ಬೆಂಗಳೂರಿನ 4,000 ಸ್ಥಳಗಳಲ್ಲಿ ಉಚಿತ ವೈಫೈ ಸೇವೆ : ಅಶ್ವತ್ಥನಾರಾಯಣ್ ಭರವಸೆ

ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಶೀಘ್ರದಲ್ಲಿಯೇ ಹೈಸ್ಪೀಡ್‌ ಇಂಟರ್‌ನೆ ಉಚಿತವಾಗಿ ದೊರೆಯಲಿದೆ. ಬೆಂಗಳೂರಿನ 4,000 ಸ್ಥಳಗಳಲ್ಲಿ ಸಾರ್ವಜನಿಕರಿಗೆ ಉಚಿತ ವೈಪೈ ಅವಳವಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ತಿಳಿಸಿದರು. ಟೆಕ್ ಸಮ್ಮೇಳನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಉಚಿತ ಸ್ಪಾಟ್ ಬೇಕು ಎಂಬ ಬೇಡಿಕೆ ಇತ್ತು. ಹೀಗಾಗಿ, ಆಕ್ಟ್ ಎಂಬ ಕಂಪನಿ ಜತೆ ಒಪ್ಪಂದ ಮಾಡಿಕೊಂಡು ಪ್ರತಿ ದಿನ ಒಂದು ಗಂಟೆ ಉಚಿತ ಇಂಟರ್ನೆಟ್ ಒದಗಿಸಲಾಗುತ್ತದೆ ಎಂದರು. ಒಟ್ಟಾರೆ ಯೋಜನೆಗೆ 100 ಕೋಟಿ ರೂ. ವೆಚ್ಚವಾಗಲಿದ್ದು ಸಂಪೂರ್ಣ ವೆಚ್ಚವನ್ನು ಆಕ್ಟ್ ಕಂಪನಿಯೇ ಮಾಡಲಿದೆ. ಈ ವೈಫೈ ಟವರ್ ನಲ್ಲಿ ಸಿಸಿ ಟಿವಿ ಸೇರಿದಂತೆ ನಗರಾಭಿವೃದ್ಧಿಗೆ ಹಾಗೂ ಭದ್ರತೆ ಅಗತ್ಯವುರುವ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು. ಆಕ್ಟ್ ಕಂಪನಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯವನ್ನು ಬಿಬಿಎಂಪಿ ಹಾಗೂ ಸರ್ಕಾರ ನೀಡಲಿದ್ದು, ಮುಂದಿನ ಒಂಭತ್ತು ತಿಂಗಳಲ್ಲಿ ಯೋಜನೆ ಕಾಮಗಾರಿ ಮುಕ್ತಾಯವಾಗಿ ಸಾರ್ವಜನಿಕರಿಗೆ ಉಚಿತ ವೈಫೈಸಿಗಲಿದೆ ಎಂದರು.


from India & World News in Kannada | VK Polls https://ift.tt/3464RFA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...