ಕೊರಿಯಾ ಮಾಸ್ಟರ್ಸ್: ಕಿಡಂಬಿ ಶ್ರೀಕಾಂತ್, ಸಮೀರ್ ವರ್ಮಾ ಮುನ್ನಡೆ

ಗ್ವಾಂಗ್ಜು(ಕೊರಿಯಾ): ಭಾರತದ ಮುಂಚೂಣಿಯ ಶಟ್ಲ್ ಪಟುಗಳಾದ ಹಾಗೂ , ಪ್ರತಿಷ್ಠಿತ ಪುರುಷ ಸಿಂಗಲ್ಸ್ ವಿಭಾಗದಲ್ಲಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ. ಇನ್ನೊಂದೆಡೆ ಸೋಲಿನ ಆಘಾತ ಎದುರಿಸಿರುವ ಸೌರಭ್ ವರ್ಮಾ, ಕೂಟದಿಂದಲೇ ನಿರ್ಗಮನದ ಹಾದಿ ಹಿಡಿದಿದ್ದಾರೆ. ಬುಧವಾರ ನಡೆದ ಪುರುಷ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಆರನೇ ಶ್ರೇಯಾಂಕಿತರಾಗಿರುವ ಕಿಡಂಬಿ ಶ್ರೀಕಾಂತ್, ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್ ವಿರುದ್ಧ 21-18, 21-17ರ ಅಂತರದಲ್ಲಿ ನೇರ ಸೆಟ್‌ನಲ್ಲಿ ಗೆಲುವು ದಾಖಲಿಸಿ ಮುನ್ನಡೆದರು. ಮೊದಲ ಸುತ್ತಿನಲ್ಲಿ ಎದುರಾಳಿಯಿಂದ ನಿಕಟ ಪೈಪೋಟಿ ಎದುರಿಸಿದರೂ ಪ್ರಭಾವಿ ಆಟದ ಪ್ರದರ್ಶನ ನೀಡಿರುವ ಮಾಜಿ ನಂ.1 ಆಟಗಾರ ಶ್ರೀಕಾಂತ್, ಕೊನೆಗೂ 37 ನಿಮಿಷಗಳಲ್ಲೇ ಪಂದ್ಯ ವಶಪಡಿಸಿಕೊಂಡರು. ಇದೀಗ ನಡೆಯಲಿರುವ ದ್ವಿತೀಯ ಸುತ್ತಿನ ಹೋರಾಟದಲ್ಲಿ ಕಿಡಂಬಿ ಶ್ರೀಕಾಂತ್, ಜಪಾನ್‌ನ ಕೆಂಟ ಸುನೇಯಮಾ ಸವಾಲನ್ನು ಎದುರಿಸಲಿದ್ದಾರೆ. ಇನ್ನೊಂದೆಡೆ ಸಮೀರ್ ವರ್ಮಾ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ. ಎದುರಾಳಿ ಜಪಾನ್‌ನ ಕಝುಮಸ ಸಕಾಯಿ ಪಂದ್ಯದ ಅರ್ಧದಿಂದಲೇ ಹಿಂಜರಿದ ಪರಿಣಾಮ ಸಮೀರ್ ವರ್ಮಾ ಮುನ್ನಡೆದರು. ಈ ವೇಳೆಯಲ್ಲಿ ಸಮೀರ್ 11-8ರ ಅಂತರದ ಹಿನ್ನಡೆ ಅನುಭವಿಸಿದ್ದರು. ಸಮೀರ್ ಇದೀಗ ಎರಡನೇ ಸುತ್ತಿನ ಹೋರಾಟದಲ್ಲಿ ಡಾಂಗ್ಹುನ್ ಸವಾಲನ್ನು ಎದುರಿಸಲಿದ್ದಾರೆ. ಏತನ್ಮಧ್ಯೆ ಸ್ಥಳೀಯ ಫೇವರಿಟ್ ಕಿಮ್ ಡಾಂಗ್ಹುನ್ ವಿರುದ್ಧ ಕಠಿಣ ಹೋರಾಟದ ಬಳಿಕ 21-13, 12-21, 13-21ರ ಅಂತರದಲ್ಲಿ ಸೋಲೊಪ್ಪಿಕೊಂಡ ಸೌರಭ್ ವರ್ಮಾ ನಿರ್ಗಮನದ ಹಾದಿ ಹಿಡಿದರು. ಮೊದಲ ಸೆಟ್ ಗೆದ್ದರೂ ಅಂತಿಮ ಎರಡು ಗೇಮ್‌ಗಳಲ್ಲಿ ಹಿನ್ನಡೆ ಅನುಭವಿಸಿದ ಪರಿಣಾಮ ಹಿನ್ನಡೆ ಅನುಭವಿಸಬೇಕಾಯಿತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37w7umu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...