ದಾರೆ. ಆದರೆ ಯಾರು ಆ ಜಿಲ್ಲೆಗಳಿಗೆ ಹೋಗಿಲ್ಲ. ಕಂದಾಯ ಸಚಿವರು ರಾಜ್ಯದಲ್ಲಿ ಇದ್ದಾರಾ? ಎಲ್ಲಿ ಪ್ರವಾಸ ಮಾಡಿದ್ದಾರೆ? ಜನರ ಸಮಸ್ಯೆ ಕೇಳಲೇ ಇಲ್ಲ ಯಾಕೆ? ಎಂದು ಕಂದಾಯ ಸಚಿವ ಆರ್‌ ಅಶೋಕ್‌ ಬಗ್ಗೆ ಕುಮಾರಸ್ವಾಮಿ ಅಸಮಾಧಾನ ವ್ಯಕ್ತ ಪಡಿಸಿದರು. ದೇಶದಲ್ಲಿ ಸುಭದ್ರ ಸರಕಾರ‌ ಇದ್ದರೂ ಆರ್ಥಿಕ ಪರಿಸ್ಥಿತಿ ಸಮಸ್ಯೆ ಆಗಿದೆ. ರಾಷ್ಟ್ರದ ಆರ್ಥಿಕ ಸಮಸ್ಯೆ ಆತಂಕ ಉಂಟುಮಾಡುತ್ತಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೆರೆ ಸಾಮಾನ್ಯವಾಗಿದೆ. ಆದರೆ ಅಧಿಕಾರದಲ್ಲಿ ಇರುವವರು ಅದನ್ನ ಗಂಭೀರವಾಗಿ ತೆಗೆದುಕೊಂಡಿದ್ದರೋ ಇಲ್ವೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದರು. ಪಿಎಂ ಭೇಟಿಗೆ ಸಿಎಂ ಅವಕಾಶ ಕೊಡದಿರುವುದು ರಾಜ್ಯದ ಜನತೆಗೆ ಮಾಡಿದ ಅಪಮಾನ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾದ ಬಳಿಕ ಮುಖ್ಯಮಂತ್ರಿ ಆದರೆ ಒಳ್ಳೆಯದಾಗುತ್ತದೆ ಎಂದು ಚರ್ಚೆ ಮಾಡಿದ್ದರು. ಆದರೆ ಮೈತ್ರಿ ಸರಕಾರ ಅಸ್ಥಿರಗೊಳಿಸಿದ ಬಳಿಕ ಬಿಜೆಪಿ ಸರಕಾರ ರಚನೆ ಮಾಡಲು ಒಂದು ವಾರ ತೆಗೆದುಕೊಂಡರು. ಬಹುಶಃ ಕೇಂದ್ರದ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಭಯ ಹುಟ್ಟಿಸಿ ಮುಖ್ಯಮಂತ್ರಿ ಆದರು ಅನಿಸುತ್ತಿದೆ. ಸಿಎಂ ಆದ ಬಳಿಕ ಯಡಿಯೂರಪ್ಪ ಅವರನ್ನ ಪ್ರಧಾನಿ ಭೇಟಿಗೂ ಅವಕಾಶ ಕೊಡಲಿಲ್ಲ. ಇದನ್ನು ನೋಡಿದರೆ ನಮ್ಮ ಸಿಎಂಗೆ ಆದ ಅಪಮಾನ ನಮ್ಮ ರಾಜ್ಯದ ಜನತೆಗೆ ಆದ ಅಪಮಾನ ಅಂತ ಭಾವಿಸಿದ್ದೇನೆ ಎಂದರು.


from India & World News in Kannada | VK Polls https://ift.tt/339aT7Z

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...