ಹುಣಸೂರು: ನೆರೆ ಪರಿಹಾರಕ್ಕೆ ಪ್ರಕಾರ ಹೆಚ್ಚಾಗಿಯೇ ಪರಿಹಾರ ನೀಡಲಾಗಿದೆ ಎಂದು ಶ್ರೀರಾಮಲು ಅವರು ಹೇಳಿದ್ದಾರೆ. ಇದರ ಜೊತೆಗೆ ಭವಿಷ್ಯದ ಮುಖ್ಯಮಂತ್ರಿ ನಾನು ಎಂದು ಕೂಡ ಇದೇ ವೇಳೆ ಹೇಳಿದ್ದಾರೆ. ಹುಣಸೂರಲ್ಲಿ ಮಂಗಳವಾರ ಆಯೋಜಿಸ ಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಬಿ. , ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯವು ಕಾಡಿ ಬೇಡಿದ ನಂತರ ಕೇಂದ್ರ ಸರಕಾರ ಕೇವಲ 1200 ಕೋಟಿ ರೂ. ನೆರವು ನೀಡಿದೆ. ಇದು ರಾಜ್ಯಕ್ಕೆ ಮಾಡಿದ ಅನ್ಯಾಯವಲ್ಲವೇ ಎಂಬ ಪ್ರಶ್ನೆಗೆ, ''ಇದು ಎನ್‌ಡಿಆರ್‌ಎಫ್ ಪ್ರಕಾರ ಹೆಚ್ಚಾಗಿಯೇ ನೀಡಲಾಗಿದೆ. ರಾಜ್ಯ ಸರಕಾರವೇ 6 ಸಾವಿರ ಕೋಟಿಗೂ ಹೆಚ್ಚು ಪರಿಹಾರ ನೀಡಿದೆ,'' ಎಂದು ಸಮರ್ಥಿಸಿಕೊಂಡಿದ್ದಾರೆ. ಗೆದ್ದ 24 ಗಂಟೆಯೊಳಗೆ ಸಚಿವ ಸ್ಥಾನ: ಉಪಚುನಾವಣೆಗೆ ಸಂಬಂಧಿಸಿ ಮಾತನಾಡಿ, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದ 24 ಗಂಟೆಯೊಳಗೆ ಸಚಿವ ಸ್ಥಾನ ನೀಡುವುದು ಖಚಿತ. 15 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ ಮತ್ತೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಬಹುದು ಎಂದು ಸಿದ್ದರಾಮಯ್ಯ ಅವರು ಹಗಲು ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಈ ಚುನಾವಣೆಯಲ್ಲಿ ದೂಳೀಪಟವಾಗಿ ಬಿಜೆಪಿ ಮೇಲುಗೈ ಸಾಧಿಸುವುದು ಖಚಿತ ಎಂದರು. ಭವಿಷ್ಯದ ಮುಖ್ಯಮಂತ್ರಿ ನಾನು: ಇದೇ ವೇಳೆ, ಭವಿಷ್ಯದಲ್ಲಿ ನಾನು ಮುಖ್ಯಮಂತ್ರಿಯಾಗುವೆ. ನನಗೆ ವಯಸ್ಸಾಗಿಲ್ಲ. ಇನ್ನೂ ವಯಸ್ಸಿದೆ. ಸದ್ಯ ಬಿಎಎಸ್ ವೈ ಸಂಪುಟದಲ್ಲಿ ಅನುಭವ ಪಡೆಯುವೆ ಎಂದಿದ್ದಾರೆ. ಬಿಜೆಪಿಗೇ ಸುಮಲತಾ ಬೆಂಬಲ: ಮಂಡ್ಯ ಸಂಸದೆ ಅವರು ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ. ಈ ಸಂಬಂಧ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಸುಮಲತಾರ ಜತೆ ಮಾತುಕತೆ ನಡೆಸಿದ್ದಾರೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಸುಮಲತಾ ಅವರು ಈ ಭಾಗದ ಬಹುದೊಡ್ಡ ನಾಯಕಿ. ಯಾರಿಗೆ ಬೆಂಬಲ ನೀಡಬೇಕು ಎಂಬುದು ಅವರಿಗೆ ತಿಳಿದಿದೆ. ರಾಜ್ಯಮಟ್ಟದ ಮುಖಂಡರೂ ಕೂಡ ಅವರೊಂದಿಗೆ ಈ ಸಲುವಾಗಿ ಮಾತುಕತೆ ನಡೆಸಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದಾರೆ. ಆದರೆ ಸುಮಲತಾ ತಟಸ್ಥರಾಗಿದ್ದಾರೆ ಎಂಬುದು ಗಮನಾರ್ಹ ಸಂಗತಿ.
from India & World News in Kannada | VK Polls https://ift.tt/344wJdt