ಅನರ್ಹರಿಗೆ ಟಿಕೆಟ್‌ ವಿಚಾರ ಪ್ರಧಾನಿ ಮೋದಿಗೂ ಗೊತ್ತಿದೆ: ಎಚ್‌ಡಿ ದೇವೇಗೌಡ

ಹಾಸನ: ಬಿಜೆಪಿ ನಡೆ ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು, ಈ ಸರಕಾರ ರಚನೆಯಾಗಿರುವುದೇ ಕೆಟ್ಟ ನಡವಳಿಕೆಯಿಂದ ಎಂದು ಮಾಜಿ ಪ್ರಧಾನಿ ಟೀಕಿಸಿದರು. ಆಲೂರಿನ ಹೆಲಿಪ್ಯಾಡ್‌ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ಅನರ್ಹ ಶಾಸಕರನ್ನು ಮುಂಬೈನಲ್ಲಿಟ್ಟಿದ್ದ ಸಂಗತಿ ಅಮಿತ್‌ ಶಾಗೂ ಗೊತ್ತಿತ್ತು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿದ್ದಾರೆನ್ನಲಾದ ಆಡಿಯೋ ವೈರಲ್‌ ವಿಚಾರದ ವಿರುದ್ಧ ಕಾಂಗ್ರೆಸ್‌ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ರಾಷ್ಟ್ರಪತಿಗೂ ದೂರು ನೀಡುವುದಾಗಿ ಹೇಳಿದ್ದಾರೆ. ಎಲ್ಲವನ್ನು ಕಾದು ನೋಡೋಣ' ಎಂದರು. 'ಅನರ್ಹರ ತೀರ್ಪು ನೋಡಿ ಮುಂದಿನ ನಿರ್ಧಾರ ಮಾಡಲಾಗುವುದು ಎಂದು ಸ್ವತಃ ಸಿಎಂ ಅವರೇ ಹೇಳಿರುವ ವಿಚಾರ ಪ್ರಧಾನಿ ಸೇರಿ ಎಲ್ಲರಿಗೂ ತಿಳಿದಿದೆ. ಕೇಂದ್ರ ಸರಕಾರ ಉತ್ತರಾಂಚಲದಲ್ಲಿಸಿಎಂ ಮೇಲೆ ಸಿಬಿಐ ಕೇಸ್‌ ದಾಖಲಿಸಿದೆ. ಅದೇ ಮಾನದಂಡವನ್ನು ಯಡಿಯೂರಪ್ಪಗೂ ಅನ್ವಯ ಮಾಡಬೇಕು ಅಲ್ವಾ?' ಎಂದು ಪ್ರಶ್ನಿಸಿದರು. 'ಒಬ್ಬೊಬ್ಬರಿಗೆ ಒಂದೊಂದು ನ್ಯಾಯವೇ? ಇಲ್ಲಿ ಏನು ಮಾಡುತ್ತಾರೋ ನೋಡೋಣ' ಎನ್ನುವ ಮೂಲಕ ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಿದರು. ನಿಗದಿತ ಸ್ಥಳ ಬಿಟ್ಟು ಹುಲ್ಲಿನ ಮೇಲಿಳಿದ ಹೆಲಿಕಾಪ್ಟರ್‌ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಆಲೂರಿನ ಹೆಲಿಪ್ಯಾಡ್‌ನಲ್ಲಿನಿಗದಿತ ಸ್ಥಳ ಬಿಟ್ಟು ಹುಲ್ಲಿನ ಮೇಲೆ ಇಳಿದು ಕ್ಷಣಕಾಲ ಆತಂಕ ಸೃಷ್ಟಿಸಿತು. ಆಲೂರಿನ ಪಾಳ್ಯದ ದೇಗುಲ ಉದ್ಘಾಟನೆಗೆ ತೆರಳಲು ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿನಿಂದ ಮಧ್ಯಾಹ್ನ 12.40ಕ್ಕೆ ಆಲೂರಿನ ಹೆಲಿಪ್ಯಾಡ್‌ಗೆ ಆಗಮಿಸಿದರು. ಹೆಲಿಪ್ಯಾಡ್‌ನಲ್ಲಿ ಗುರುತು ಹಾಕಲಾಗಿತ್ತು. ಸುರಕ್ಷತೆ ದೃಷ್ಟಿಯಿಂದ ಅಗ್ನಿಶಾಮಕದಳವೂ ಆಗಮಿಸಿತ್ತು. ಹೆಲಿಪ್ಯಾಡ್‌ ಸುತ್ತ ಧೂಳು ಮೇಲೆಳದಂತೆ ಟ್ಯಾಂಕರ್‌ ಮೂಲಕ ನೀರನ್ನು ಹಾಕಲಾಗಿತ್ತು. ಇಷ್ಟೆಲ್ಲ ಸುರಕ್ಷತೆ ನಡುವೆ ನಿಗದಿತ ಸ್ಥಳದಲ್ಲಿ ಇಳಿಯುವ ಬದಲು ಪಕ್ಕದ ಹುಲ್ಲಿನ ಮೇಲೆ ಹೆಲಿಕಾಪ್ಟರ್‌ ಇಳಿಯಿತು. ಇದನ್ನು ನೋಡಿದ ಸಾರ್ವಜನಿಕರು ಹೆಲಿಪ್ಯಾಡ್‌ ಬಿಟ್ಟು ಪಕ್ಕದಲ್ಲಿ ಇಳಿಯಿತಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/2JN4asS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...